ಕೋಡಿಂಬಾಡಿ, ಬೆಳ್ಳಿಪ್ಪಾಡಿ, ನೆಕ್ಕಿಲಾಡಿಯಲ್ಲಿ ಮೊಬೈಲ್ ಫೋನ್ ಗ್ರಾಹಕರ ಪರದಾಟ

0

ಪುತ್ತೂರು: ನೆಟ್ವರ್ಕ್ ಸಮಸ್ಯೆಯಿಂದಾಗಿ ಕೋಡಿಂಬಾಡಿ, ಬೆಳ್ಳಿಪ್ಪಾಡಿ ಮತ್ತು ನೆಕ್ಕಿಲಾಡಿ ಗ್ರಾಮಸ್ಥರು ಹಲವು ದಿನಗಳಿಂದ ಪರದಾಡುವಂತಾಗಿದೆ.


ಸರಕಾರದ ಅಧೀನದಲ್ಲಿರುವ ಬಿ.ಎಸ್.ಎನ್.ಎಲ್. ಈ ಪರಿಸರದಲ್ಲಿ ಅದೆಷ್ಟೋ ವರ್ಷಗಳ ಹಿಂದೆಯೇ ತನ್ನ ಅಸ್ತಿತ್ವ ಕಳೆದುಕೊಂಡಿತ್ತು. ಜಿಯೋ ಸಂಸ್ಥೆಯ ನೆಟ್ವರ್ಕ್ ಹಲವು ಸಮಯಗಳಿಂದ ಜೀವ ಕಳೆದುಕೊಂಡಿದೆ. ಇದ್ದ ನೆಟ್ವರ್ಕ್ ಪೈಕಿ ಏರ್ ಟೆಲ್ ಉತ್ತಮವಾಗಿತ್ತು. ಈಗ ಅದೂ ಕೈ ಕೊಡಲಾರಂಭಿಸಿದ್ದು ಗ್ರಾಹಕರು ಕಂಗಾಲಾಗಿದ್ದಾರೆ.


ಪರಸ್ಪರ ಸಂಪರ್ಕ ವ್ಯವಸ್ಥೆಗೆ ಮಾತ್ರವಲ್ಲದೆ ಇವತ್ತಿನ ಡಿಜಿಟಲ್ ಇಂಡಿಯಾದಲ್ಲಿ ಪಾವತಿ ವ್ಯವಸ್ಥೆ ಹಾಗೂ ತುರ್ತು ಸಂದೇಶ ರವಾನೆಗೂ ನೆಟ್ವರ್ಕ್ ಬೇಕಿದೆ. ಗ್ರಾಮೀಣ ಪ್ರದೇಶದಲ್ಲಿ ನೆಟ್ವರ್ಕ್ ಸಮಸ್ಯೆಯಿಂದ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೂ ತೊಂದರೆಯಾಗಿದೆ. ಸಂಬಂಧಪಟ್ಟವರು ತುರ್ತಾಗಿ ಇತ್ತ ಚಿತ್ತ ಹರಿಸಿ ಸಮಸ್ಯೆ ಪರಿಹರಿಸಬೇಕಿದೆ ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

LEAVE A REPLY

Please enter your comment!
Please enter your name here