ಪುತ್ತೂರು: ಇಂಡಿಯನ್ ಗ್ರ್ಯಾಂಡ್ ಮುಫ್ತಿ ಕಾಂತಪುರಂ ಎ.ಪಿ ಅಬೂಬಕ್ಕರ್ ಮುಸ್ಲಿಯಾರ್ ಅವರು ಖಾಝಿಯಾಗಿರುವ ಮೊಹಲ್ಲಾಗಳ ದೀವಾನ್ ಇ ಖಾಝಿ ಸುನ್ನಿ ಸಂಯುಕ್ತ ಜಮಾಅತ್ ಪುತ್ತೂರು ಇದರ ಅಧ್ಯಕ್ಷರಾಗಿ ಯೂಸುಫ್ ಗೌಸಿಯ ಸಾಜ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಅಬ್ದುಲ್ ಅಝೀಝ್ ಮಿಸ್ಬಾಹಿ ಈಶ್ವರಮಂಗಲ ಆಯ್ಕೆಯಾಗಿದ್ದಾರೆ.
ಕೋಶಾಧಿಕಾರಿಯಾಗಿ ಅಬೂಬಕ್ಕರ್ ಸಿ.ಎಂ ಕರ್ನೂರು, ಉಪಾಧ್ಯಕ್ಷರಾಗಿ ಹಂಝ ಮುಸ್ಲಿಯಾರ್ ಈಶ್ವರಮಂಗಲ, ಇಸ್ಮಾಯಿಲ್ ಹಾಜಿ ಹಸನ್‌ನಗರ, ವಿವಿಧ ಸಮಿತಿಗಳ ಕಾರ್ಯದರ್ಶಿಗಳಾಗಿ ಆಧ್ಯಾತ್ಮಿಕ: ಅಬ್ದುಲ್ ಜಲೀಲ್ ಸಖಾಫಿ ಕರ್ನೂರು, ಶಿಕ್ಷಣ: ಅಬ್ದುಲ್ ಹಮೀದ್ ಕೊಯಿಲ, ಆರೋಗ್ಯ: ಯೂಸುಫ್ ಕರಿಮಜಲು, ಆರ್ಥಿಕತೆ: ಅಬ್ದುಲ್ಲ ಕುಂಞಿ ಸಾರ್ಯ, ಮಾಧ್ಯಮ: ಯೂಸುಫ್ ಸಖಾಫಿ ಕುಕ್ಕಾಜೆ, ಸಾಮಾಜಿಕ ಕಲ್ಯಾಣ: ಝಕರಿಯಾ ಸಅದಿ ಹಸನ್‌ನಗರ, ಸಾಂಸ್ಕೃತಿಕ: ರಫೀಕ್ ಬೀಟಿಗೆ, ಫತ್ವಾ: ಸುಲೈಮಾನ್ ಮಿಸ್ಬಾಹಿ ಕುಕ್ಕಾಜೆ, ಪರಿಸರ: ಇಸ್ಮಾಯಿಲ್ ಉರಿಮಜಲು, ಮಸ್ಲಹತ್: ಸುಲೈಮಾನ್ ಸಖಾಫಿ ಪಾಲಡ್ಕ ಆಯ್ಕೆಯಾದರು.
