ಬದುಕಿನ ಭರವಸೆಗಳನ್ನು ಚಿಗುರಿಸುವ ತಾಣ ‘ವಾಸ್ತು ಗಿಡ’ದ ಸನ್ನಿಧಿ

0

ವಾಸ್ತು ಗಿಡದ ಮೂಲಕ ನೊಂದವರಿಗೆ ಹೊಸ ಚೈತನ್ಯ: ಕೈಲಾರು ರಾಜಗೋಪಾಲ ಭಟ್


ಉಪ್ಪಿನಂಗಡಿ: ಬದುಕಿನಲ್ಲಿ ಎದುರಾಗುವ ನಾನಾ ಕಷ್ಟ ಕಾರ್ಪಣ್ಯಗಳಿಗೆ ಸಿಲುಕಿ, ಸಮಸ್ಯೆಗಳ ಸುಳಿಯಲ್ಲಿ ನೊಂದು ಬೆಂದು ಬದುಕೇ ಬೇಡ ಎಂದು ನಿರ್ಧಾರ ಮಾಡಿದ ಸಾವಿರಾರು ಮಂದಿಗೆ ಉಪ್ಪಿನಂಗಡಿಯಲ್ಲಿರುವ ‘ವಾಸ್ತು ಗಿಡದ ಸನ್ನಿಧಿ’ಯೆನ್ನುವುದು ಬದುಕಿನ ಹೊಸ ಭರವಸೆಗಳನ್ನು ಚಿಗುರಿಸುವ ನೆಚ್ಚಿನ ತಾಣವಾಗಿದ್ದು, ಜನರಲ್ಲಿ ಜೀವನೋತ್ಸಾಹ ತುಂಬಿ ಅವರ ಸಂತೃಪ್ತ ಜೀವನಕ್ಕೆ ಕಾರಣರಾದವರು ವಾಸ್ತು ಗಿಡವನ್ನು ಪೂಜಿಸಿ ಕೊಡುವ ಕೈಲಾರು ರಾಜಗೋಪಾಲ ಭಟ್ ಎಂದು, ವಾಸ್ತು ಗಿಡದಿಂದ ಪ್ರಯೋಜನ ಪಡೆದುಕೊಂಡ ಹಲವರು ಅನಿಸಿಕೆ ವ್ಯಕ್ತಪಡಿಸಿದ್ದಾರೆ.


ಉಪ್ಪಿನಂಗಡಿಯ ಬ್ಯಾಂಕ್ ರಸ್ತೆಯಲ್ಲಿ ‘ವಾಸ್ತು ಗಿಡ’ದ ಸನ್ನಿಧಿಯನ್ನು ಹೊಂದಿರುವ ಅವರ ಈ ಸಂಸ್ಥೆಯ ಮೂಲಕ ಅದೆಷ್ಟೋ ಕುಟುಂಬಗಳು ಜೀವನದಲ್ಲಿ ಮರು ಹುಟ್ಟು ಪಡೆದುಕೊಂಡಿದೆ. ಇವರು ಪೂಜಿಸಿ ಕೊಡುವ ವಾಸ್ತು ಗಿಡ ಸೋತು ಹೋದವರ ಬದುಕಿಗೆ ನವೋಲ್ಲಾಸ ತುಂಬಿಸಿದೆ. ಪ್ರಸಿದ್ಧ ಸ್ವಾಮೀಜಿಗಳು, ಪ್ರಮುಖ ರಾಜಕೀಯ ನಾಯಕರು ಸೇರಿದಂತೆ ಸಮಾಜದ ಎಲ್ಲಾ ಸ್ತರದವರು, ಇವರು ವಿಘ್ನ ನಿವಾರಕ ವಿನಾಯಕನ್ನು ಆರಾಧಿಸಿಕೊಡುವ ಈ ವಾಸ್ತು ಗಿಡವನ್ನು ಪಡೆದಿದ್ದಾರೆ. ರಾಜ್ಯ, ಹೊರ ರಾಜ್ಯಗಳಿಂದಲೂ ಇಲ್ಲಿಗೆ ಭೇಟಿ ನೀಡಿ ವಾಸ್ತು ಗಿಡವನ್ನು ಪಡೆದುಕೊಂಡು ನೆಮ್ಮದಿಯ ಬದುಕು ಕಂಡವರು ಅದೆಷ್ಟೋ ಮಂದಿಯಿದ್ದಾರೆ. ವಾಸ್ತು ಗಿಡ ಪಡೆದುಕೊಂಡವರು ತಮ್ಮ ಸಮಸ್ಯೆಗಳು ಪರಿಹಾರವಾಗಿರುವುದರ ಬಗ್ಗೆ ಕೃತಜ್ಞತಾ ಭಾವ ವ್ಯಕ್ತಪಡಿಸಿ ತನಗೆ ಕಳುಹಿಸಿಕೊಡುವ ಸಂದೇಶಗಳು, ಪತ್ರಗಳೇ ಇದಕ್ಕೆ ಸಾಕ್ಷಿ ಎನ್ನುತ್ತಾರೆ. ಕೈಲಾರು ರಾಜಗೋಪಾಲ ಭಟ್ ಅವರು, ಸನಾತನ ಸಂಸ್ಕೃತಿಯ ಭಾಗವಾಗಿರುವ ಪ್ರಕೃತಿಯಲ್ಲಿ ವಾಸ್ತು ಗಿಡಕ್ಕೆ ತನ್ನದೇ ಆದ ಪ್ರಾಮುಖ್ಯತೆ ಇದೆ. ನಾನು ಶ್ರೀ ಮಹಾಗಣಪತಿ ದೇವರನ್ನು ಆರಾಧಿಸಿ ವಾಸ್ತು ಗಿಡ ನೀಡುತ್ತಿರುವುದು ವ್ಯವಹಾರ ಲಾಭಕ್ಕಾಗಿ ಅಲ್ಲ. ಎಲ್ಲಾ ವರ್ಗದ ಜನರ ನೆಮ್ಮದಿಯ ಬದುಕಿಗೋಸ್ಕರ ಈ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದೇನೆ. ವಾಸ್ತು ಗಿಡದ ಮೂಲಕ ಅದೆಷ್ಟೋ ನೊಂದ ಮನಸ್ಸುಗಳಿಗೆ ಸಾಂತ್ವನ ನೀಡಿರುವ ತೃಪ್ತಿ ನನಗಿದೆ. ನಾನು ವಾಸ್ತುಗಿಡ ವಿತರಿಸಲು ಆರಂಭಿಸಿದ ಸಮಯದಲ್ಲೇ ಹಲವು ರಾಜ್ಯಗಳಿಂದ ಜನರು ಬಂದು ಗಿಡ ತೆಗೆದುಕೊಂಡು ಹೋಗಿದ್ದಾರೆ. ಅವರಿಗೆ ನೆಮ್ಮದಿಯ ಬದುಕು ಸಿಕ್ಕಿದೆ. ಅವರ ಬದುಕಿನಲ್ಲಿ ಬದಲಾವಣೆ ಕಂಡಿದ್ದರಿಂದ ವಾಸ್ತು ಗಿಡ ಪಡೆಯುವವರ ಸಂಖ್ಯೆ ಇನ್ನಷ್ಟು ಹೆಚ್ಚಿತ್ತು. ಮನಸ್ಸಿನಿಂದ ಹರಸಿ ಗಿಡ ಕೊಡುತ್ತಿರುವುದೇ ಯಶಸ್ಸಿಗೆ ಕಾರಣವಾಯಿತು ಎಂದು ಕೈಲಾರು ರಾಜಗೋಪಾಲ ಭಟ್ ಹೇಳಿದ್ದಾರೆ.


ವಾಸ್ತು ಗಿಡಕ್ಕೆ ಪ್ರತಿ ದಿನ ನೀರು ಹಾಕುವುದು ಅಗತ್ಯ. ಗಿಡದ ಮುಂದೆ 5 ನಿಮಿಷ ಶ್ರದ್ಧೆಯಿಂದ ಧಾನ್ಯ ಮಾಡಬೇಕು. ತಿಂಗಳಿಗೊಮ್ಮೆ ಶುದ್ಧ ನೀರಿನಿಂದ ಇದನ್ನು ಸ್ವಚ್ಛಗೊಳಿಸಬೇಕು ಹೀಗೆ ಕೆಲವು ನಿಯಮಗಳಿವೆ. ವಾಸ್ತು ಗಿಡ ಪಡೆದವರು ಅದನ್ನು ತಪ್ಪದೇ ಪಾಲಿಸಬೇಕು ಎನ್ನುತ್ತಾರೆ ಕೈಲಾರು ರಾಜಗೋಪಾಲ ಭಟ್ ಅವರು.

50 ಸಾವಿರಕ್ಕೂ ಅಧಿಕ ಮಂದಿಗೆ ನೆಮ್ಮದಿಯ ಬದುಕು
ಶ್ರೀ ಮಹಾಗಣಪತಿಯನ್ನು ಪೂಜಿಸಿಕೊಡುವ ಈ ವಾಸ್ತುಗಿಡವು ನಂಬಿದವರಿಗೆ ಇಂಬು ನೀಡುತ್ತದೆ. ವಾಸ್ತು ದೋಷಗಳು, ಹಣಕಾಸು, ಮಾನಸಿಕ ನೆಮ್ಮದಿ ದೊರೆಯುತ್ತದೆ. ಆಗಬೇಕಾದ ಶುಭ ಕಾರ್ಯಗಳು ಈಡೇರುತ್ತವೆ. ಯಾವುದೇ ದುಷ್ಕೃತ್ಯ, ಕುಕೃತ್ಯಗಳನ್ನು ಸಂಪೂರ್ಣವಾಗಿ ದೂರೀಕರಿಸಿ ನೆಮ್ಮದಿಯ ಜೀವನಕ್ಕೆ ಅವಕಾಶ ಕಲ್ಪಿಸುತ್ತದೆ. ಋಣಾತ್ಮಕ ಶಕ್ತಿಯನ್ನು ನಾಶಗೊಳಿಸಿ ಧನಾತ್ಮಕ ಶಕ್ತಿಯನ್ನು ತುಂಬುತ್ತದೆ. ಈಗಾಗಲೇ ವಾಸ್ತು ಗಿಡ ಪಡೆದು 50 ಸಾವಿರಕ್ಕೂ ಅಧಿಕ ಮಂದಿ ನೆಮ್ಮದಿಯ ಬದುಕನ್ನು ಕಂಡುಕೊಂಡಿದ್ದಾರೆ.
ಕೈಲಾರು ರಾಜಗೋಪಾಲ ಭಟ್, ‘ವಾಸ್ತು ಗಿಡ’ದ ಸನ್ನಿಧಿ, ಉಪ್ಪಿನಂಗಡಿ

LEAVE A REPLY

Please enter your comment!
Please enter your name here