ಮಂಗಳೂರಿನಲ್ಲಿ ಪುತ್ತೂರಿನ ಆದರ್ಶ ವಿವಿಧೋದ್ದೇಶ ಸಹಕಾರ ಸಂಘ ಉದ್ಘಾಟನೆ

0

ಆಡಳಿತ ಮಂಡಳಿ, ಸಿಬ್ಬಂದಿಗಳ ಕಾರ್ಯಕ್ಷಮತೆ ಸಂಸ್ಥೆಯ ಅಭಿವೃದ್ದಿಗೆ ಪೂರಕ – ಡಾ.ಎ ಜೆ ಶೆಟ್ಟಿ
25ನೇ ವರ್ಷಕ್ಕೆ 25 ಶಾಖೆಗಳಾಗಿ ಬಲಿಷ್ಠ ಸಂಘವಾಗಿ ಮೂಡಿ ಬರಲಿ – ಡಾ.ಎಮ್ ಎನ್ ರಾಜೇಂದ್ರ ಕುಮಾರ್
ನಮ್ಮದೇ ಬ್ಯಾಂಕ್ ಅನ್ನುವ ರೀತಿಯಲ್ಲಿ ಸಹಕಾರ ನೀಡುವೆ – ವೇದವ್ಯಾಸ ಕಾಮತ್
ಎಲ್ಲಾ ಕ್ಷೇತ್ರದಲ್ಲಿ‌ ಕೆಲಸ ಮಾಡಿ,ಎಲ್ಲರಿಗೂ ಸಾಮಾಜಿಕ ನ್ಯಾಯ ಕೊಟ್ಟವರು – ಐವನ್ ಡಿಸೋಜ
ನಂಬಿಕೆಯಲ್ಲಿ ಕೆಲಸ ಮಾಡುವುದು ಸಹಕಾರ ಸಂಘ ಮಾತ್ರ – ಮಂಜುನಾಥ ಭಂಡಾರಿ
25 ವರ್ಷ ಪೂರೈಸುವುದರೊಳಗೆ ಕೇಂದ್ರ ಕಚೇರಿ‌ ಕಟ್ಟಡ ಪೂರ್ಣ – ಕೆ ಸೀತಾರಾಮ ರೈ

ಪುತ್ತೂರು : ಮೊದಲ ಶಾಖೆಯನ್ನು ಪುತ್ತೂರಿನಲ್ಲಿ ಉದ್ಘಾಟನೆ ಮಾಡಿ ಇವತ್ತು 16ನೇ ಶಾಖೆಯನ್ನೂ ಉದ್ಘಾಟಿಸುವ ಭಾಗ್ಯ ನನಗೆ ಒದಗಿರುವುದು ಸಂತೋಷ. ಇದು ಆರಂಭದಿಂದ ಇಲ್ಲಿನ ತನಕದ 15 ಶಾಖೆಯು ಬಹಳ‌ ಒಳ್ಳೆಯ ರೀತಿಯಲ್ಲಿ ನಡೆದು‌ಕೊಂಡು ಬಂದಿದೆ ಎಂದರ್ಥ‌. ಇದು ಸಂಸ್ಥೆಯ ಆಡಳಿತ ಮಂಡಳಿ ಮತ್ತು ಸಿಬ್ಬಂದಿಗಳ‌ ಕಾರ್ಯಕ್ಷಮತೆಯಿಂದ ಆಗಿದೆ ಎಂದು ಎ.ಜೆ ಹಾಸ್ಪಿಟಲ್ ಮತ್ತು ರೀಸರ್ಚ್ ಸೆಂಟರ್‌ನ ಅಧ್ಯಕ್ಷ ಡಾ. ಎ.ಎ.ಜೆ.ಶೆಟ್ಟಿ ಅವರು ಹೇಳಿದರು.


ದಕ್ಷಿಣ ಕನ್ನಡ ಜಿಲ್ಲೆಯ ಗ್ರಾಮೀಣ ಭಾಗಗಳಾದ ಪುತ್ತೂರು, ಸುಳ್ಯ, ಸುಬ್ರಹ್ಮಣ್ಯ, ವಿಟ್ಲ, ಉಜಿರೆ, ಕಡಬ, ಸವಣೂರು, ಸಾಲೆತ್ತೂರು, ಕುಂಬ್ರ, ಬೆಳ್ಳಾರೆ, ಪಂಜ, ಬೊಳುವಾರು, ಮಡಂತ್ಯಾರು, ಬಿ.ಸಿ.ರೋಡ್ ಮತ್ತು ಕಲ್ಲಡ್ಕ ಪ್ರದೇಶಗಳಲ್ಲಿ ಕಾರ್ಯಾಚರಿಸುತ್ತಿರುವ ಆದರ್ಶ ವಿವಿಧೋದ್ದೇಶ ಸಹಕಾರ ಸಂಘದ ಮಂಗಳೂರಿನ ಪಾಂಡೇಶ್ವರದ ಎ.ಬಿ.ಶೆಟ್ಟಿ ವೃತ್ತದ ಪೆರೀಡಿಯಂ ಪ್ಲಾಸಾದ ನೆಲ ಮಹಡಿಯಲ್ಲಿ 16ನೇ ಶಾಖೆಯನ್ನು ಅ.25ರಂದು ಉದ್ಘಾಟಿಸಿ ಮಾತನಾಡಿದರು. ಈ ಸಂಸ್ಥೆ ಎಷ್ಟೋ ಜನರಿಗೆ ಸಾಲ ನೀಡಿ ಉತ್ತಮ ಕೆಲಸ ಮಾಡುತ್ತಿದೆ. ಉದ್ಯಮಿಗಳು, ಸಹಕಾರಿ, ಕೃಷಿಕರು ಆಗಿದ್ದು ಒಳ್ಳೆಯ ಅನುಭವ ಇದ್ದವರಿಂದ ಸಂಸ್ಥೆ ಇಷ್ಟು ಬೆಳವಣಿಗೆ ಕಂಡಿದೆ. ಇದರಲ್ಲಿ ಸಂಘದ ಆಡಳಿತ ಮಂಡಳಿ, ಸಿಬ್ಬಂದಿಗಳ‌ ಕಾರ್ಯ ಕ್ಷಮತೆಯೂ ಇದೆ.‌ ಮುಂದೆಯೂ ಒಳ್ಳೆಯ ರೀತಿಯಲ್ಲಿ ಸಂಸ್ಥೆ ಉತ್ತಮವಾಗಿ ಬೆಳೆಯಲಿ. ಇದರ ಜೊತೆಗೆ ಹಲವು ಶಾಖೆಗಳು‌ ಮುಂದಕ್ಕೆ ಬೆಳೆಯಲಿ ಎಂದು ಹೇಳಿ ಶುಭ ಹಾರೈಸಿದರು.

25ನೇ ವರ್ಷಕ್ಕೆ 25 ಶಾಖೆಗಳಾಗಿ ಬಲಿಷ್ಠ ಸಂಘವಾಗಿ ಮೂಡಿ ಬರಲಿ
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಅಧ್ಯಕ್ಷ ಡಾ. ಎಮ್.ಎನ್.ರಾಜೇಂದ್ರ ಕುಮಾರ್ ಅವರು ಮಾತನಾಡಿ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆ ಬ್ಯಾಂಕ್ ಗಳ ತವರೂರು. ಆದರೆ ಇವತ್ತು ಸಿಂಡಿಕೇಟ್, ವಿಜಯ, ಕಾರ್ಪೋರೇಶನ್ ಬ್ಯಾಂಕ್ ಗಳು ವೀಲಿನಗೊಂಡು ಸಂಕುಚಿತವಾಗುತ್ತಿವೆ. ಅದರೆ ಸಹಕಾರಿಗಳಾದ ನಾವು ವಿಕಸನಗೊಂಡು‌ ಜನರ ಬಳಿ‌ ಹೋಗುತ್ತಿದ್ದೇವೆ.‌ ನಾವು ಹಳ್ಳಿಗೆ ಹೋಗಿ ಶಾಖೆಗಳನ್ನು ತೆರೆಯುತ್ತಿದ್ದೇವೆ. ಆದರೆ ರಾಷ್ಟ್ರೀಯ ಬ್ಯಾಂಕ್ ಗಳಲ್ಲಿ ಪಾಪದವರು ಹೋದಾಗ ಭಾಷೆ ಬಾರದವರು ಸಂಸ್ಕೃತಿ ಅರಿಯದವರು ಇದರಿಂದಾಗಿ ಇವತ್ತು ಅತಿ ಶೀಘ್ರದಲ್ಲಿ 3 ಬ್ಯಾಂಕ್ ವಿಲೀನಗೊಂಡು ಒಂದೇ ಬ್ಯಾಂಕ್ ಆಗಲಿದೆ ಎಂದ ಅವರು ಇವತ್ತು ಜನರಿಗೆ ಎಕಚಿತ್ತದಲ್ಲಿ ಸೇವೆ ನೀಡಿದಾಗ ಆರ್ಥಿಕ ಉದ್ಯಮ ಯಶಸ್ವಿಯಾಗುತ್ತದೆ. ಈ ನಿಟ್ಟಿನಲ್ಲಿ ಸಹಕಾರ ಸಂಘ ಉತ್ತಮ ಕೆಲಸ ಮಾಡುತ್ತಿದ್ದೆ.‌ ಇದಕ್ಕೆ ಪೂರಕವಾಗಿ 23 ವರ್ಷ ದಾಟಿದ ಆದರ್ಶ ವಿವಿಧೋದ್ದೇಶ ಸಹಕಾರಿ ಸಂಘ ಉತ್ತಮ ಕೆಲಸ ಮಾಡುತ್ತಿದೆ. ಮುಂದೆ ಸಂಘಕ್ಕೆ 25 ವರ್ಷ ಆಗುವಾಗ 25 ಶಾಖೆಗಳನ್ನು ತೆರಯುವಂತಾಗಲಿ ಅದೇ ರೀತಿ‌ 25 ವರ್ಷಕ್ಕೆ ಸಂಘ 250 ಕೋಟಿ ಠೇವಣಿ ಸಂಗ್ರಹವಾಗುವ ಮೂಲಕ ಸಂಘ ಬಲಿಷ್ಠವಾದ ಸಹಕಾರಿ ಸಂಘವಾಗಿ ಮೂಡಿ ಬರಲಿ ಎಂದು ಹಾರೈಸಿದರು.

ನಮ್ಮದೇ ಬ್ಯಾಂಕ್ ಅನ್ನುವ ರೀತಿಯಲ್ಲಿ ಸಹಕಾರ ನೀಡುವೆ
ಭದ್ರತಾ ಕೊಠಡಿ ಉದ್ಘಾಟಿಸಿದ ಮಂಗಳೂರು ನಗರ ದಕ್ಷಿಣ ಕ್ಷೇತ್ರದ ಶಾಸಕ ಡಿ.ವೇದವ್ಯಾಸ ಕಾಮತ್ ಅವರು ಮಾತನಾಡಿ ಆದರ್ಶ ಸಹಕಾರಿ ಸಂಘವು ಮಂಗಳೂರಿನ ಪಾಂಡೇಶ್ವರದಲ್ಲಿ ಯಶಸ್ವಿಯಾಗಿ ನಡೆಯಲಿ. ಅದ್ಭುತ ಸಾಧನೆ ಮಾಡಲಿ. ಡಾ. ಎ ಜೆ ಶೆಟ್ಟಿ ಮತ್ತು ಡಾ ಎಮ್ ಎನ್ ರಾಜೇಂದ್ರ ಕುಮಾರ್ ಅವರ ಕೈಗುಣ ಉತ್ತಮ.
ಸಿಬ್ಬಂದಿ ವರ್ಗದ ನಗುಮೊಗದ ಒಳ್ಳೆಯ ಸೇವೆ ಬ್ಯಾಂಕ್ ನ ಅಭಿವೃದ್ದಿಗೆ ಸಹಕಾರವಾಗಲಿದೆ. ಭದ್ರತೆ, ಲಾಭಾಂಶ, ಸೇವೆಯೊಂದಿಗೆ ಸಂಘ ಉತ್ತಮ ವ್ಯವಹಾರ ಮಾಡುತ್ತಾ ಆದರ್ಶ ಸಹಕಾರಿ ಸಂಘ ಬಹಳ ಯಶಸ್ವಿಗಾಗಿ ಕೆಲಸ ಮಾಡುತ್ತಿದೆ. ಎಲ್ಲಾ ಬಂಧುಗಳಿಗೆ ನಿಮ್ಮ ನಗುಮುಗದ ಸೇವೆ ಇನ್ನಷ್ಟು ಜಾಸ್ತಿ ಸಿಗಲಿ. ನಮ್ಮದೇ ಬ್ಯಾಂಕ್ ಅನ್ನುವ ರೀತಿಯಲ್ಲಿ‌ ಸಹಕಾರ ನೀಡುತ್ತೇನೆ ಎಂದು ಹೇಳಿದರು.

ಎಲ್ಲಾ ಕ್ಷೇತ್ರದಲ್ಲಿ‌ ಕೆಲಸ ಮಾಡಿ,ಎಲ್ಲರಿಗೂ ಸಾಮಾಜಿಕ ನ್ಯಾಯ ಕೊಟ್ಟವರು
ಪ್ರಥಮ ಠೇವಣಿಪತ್ರ ಬಿಡುಗಡೆ ಮಾಡಿದ ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಅವರು ಮಾತನಾಡಿ, ಒಬ್ಬ ಕಠಿಣ ಪರಿಶ್ರಮ ಮಾಡಿದರೆ ಎಷ್ಟು ಎತ್ತರಕ್ಕೆ ಬೆಳಯವಹುದು ಎಂಬುದಕ್ಕೆ ಸೀತಾರಾಮ ರೈ ಮಾದರಿ. ಅವರು ಎಲ್ಲಾ ಕ್ಷೇತ್ರದಲ್ಲಿ‌ ಕೆಲಸ ಮಾಡಿ ಬೆಳೆದಿದ್ದಾರೆ. ಎಲ್ಲರಿಗೂ ಸಾಮಾಜಿಕ ನ್ಯಾಯ ಕೊಟ್ಟಿದ್ದಾರೆ. ರೈತರಿಗೆ ಮತ್ತು ಸಾಮಾನ್ಯರ ಜೀವನದಲ್ಲಿ ಸಹಕಾರಿ ಸಂಸ್ಥೆ ಇಲ್ಲದೇ ಇರುತ್ತಿದ್ದರೆ ನಮ್ಮ ಸಾಮಾಜಿಕ ಆರ್ಥಿಕ ಪರಿಸ್ಥಿತಿ ಏನಾಗುತ್ತಿತ್ತು ಎಂಬ ಚಿಂತನೆ ಮಾಡಬೇಕು. ಸಹಕಾರಿ ಸಂಸ್ಥೆಯಲ್ಲಿ‌ ಕೆಲಸ ಮಾಡಿದವರು ಜೀವನದಲ್ಲಿ ಯಶಸ್ಸು ಮತ್ತು ಸಮಾಜಕ್ಕೆ ಮಾದರಿಯಾಗುತ್ತಾರೆ. ಈ ಸಂಘ ನಮ್ಮ ಸಂಘ ಎಂದು ಗುರುತಿಸಿ ನಾವು ಸಹಕಾರ ನೀಡಬೇಕೆಂದರು.

ನಂಬಿಕೆಯಲ್ಲಿ ಕೆಲಸ ಮಾಡುವುದು ಸಹಕಾರ ಸಂಘ ಮಾತ್ರ
ಗಣಕಯಂತ್ರ ಉದ್ಘಾಟಿಸಿದ ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ ಅವರು ಮಾತನಾಡಿ, ನನಗೆ ಸೀತಾರಾಮ ರೈ ಅವರು ಆದರ್ಶ ವ್ಯಕ್ತಿ. ಸಹಕಾರಿ ರಂಗದಲ್ಲಿ ಅವರ ಕೊಡುಗೆ ಅಪಾರ. ನಾವು ಬ್ಯಾಂಕ್ ಗಳಿಗಿಂತ ಹೆಚ್ಚು ಕೋ ಓಪರೇಟಿವ್ ಅವಲಂಬಿತಾಗಿದ್ದರಿಂದ ಕೊರೊನಾ ಬಂದಾಗ ವಿಶ್ವದಲ್ಲಿ ಅಲ್ಲೋಲ ಕಲ್ಲೋಲ ಆದರೂ ಭಾರತದಲ್ಲಿ ಅದರ ಎಫೆಕ್ಟ್ ಗೊತ್ತಾಗಿಲ್ಲ. ಇವತ್ತು ಬ್ಯಾಂಕ್ ಪೇಪರ್ ವರ್ಕ್ ಮೇಲೆ ಕೆಲಸ ಮಾಡಿದರೆ ನಂಬಿಕೆ ಮೇಲೆ ಕೆಲಸ ಮಾಡುವುದು ಸಹಕಾರ ಸಂಘ. ಹಾಗಾಗಿ ಸಹಕಾರ ಸಂಘ ಜನಸಾಮಾನ್ಯರ ಪಾಲಿಗೆ ಅಗತ್ಯವಾಗಿದೆ‌. ಈ ನಿಟ್ಟಿನಲ್ಲಿ ಸಹಕಾರಿ ರಂಗದಲ್ಲಿ ಸೀತಾರಾಮ ರೈ ಅವರ ಕೊಡುಗೆ ಇನ್ನೂ ನಿರಂತರ ಮುಂದುವರಿಯಲಿ ಎಂದರು.

25 ವರ್ಷ ಪೂರೈಸುವುದರೊಳಗೆ ಕೇಂದ್ರ ಕಚೇರಿ‌ ಕಟ್ಟಡ ಪೂರ್ಣ
ಆದರ್ಶ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷರಾಗಿರುವ ಸಹಕಾರ ರತ್ನ ಕೆ ಸೀತಾರಾಮ ರೈ ಸವಣೂರು ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಸಹಕಾರಿ ಕ್ಷೇತ್ರದಲ್ಲಿ ಸಾಮಾಜಿಕ ಚಟುವಟಿಕೆಯಲ್ಲೂ ಸಂಘ ಕೆಲಸವ ಮಾಡುತ್ತಿದೆ. ಸಂಘವು ದಾಖಲೆಯ ವ್ಯವಹಾರ ನಡೆಸಿ ರೂ. 2.1 ಕೋಟಿಗೂ ಮಿಕ್ಕಿ ಲಾಭಾಂಶಗಳಿಸಿದೆ. ಸಂಘದ ಆರಂಭದಿಂದಲೂ ಸದಸ್ಯರಿಗೆ ಡಿವಿಡೆಂಡ್ ನೀಡಿದ ಹೆಗ್ಗಳಿಕೆಯೂ ಇದೆ. ಇದರ ಜೊತೆಗೆ ಸಿಬ್ಬಂದಿಗಳಿಗೆ ಬೋನಸ್ ಕೂಡಾ ನೀಡುತ್ತಿದೆ. ಸಾಮಾಜಿಕವಾಗಿ ಸಂಘದ ಶಾಖಾ ವ್ಯಾಪ್ತಿಯಲ್ಲಿ ಬರುವ ಸರಕಾರಿ ಶಾಲೆಯ 7 ರಿಂದ 10ನೇ ತಗತಿಯಲ್ಲಿ ಕಲಿಯುತ್ತಿರುವ ಬಡ ಪ್ರತಿಭಾವಂತ ಮಕ್ಕಳನ್ನು ಗುರುತಿಸಿ ವಿದ್ಯಾನಿಧಿ ಸಹಾಯಧನವಾಗಿ ನೀಡಿಕೊಂಡು ಬರುತ್ತಿದ್ದು, ಇಲ್ಲಿನ ತನಕ ಒಟ್ಟು 1545 ಮಕ್ಕಳಿಗೆ ರೂ.31,29,000 ಮೊತ್ತ ವಿತರಿಸಿದೆ. ಸಂಘದ ಕೇಂದ್ರ ಕಚೇರಿಗೆ ಸ್ವಂತ ಕಟ್ಟಡ ನಿರ್ಮಾಣ ಪ್ರಗತಿಯಲ್ಲಿದೆ. ಸಂಘಕ್ಕೆ 25 ವರ್ಷ ಪೂರೈಸುವುದರೊಳಗೆ ರೂ. 5.5 ಕೋಟಿ ವೆಚ್ಚದ ಕೇಂದ್ರ ಕಚೇರಿ ಕಟ್ಟಡ ನಿರ್ಮಾಣ ಪೂರ್ಣಗೊಳ್ಳಲಿದೆ ಎಂದ ಅವರು 2002ನೇ ಮಾ.11 ರಂದು ನಮ್ಮ ಸಂಘದ ಪ್ರಥಮ ಶಾಖೆಯನ್ನು ದಿ ಅಮರನಾಥ ಶೆಟ್ಟಿ ಮತ್ತು ಡಾ ಎ ಜೆ ಶೆಟ್ಟಿಯವರು ಉದ್ಘಾಟಿಸಿದರು. ಅಲ್ಲಿಂದ 23 ವರ್ಷದಲ್ಲಿ ಸಂಘ ಬೆಳೆದು ಈ ಮಟ್ಟಕ್ಕೆ ಬಂದಿದೆ. ನನಗೆ ಸಹಕಾರಿ ಕ್ಷೇತ್ರ ಬಹಳ ಇಷ್ಟ. ಮೊಳಹಳ್ಳಿ ಶಿವರಾಮ ಹಿಂದಿನ ಕಾಲದಲ್ಲಿ ಸಹಕಾರಿ ಪಿತಾಮಹರಾದರೆ ಇವತ್ತು ಡಾ. ಎಮ್ ಎನ್ ರಾಜೇಂದ್ರ ಕುಮಾರ್ ಅವರು‌ ಅವರ ಹಾದಿಯಲ್ಲೇ ನಡೆಯುತ್ತಿದ್ದಾರೆ. ನಾನು 69ನೇ ಇಸವಿಯಲ್ಲಿ ಎಸ್ ಸಿ ಡಿ‌ ಸಿ ಸಿ ಬ್ಯಾಂಕ್ ನಲ್ಲಿ 18 ವರ್ಷ ಸೇವೆ ಮಾಡಿದೆ. ರಾಜೇಂದ್ರ ಕುಮಾರ್ ಅವರು‌ 8 ವರ್ಷ ಸೇವೆ ಸಲ್ಲಿಸಿದರು. 1994ನೇ ಇಸವಿಯಲ್ಲಿ ರಾಜೇಂದ್ರ ಕುಮಾರ್ ಅಧ್ಯಕ್ಷ, ನಾನು ಉಪಾಧ್ಯಕ್ಷನಾಗಿ 6 ವರ್ಷ ಸೇವೆ ಸಲ್ಲಿಸಿದೆ. ಅಲ್ಲಿಂದ ಬಳಿಕ ಊರಿನಲ್ಲಿ ಸಹಕಾರಿ ಸೇವೆ ಆರಂಭಿಸಿದೆ. ನಮಗೆ ದೇವರು ಬೇಕಾದಷ್ಟು ಕೊಟ್ಟಿರಬಹುದು. ಅದರಲ್ಲಿ‌ ಒಂದು ಪಾಲು ಸಾರ್ವಜನಿಕರಿಗೆ ವಿನಿಯೋಗ ಮಾಡುವುದು ಸಂತೋಷ ಕೊಟ್ಟಿದೆ . ಡಾ ಎ ಜೆ ಶೆಟ್ಟಿಯವರು‌ ನನಗೆ ಸಂಪೂರ್ಣ ಪ್ರೋತ್ಸಾಹ ನೀಡಿದವರು. ನನ್ನ ತಂದೆ 2ನೇ ಮಹಾಯುದ್ದದಲ್ಲಿ ಪಾಲ್ಗೊಂಡವರು. ಅವರು ನಮ್ಮನ್ನು ಶಿಸ್ತಿನಿಂದ ಬೆಳೆಸಿದ್ದರಿಂದ ನನ್ನ ಸಹಕಾರಿ ಕ್ಷೇತ್ರ ಯಶಸ್ವಿಯಾಗಿದೆ ಎಂದರು.


ಪ್ರಥಮ ಠೇವಣಿ ಪತ್ರ ಬಿಡುಗಡೆ
ಸಂಘದ ಪ್ರಥಮ ಠೇವಣಿ ಪತ್ರವನ್ನು ವಿಧಾನ ಪರಿಷತ್ ಶಾಸಕ ಐವನ್ ಡಿ ಸೋಜ ಬಿಡುಗಡೆಗೊಳಿಸಿದರು. ಜಯರಾಮ ಹೆಗ್ಡೆ ಮತ್ತು ಸುಬ್ಬರಾವ್ ಅವರು ಠೇವಣಿ ಪತ್ರ ಪಡೆದರು.


ಮಂಗಳೂರು ಮಹಾನಗರಪಾಲಿಕೆಯ ಮಾಜಿ ಮೇಯರ್ ದಿವಾಕರ್ ಪಾಂಡೇಶ್ವರ, ಆದರ್ಶ ವಿವಿಧೋದ್ದೇಶ ಸಹಕಾರಿ ಸಂಘದ ಅಡಳಿತ ಮಂಡಳಿಯಲ್ಲಿ ಉಪಾಧ್ಯಕ್ಷ ಯನ್ ಸುಂದರ ರೈ, ಸಂಘದ ಮಹಾಪ್ರಬಂಧಕ ವಸಂತ ಜಾಲಾಡಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.


ಸಂಘದ ನಿರ್ದೇಶಕ ನ್ಯಾಯವಾದಿ ಅಶ್ವಿನ್ ಎಲ್ ಶೆಟ್ಟಿ, ಕೆ ಸೀತಾರಾಮ ರೈ ಅವರ ಪುತ್ರ ಡಾ ರಾಜೇಶ್ ರೈ, ನಿರ್ದೆಶಕರಾದ ಮಹಾಬಲ ರೈ ಬೋಳಂತೂರು, ಸೀತಾರಾಮ ಶೆಟ್ಟಿ ಮಂಗಳೂರು, ಎಸ್.ಎನ್ ಬಾಪು ಸಾಹೇಬ್ ಅತಿಥಿಗಳನ್ನು ಗೌರವಿಸಿದರು. ಸವಣೂರು ಪ ಪೂ ಕಾಲೇಜಿನ ಸಂಗೀತ ಶಿಕ್ಷಕಿ ಡಾ| ಪವಿತ್ರರೂಪೇಶ್ ಪ್ರಾರ್ಥಿಸಿದರು. ಆದರ್ಶ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷ ಸಹಕಾರ ರತ್ನ ಕೆ ಸೀತಾರಾಮ ರೈ ಸವಣೂರು ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು. ಶಾಖೆಯ ಪ್ರಭಾರ ಶಾಖಾ ವ್ಯವಸ್ಥಾಪಕಿ ಮಹಾಲಕ್ಷ್ಮೀ ಕೆ ವಂದಿಸಿದರು. ರಾಕೇಶ್ ರೈ ಕೆಡೆಂಜಿ ಕಾರ್ಯಕ್ರಮ ನಿರೂಪಿಸಿದರು. ಸಂಘದ ನಿರ್ದೇಶಕರಾದ ಕೆ.ರವೀಂದ್ರನಾಥ ಶೆಟ್ಟಿ,ವಿ.ವಿ ನಾರಾಯಣ ಭಟ್, ಎನ್ ಜಯಪ್ರಕಾಶ್ ರೈ ಚೊಕ್ಕಾಡಿ, ಎನ್.ರಾಮಯ್ಯ ರೈ ತಿಂಗಳಾಡಿ, ಚಿಕ್ಕಪ್ಪ ಅರಿಯಡ್ಕ, ಜೈರಾಜ್ ಭಂಡಾರಿ ನೋಣಾಲು, ಸೀತಾರಾಮ ಶೆಟ್ಟಿ ಬಿ ಮಂಗಳೂರು, ಮಹಾದೇವ ಎಂ, ಪೂರ್ಣೀಮಾ ಎಸ್ ಆಳ್ವ, ಯುಮುನಾ ಎಸ್ ರೈ ಗುತ್ತುಪಾಲ್, ರಶ್ಮಿ ರೈ ಎಸ್ ಸವಣೂರು, ಸಹಾಯಪ್ರಬಂಧಕರಾಗಿ ಸುನಾದ್ ರಾಜ್ ಶೆಟ್ಟಿ ಸಹಿತ ಹಲವಾರು ಮಂದಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here