ಪುತ್ತೂರು: ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ ಕಮಿಟಿ ಅಧ್ಯಕ್ಷ ಡಾ.ರೇಣುಕಾ ಪ್ರಾಸಾದ್ ಕೆ.ವಿ ಮತ್ತು ಮನೆಯವರು ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇಗುಲಕ್ಕೆ ಸೇವಾ ರೂಪದಲ್ಲಿ ಸಮರ್ಪಣೆಗೊಳ್ಳುವ ಬೆಳ್ಳಿರಥವು ಪುತ್ತೂರು ಮೂಲಕ ಸುಳ್ಯಕ್ಕೆ ಹೋಗುವ ಸಂದರ್ಭ ನ.4ರಂದು ಪುತ್ತೂರು ಗೌಡ ಸಮುದಾಯ ಭವನದಲ್ಲಿ ಭವ್ಯ ಸ್ವಾಗತ ಕಾರ್ಯಕ್ರಮಕ್ಕೆ ಪುತ್ತೂರು ತಾಲೂಕು ಒಕ್ಕಲಿಗ ಗೌಡ ಸಂಘದಿಂದ ತೆಂಕಿಲ ಒಕ್ಕಲಿಗ ಗೌಡ ಸಮಯದಾಯ ಭವನದಲ್ಲಿ ಪೂರ್ವಭಾವಿ ಸಭೆ ಅ.27ರಂದು ನಡೆಯಿತು.
ಡಾ. ರೇಣುಕಾ ಪ್ರಸಾದ್, ಕಾರ್ಯಕ್ರಮದ ರೂಪುರೇಶೆಯ ಬಗ್ಗೆ ತಿಳಿಸಿದರು. ಹಾಗೆಯೇ ಎಲ್ಲರೂ ಈ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಪ್ರೀತಿಪೂರ್ವಕವಾಗಿ ಆಮಂತ್ರಿಸಿದರು. ಮಾಜಿ ಶಾಸಕ ಸಂಜೀವ ಮಠಂದೂರು, ಗೌಡ ಸಂಘದ ಅಧ್ಯಕ್ಷ ರವಿ ಮುಂಗ್ಲಿಮನೆ, ಚಿದಾನಂದ ಬೈಲಾಡಿ, ಯು ಪಿ ರಾಮಕೃಷ್ಣ, ಸಹಿತ ಹಲವಾರು ಮಂದಿ ಉಪಸ್ಥಿತರಿದ್ದರು.
