ಪುತ್ತೂರು: ನಿಷೇಧಿತ ಲಕ್ಕಿ ಸ್ಕೀಮ್ ಅಕ್ರಮವಾಗಿ ನಡೆಸುತ್ತಿರುವ ಮಾಹಿತಿಯಂತೆ, ಮಂಗಳೂರಿನ ಇಬ್ಬರು ವ್ಯಕ್ತಿಗಳು ಮತ್ತು ಸಂಸ್ಥೆಯ ನಿರ್ದೇಶಕರುಗಳ ವಿರುದ್ಧ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪೊಲೀಸರು ರೌಂಡ್ಸ್ ಕರ್ತವ್ಯದಲ್ಲಿದ್ದ ಸಂದರ್ಭ ಕೋರ್ಟ್ ರಸ್ತೆಯಲ್ಲಿ ಗುಂಪು ಗುಂಪಾಗಿ ಜನ ಸೇರಿಕೊಂಡಿರುವುದನ್ನು ನೋಡಿ ವಿಚಾರಿಸಿದಾಗ ಲಕ್ಕೀ ಸ್ಕೀಮ್ ವಿಚಾರ ಬೆಳಕಿಗೆ ಬಂದಿದೆ.
ರೂ. 23 ಸಾವಿರ ಹಣವನ್ನು ಒಂದುಬಾರಿ ಹೂಡಿಕೆ ಮಾಡಿದರೆ ಕಾರು, ಚಿನ್ನಾಭರಣ, ನಗದು, ಮೊಬೈಲ್, ರೆಫ್ರಿಜರೇಟರ್ ಇತರ ಗೃಹೋಪಯೋಗಿ ವಸ್ತುಗಳನ್ನು ನೀಡುತ್ತಾರೆ ಎಂಬ ವಿಚಾರ ಇರುವ ಕರ ಪತ್ರದ ಕುರಿತು ಪರಿಶೀಲಿಸಿದಾಗ ಕಚೇರಿ ವಿಳಾಸ ಇರುವುದು ಬೆಳಕಿಗೆ ಬಂದಿತ್ತು. ಮಂಗಳೂರಿನ ಸಲಾಂ ಮತ್ತು ಅಜೀಜ್ ಎಂಬವರು ‘ವಿಷನ್ ಇಂಡಿಯಾʼ ಹೆಸರಿನಲ್ಲಿ 15 ತಿಂಗಳ ಲಕ್ಕಿ ಸ್ಕೀಂ ನಡೆಸುತ್ತಿದ್ದು ಅವರು ಕೋರ್ಟ್ ರಸ್ತೆಯಲ್ಲಿ ಅಂಗಡಿ ಕೊಣೆಯನ್ನು ಬಾಡಿಗೆ ಪಡೆದಿದ್ದರು.
ಆರೋಪಿತರು ಈ ನಿಷೇದಿತ ಸ್ಕೀಮ್ ಅನ್ನು ಅಕ್ರಮವಾಗಿ ನಡೆಸುತ್ತಿರುವುದರಿಂದ ಇದು ಕಾನೂನು ಪ್ರಕಾರ ಶಿಕ್ಷಾರ್ಹ ಅಪರಾಧವಾಗಿದೆ ಎಂದು ಸಲಾಂ ಮತ್ತು ಅಜೀಜ್ ಎಂಬವರ ಸಂಸ್ಥೆಯ ನಿರ್ದೇಶಕರುಗಳ ವಿರುದ್ಧ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
