ವಿಟ್ಲ: ಜೆಸಿಐ ಇಂಡಿಯಾ ವಲಯ 15 ರ ಅಧ್ಯಕ್ಷರಾಗಿ ಆಯ್ಕೆಯಾದ ಸಂತೋಷ್ ಶೆಟ್ಟಿ ಮತ್ತು ಇತರ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ವಿಟ್ಲ ಚರ್ಚ್ ನ ಶತಮಾನೋತ್ಸವ ಸ್ಮಾರಕ ಸಮುದಾಯ ಭವನದಲ್ಲಿ ನಡೆಯಿತು.

ಕಾರ್ಯಕ್ರಮವನ್ನು ಲಯನ್ಸ್ ಜಿಲ್ಲಾ ಮಾಜಿ ಗವರ್ನರ್ ವಸಂತ ಶೆಟ್ಟಿ ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ವಲಯದ ಮಾಜಿ ಅಧ್ಯಕ್ಷ ಸಂಪತ್ ಬಿ ಸುವರ್ಣ, ನಿಕಟ ಪೂರ್ವ ಅಧ್ಯಕ್ಷ ಅಭಿಲಾಷ್, ರೀಜನ್ ಬಿ ನೇತ್ರಾವತಿ ಇದರ ವಲಯ ಉಪಾಧ್ಯಕ್ಷ ಜಿತೇಶ್ ಪಿರೇರಾ, ರೀಜನ್ ಎ ನಂದಿನಿ ವಲಯ ಉಪಾಧ್ಯಕ್ಷ ಅರುಣ್ ಕುಮಾರ್ ಮಾಂಜ , ರೀಜನ್ ಸಿ ವಲಯ ಉಪಾಧ್ಯಕ್ಷೆ ಡಾ ಹರಿಣಾಕ್ಷಿ ಕರ್ಕೆರಾ, ರೀಜನ್ ಡಿ ಪಲ್ಗುಣಿ ಉಪಾಧ್ಯಕ್ಷ ಕಾಶಿನಾಥ್ ಗೋಗಟ್ಟೆ, ರೀಜನ್ ಶಾಂಭವಿ ಉಪಾಧ್ಯಕ್ಷ ಪ್ರದೀಪ್ ಶೆಟ್ಟಿ, ಬಿಂದು ಎಸ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು. ವಿಟ್ಲ ಜೆಸಿಐ ಘಟಕದ ಅಧ್ಯಕ್ಷ ಸಂದೀಪ್ ಸ್ವಾಗತಿಸಿದರು. ಪ್ರಶಾಂತ್ ಕುಮಾರ್ ವಂದಿಸಿದರು. ರಾಧಾಕೃಷ್ಣ ಎ. ಕಾರ್ಯಕ್ರಮ ನಿರೂಪಿಸಿದರು. ರಕ್ಷಿತ್, ಹೇಮಲತಾ ಜೈಕಿಶನ್, ಲವಿಟಾ ಸಹಕರಿಸಿದರು.