ಪುತ್ತೂರು: ಕೆಮ್ಮಾಯಿ ಭರತಪುರದ ಒಳಿತು ಮಾಡು ಮನುಷ ಸಾಂತ್ವನ ಸೇವಾಶ್ರಮದ ವತಿಯಿಂದ ಊರ, ಪರವೂರ ಸಹೃದಯ ದಾನಿಗಳ ಸಹಕಾರದಿಂದ ಕಿಡ್ನಿ, ಡಯಾಲಿಸಿಸ್ ರೋಗಿಗಳಿಗೆ ಆಹಾರ ಸಾಮಾಗ್ರಿಗಳ ಕಿಟ್ ವಿತರಣೆಯ 41ನೇ ಯೋಜನೆಯ ಕಾರ್ಯಕ್ರಮ ಸೇವಾಶ್ರಮದಲ್ಲಿ ನಡೆಯಿತು.
ದೀಪ ಬೆಳಗಿಸಿ ಭಾರತಾಂಬೆಗೆ ಪುಷ್ಪಾರ್ಚನೆ ಮಾಡುವ ಮೂಲಕ ಕಾರ್ಯಕ್ರಮ ಉದ್ಘಾಟಿಸಲಾಯಿತು.

ಮುಖ್ಯ ಅತಿಥಿ ರಾಧ ರೆಸಿಡೆನ್ಸಿಯ ಮಾಲಕರಾದ ಪ್ರವೀಣ್ ಕೆಮ್ಮಾಯಿ ಮಾತನಾಡಿ ಕಿಟ್ ವಿತರಣೆ ಒಳ್ಳೆಯ ಕಾರ್ಯಕ್ರಮ. ಮುಂದೆಯೂ ಇಂಥಹ ಹತ್ತು ಹಲವು ಕಾರ್ಯಕ್ರಮ ನಡೆಯಲಿ ಎಂದು ಆಶಿಸಿದರು. ಸಾಹಿತಿ ಶಾಂತ ಕುಂಟಿನಿ ಮಾತನಾಡಿ ಕಾರ್ಯಕ್ರಮ ಮಾಡುತ್ತಿರುವ ತಂಡಕ್ಕೆ ಶುಭಹಾರೈಸಿ ಆಹಾರ ಸಾಮಾಗ್ರಿಗಳ ಕಿಟ್ ವಿತರಣೆ ನಿರಂತರ ನಡೆಯಲಿ ಎಂದರು. ಅಧ್ಯಕ್ಷತೆ ವಹಿಸಿದ್ದ ಒಳಿತು ಮಾಡು ಮನುಷ ಸಾಂತ್ವನ ಸೇವಾಶ್ರಮದ ಅಧ್ಯಕ್ಷೆ ಶೋಭಾಚೇತನ್ ಮಾತನಾಡಿ ನಮ್ಮ ಈ ಕಾರ್ಯಕ್ರಮ ಪ್ರತೀ ತಿಂಗಳೂ ದಾನಿಗಳಿಂದ ನಡೆಯುತ್ತಿದೆ. ಹಲವಾರು ದಾನಿಗಳು ನಮ್ಮ ಮೇಲೆ ವಿಶ್ವಾಸವಿಟ್ಟು ಆಹಾರ ಕಿಟ್ ವಿತರಣೆಗೆ ಕೈಜೋಡಿಸಿದ್ದಾರೆ. ನಾವು ನಿಮಿತ್ತ ಮಾತ್ರ. ದಾನಿಗಳಿಂದಲೇ ಈ ಕಾರ್ಯಕ್ರಮ ನಡೆಯುತ್ತಿದೆ ಎಂದ ಅವರು ಮುಂದೆಯೂ ನಿಮ್ಮ ಸಹಕಾರ ಇರಲಿ ಎಂದರು.
ಕೃಷ್ಣಪ್ಪ ಶಿವನಗರ ಪ್ರಾಸ್ತಾವಿಕ ಮಾತನಾಡಿದರು. ರಾಧಿಕಾ ಸ್ವಾಗತಿಸಿ ವನಿತ ವಂದಿಸಿದರು ಸದಸ್ಯರಾದ ರಾಧಿಕಾ, ಆತ್ಮಿ, ಹರ್ಷಿಕಾ ಪ್ರಾರ್ಥಿಸಿದರು. ಕಲಾವಿದ ಕೃಷ್ಣಪ್ಪ ಕಾರ್ಯಕ್ರಮ ನಿರೂಪಿಸಿದರು. ಸೇವಾಶ್ರಮದ ಸದಸ್ಯರುಗಳಾದ ಹರ್ಷಿತ ಆತ್ಮಿ, ವನಿತಾ, ಕಾವ್ಯ ಹೆಗಡೆ, ರಾಧಿಕಾ, ಧನಂಜಯ, ರಂಜಿತ್, ಭುವನ, ದೀಕ್ಷಾ, ವಸಂತಿ, ಸುಗಂದಿ,. ಶಮನ್ ಆಚಾರ್ಯ ಹಾಗೂ ಟ್ರಸ್ಟಿಗಳಾದ ಮೋಹನ ಸಿಂಹವನ, ಶ್ರೀಧರ್ ಮಡಿವಾಳ ಉಪಸ್ಥಿತರಿದ್ದರು.
21 ಕುಟುಂಬಗಳಿಗೆ ಕಿಟ್ ವಿತರಣೆ
ದಾನಿಗಳಿಂದ ಸಂಗ್ರಹಿಸಿದ ಧನಸಹಾಯದಲ್ಲಿ 21 ಮಂದಿ ಫಲಾನುಭವಿಗಳಿಗೆ ಗಣ್ಯರು ಆಹಾರ ಕಿಟ್ ವಿತರಿಸಿದರು. ಕಿಟ್ ಸ್ವೀಕರಿಸಿದ ಫಲಾನುಭವಿಗಳು ಅನಿಸಿಕೆ ವ್ಯಕ್ತಪಡಿಸಿದರು.