ಮೈಸೂರಿನಲ್ಲಿ ಪುತ್ತೂರಿನ ಬಾಲ ಕಲಾವಿದೆ ಸೋನಿಕಾ ಜನಾರ್ಧನ್‌ರಿಗೆ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದಿಂದ ಅಭಿನಂದನೆ

0

ಪುತ್ತೂರು: ಮೈಸೂರು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ವತಿಯಿಂದ ದಸರಾ ವಸ್ತು ಪ್ರದರ್ಶನದ ಪಿ ಕಾಳಿಂಗ ರಾವ್ ಗಾನ ಮಂಟಪದಲ್ಲಿ ಮೈಸೂರಿನ ವಕೀಲರಾದ ಸುಂದರ್ ರಾಜ್ ಇವರ ನಿರ್ದೇಶನದಲ್ಲಿ ವಕೀಲರು ನಟಿಸಿದ ದತ್ತು ಮಕ್ಕಳ ಹಕ್ಕಿನ ಕುರಿತಾದ ಕಿರು ನಾಟಕ ಪ್ರದರ್ಶನ ನಡೆಯಿತು. ಈ ಸಂದರ್ಭದಲ್ಲಿ ಬಾಲ ಕಲಾವಿದೆ ಸೋನಿಕಾ ಜನಾರ್ಧನ್ ಭಾರತೀಯ ಸಂವಿಧಾನ ಪೀಠಿಕೆ ಮತ್ತು ಕಾನೂನು ಸೇವೆಗಳ ಪ್ರಾಧಿಕಾರದ ಕುರಿತು ಗಾಯನ ವನ್ನು ನಡೆಸಿ ಕೊಟ್ಟು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಧೀಶರು ಸೇರಿದಂತೆ ನೆರೆದವರ ಮೆಚ್ಚುಗೆ ಪಡೆದರು. ಮೈಸೂರಿನ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರು, ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಧೀಶರಾದ ಉಷಾರಾಣಿ ಅವರು ಬಾಲ ಪ್ರತಿಭೆಯನ್ನ ಅಭಿನಂದಿಸಿದರು. ಸೋನಿಕರವರು ಎಪಿಪಿ ಜನಾರ್ದನ್ ಪುತ್ತೂರು ಮತ್ತು ಪ್ರಮೀಳಾ ಜನಾರ್ದನ್‌ರವರು ಪುತ್ರಿಯಾಗಿದ್ದಾರೆ.


ಈ ಸಂದರ್ಭದಲ್ಲಿ 5ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಧೀಶರು, ಜಿಲ್ಲಾ ಮೇಲ್ವಿಚಾರಣ ಸಮಿತಿ ಅಧ್ಯಕ್ಷರಾದ ರೂಪ, ಜಿಲ್ಲಾ ಕಾನೂನು ಸೇವೆಗಳ ಪ್ರಧಿಕಾರದ ಸದಸ್ಯ ಕಾರ್ಯದರ್ಶಿ ಅಮರ್‌ನಾಥ್ ಸೇರಿದಂತೆ ಮೈಸೂರು ನಗರದ ಎಲ್ಲಾ ನ್ಯಾಯಾಲಯದ ನ್ಯಾಯಧೀಶರುಗಳು, ವಕೀಲರ ಸಂಘದ ಪದಾಧಿಕಾರಿಗಳು, ಹಿರಿಯ ಸಮಿತಿ ಸದಸ್ಯ ಶಿವ ಸ್ವಾಮಿ, ನಾಟಕ ನಿರ್ದೇಶಕರು ವಕೀಲರಾದ ಸುಂದರ್ ರಾಜ್, ದಸರಾ ವಸ್ತು ಪ್ರದರ್ಶನ ಪ್ರಾಧಿಕಾರ ಸಾಂಸ್ಕೃತಿಕ ಸಮಿತಿ ಅಧ್ಯಕ್ಷ ಮಲ್ಲಿಕಾರ್ಜುನ ಸ್ವಾಮಿ, ಉಪಾಧ್ಯಕ್ಷ ರಾಜೇಶ್ ಗೌಡ, ಸದಸ್ಯರುಗಳಾದ ಮಹೇಶ್,ಮಲ್ಲೇಶ್ ಸೇರಿದಂತೆ ವಿವಿಧ ಸಮಿತಿ ಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು. ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಿರಿಯ ಸಿವಿಲ್ ನ್ಯಾಯಧೀಶರಾದ ಅಮರ್ ನಾಥ್ ವಂದಿಸಿದರು.ವಸ್ತು ಪ್ರದರ್ಶನ ಸಾಂಸ್ಕೃತಿಕ ಸಮಿತಿ ಸದಸ್ಯರಾದ ಅಜೇಯ್ ಶಾಸ್ತ್ರೀ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here