ಕಬಡ್ಡಿ: ಶ್ರೀ ರಾಮಕುಂಜೇಶ್ವರ ಕನ್ನಡ ಮಾಧ್ಯಮ ಪ್ರೌಢಶಾಲೆಯ ಬಾಲಕಿಯರ ತಂಡಕ್ಕೆ ’ಜಲಂಧರ ರೈ’ ಟ್ರೋಫಿ

0

ರಾಮಕುಂಜ: ಸಾರ್ವಜನಿಕ ಶ್ರೀ ಗಣೇಶ ಸೇವಾ ಸಮಿತಿ, ಶ್ರೀ ಗಣೇಶ ಭಜನಾ ಮಂದಿರ, ಬೀರಿ-ಕೋಟೆಕಾರ್ ಇದರ ಆಶ್ರಯದಲ್ಲಿ ಆನಂದಾಶ್ರಮ ಹಳೆ ವಿದ್ಯಾರ್ಥಿ ಸಂಘ ಮತ್ತು ಜಲಂಧರ ರೈ ಇವರ ಹಿತೈಷಿಗಳ ಸಹಕಾರದೊಂದಿಗೆ ಜಿಲ್ಲಾ ಮಟ್ಟದ ಪ್ರೌಢಶಾಲಾ ವಿಭಾಗದ ಬಾಲಕ ಬಾಲಕಿಯರ ಕಬಡ್ಡಿ ಪಂದ್ಯಾಟ ಜರಗಿತು.


ಈ ಪಂದ್ಯಾಟದಲ್ಲಿ ಶ್ರೀ ರಾಮಕುಂಜೇಶ್ವರ ಕನ್ನಡ ಮಾಧ್ಯಮ ಪ್ರೌಢಶಾಲೆಯ ಬಾಲಕಿಯರ ತಂಡ ಪ್ರಥಮ ಸ್ಥಾನ ಪಡೆದುಕೊಂಡಿದೆ. ಬೆಸ್ಟ್ ರೈಡರ್ ಆಗಿ ದೀಕ್ಷಾ ಎಸ್., ಬೆಸ್ಟ್ ಡಿಫೆಂಡರ್ ಆಗಿ ತನುಜಾ ಅಪ್ಪಸಾಬ ತಳವಾರ್ ಹಾಗೂ ಪಂದ್ಯಾಟದ ಉತ್ತಮ ಆಟಗಾರ್ತಿಯಾಗಿ ರಮ್ಯಾ ಕೆ.ಎಸ್. ಪ್ರಶಸ್ತಿ ಪಡೆದುಕೊಂಡರು. ವಿದ್ಯಾರ್ಥಿಗಳಿಗೆ ಮಾಧವ ಬಿ.ಕೆ., ಜಸ್ವಂತ್ ಹಾಗೂ ಮಂಜುನಾಥ್ ತರಬೇತಿ ನೀಡಿದ್ದರು. ಮುಖ್ಯಗುರು ಸತೀಶ್ ಭಟ್ ಹಾಗೂ ದೈಹಿಕ ಶಿಕ್ಷಣ ಶಿಕ್ಷಕಿ ಪ್ರಫುಲ್ಲಾ ರೈ ಇವರು ಮಾರ್ಗದರ್ಶನ ನೀಡಿದ್ದರು.

LEAVE A REPLY

Please enter your comment!
Please enter your name here