ಪುತ್ತೂರು: ಪಾಲ್ತಾಡಿ ಗ್ರಾಮದ ಮಣಿಕ್ಕರ ಸುಂದರ್ ರವರ ವೈದ್ಯಕೀಯ ಚಿಕಿತ್ಸೆಗೆ ಪುತ್ತಿಲ ಪರಿವಾರ ಸೇವಾ ಟ್ರಸ್ಟಿನ ವತಿಯಿಂದ ಆರ್ಥಿಕ ಸಹಕಾರದ ಚೆಕ್‌ನ್ನು ಹಸ್ತಾಂತರ ಮಾಡಲಾಯಿತು.
ಈ ಸಂದರ್ಭದಲ್ಲಿ ಹಿರಿಯರಾದ ಕೊಳ್ತಿಗೆ ಷಣ್ಮುಖ ದೇವಸ್ಥಾನದ ಮಾಜಿ ಅಧ್ಯಕ್ಷ ಲಕ್ಷ್ಮಣ ಗೌಡ ಕುಂಟಿಕಾನ, ಷಣ್ಮುಖದೇವ ಶಾಲೆಯ ಅಧ್ಯಕ್ಷ ಶಿವರಾಮ್ ಭಟ್, ಬಿಜೆಪಿ ಗ್ರಾಮಾಂತರ ಮಂಡಲ ಪ್ರಧಾನ ಕಾರ್ಯದರ್ಶಿ ಉಮೇಶ್ ಕೊಡಿಬೈಲ್, ಬಿಜೆಪಿ ಗ್ರಾಮಾಂತರ ಮಂಡಲ ಉಪಾಧ್ಯಕ್ಷ ಯತಿಂದ್ರ ಕೊಚ್ಚಿ, ಪುತ್ತಿಲ ಪರಿವಾರ ಸೇವಾ ಟ್ರಸ್ಟಿನ ಕೋಶಾಧಿಕಾರಿ ರೂಪೇಶ್ ನಾಯ್ಕ್, ಪ್ರಮುಖರಾದ ಸತ್ಯಪ್ರಕಾಶ್ ಕೊಳ್ತಿಗೆ, ರವಿ ಕುಮಾರ್ ರೈ, ಸುನಿಲ್ ಬೋರ್ಕರ್, ರಜನೀಶ್ ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.
