ಉಪ್ಪಿನಂಗಡಿ: ಇತ್ತೀಚೆಗೆ ನಿಧನರಾದ ಬೇಳ್ಪಾಡಿಗುತ್ತು, ಪರಾರಿ ಯಜಮಾನ ಜನಾರ್ದನ ರೈ ಅವರ ಉತ್ತರಕ್ರಿಯೆ ಅ.19 ರಂದು ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ ದೇಸ್ಥಾನದ ನೇತ್ರಾವತಿ ಸಭಾಭವನದಲ್ಲಿ ನಡೆಯಿತು.
ಪ್ರಶಾಂತ ರೈ ಮನಳಿಕೆ ಮಾತನಾಡಿ, ಜನಾರ್ದನ ರೈಯವರು ಆದರ್ಶ ಕೃಷಿಕರಾಗಿ ಸಮಾಜವನ್ನು ಹಾಗೂ ಕುಟುಂಬದರೊಂದಿಗೆ ಆತ್ಮೀಯರಾಗಿದ್ದರು. ಎಲ್ಲರೊಂದಿಗೆ ಪ್ರೀತಿಯಿಂದ ಬೆರೆಯುತ್ತಿದ್ದರು. ಅಲ್ಲದೆ, ಬೆಳ್ಪಾಡಿ ಹಾಗೂ ಪರಾರಿಗುತ್ತಿನ ಯಜಮಾನರಾಗಿ ಪೂಂಜಾ ದೈವಸ್ಥಾನದ ಪದಾಧಿಕಾರಿಯಾಗಿ, ಸಾಮಾಜಿಕ, ಧಾರ್ಮಿಕ ಕ್ಷೇತ್ರಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿದ್ದರು ಎಂದರು.
ಈ ಸಂದರ್ಭದಲ್ಲಿ ಪುಣಚ್ಚ ದೇವಳದ ಆಡಳಿತ ಸಮಿತಿ ಅಧ್ಯಕ್ಷ ಮಾರಪ್ಪ ಶೆಟ್ಟಿ ಬೈಲುಗುತ್ತು, ಪುತ್ತೂರು ತಾಲೂಕು ಬಂಟರ ಸಂಘದ ಮಾಜಿ ಅಧ್ಯಕ್ಷ ದಯಾನಂದ ರೈ ಮನಳಿಕೆಗುತ್ತು, ಕರುಣಾಕರ ರೈ ಪರಾರಿಗುತ್ತು, ರಾಧಕೃಷ್ಣ ರೈ ಪರಾರಿಗುತ್ತು, ಸುಧಾಕರ ರೈ ಪರಾರಿಗುತ್ತು, ಮೋಹನ್‌ದಾಸ್ ರೈ ಪರಾರಿಗುತ್ತು, ಪವಿತ್ರ ರೈ ಪರಾರಿಗುತ್ತು, ರೂಪ ರೈ, ಸುಲೋಚನ ರೈ, ಕುಟುಂಬಸ್ಥರು, ಬಂಧು ಮಿತ್ರರು ಹಾಗೂ ಗಣ್ಯರು ಪಾಲ್ಗೊಂಡಿದ್ದರು.
ಜನರ್ದಾನ ರೈ ಅವರ ಪುತ್ರ ಗಣೇಶ್ ರೈ, ಪುತ್ರಿಯರಾದ ಶಕಿಲ ರೈ, ಪ್ರಮೀಳ ಶೆಟ್ಟಿ, ಸೊಸೆ ಅನುಪಮ ರೈ, ಅಳಿಯಂದಿರಾದ ಜಯರಾಮ ರೈ, ರವೀಂದ್ರ ರೈ ಮತ್ತು ಮೊಮ್ಮಕ್ಕಳು ಉಪಸ್ಥಿತರಿದ್ದರು.