ಪುತ್ತೂರು: ಮಹಿಳೆಯೋರ್ವರಿಗೆ ಹಲ್ಲೆ, ಮಾನಸಿಕ ಹಿಂಸೆ, ಬೆದರಿಕೆ, ವರದಕ್ಷಿಣೆ ಕಿರುಕುಳ ಪ್ರಕರಣದಲ್ಲಿ ಆರೋಪಿಯಾಗಿರುವ ಆಕೆಯ ಪತಿ ಸಹಿತ ನಾಲ್ವರಿಗೆ ಪುತ್ತೂರು ಐದನೇ ಹೆಚ್ಚುವರಿ ಜಿಲ್ಲಾ ಸೆಷನ್ಸ್ ನ್ಯಾಯಾಲಯ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.
ಬನ್ನೂರು ನಂದಿಲ ಬಾತೀಷ ಎಂಬವರ ಪತ್ನಿ ಪಿ.ಕೆ.ಮರಿಯಮ್ಮತ್ ರಮೀಶ (23ವ) ಎಂಬವರು ನೀಡಿದ್ದ ದೂರಿನ ಮೇರೆಗೆ ಆಕೆಯ ಪತಿ ಬಾತೀಷ ಪರ್ಲಡ್ಕ ಗೋಳಿಕಟ್ಟೆ, ನಾದಿನಿಯರಾದ ಸೌದ, ಜುಬೈದ ಮತ್ತು ಮೈದುನ ಆಲೀಸ್ ವಿರುದ್ಧ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಗಂಡ ಮತ್ತು ಆತನ ಮನೆಯವರು ನನಗೆ ಮಾನಸಿಕ ಕಿರುಕುಳ ನೀಡಿ, ಅವಾಚ್ಯವಾಗಿ ಬೈದು ಹಲ್ಲೆ ನಡೆಸಿ ವರದಕ್ಷಿಣೆ ಕಿರುಕುಳ ನೀಡಿರುವುದಾಗಿ ಆರೋಪಿಸಿ ಪಿ.ಕೆ.ಮರಿಯಮ್ಮತ್ ರಮೀಶ ಅವರು ನೀಡಿದ್ದ ದೂರಿನ ಮೇರೆಗೆ ಆರೋಪಿಗಳ ವಿರುದ್ಧ ಕಲಂ 85,352,115(2)ಬಿಎಎನ್ಎಸ್ 2023 ಜೊತೆಗೆ ವರದಕ್ಷಿಣೆ ನಿಷೇಧ ಕಾಯ್ದೆಯಡಿ ಪುತ್ತೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಆರೋಪಿಗಳಿಗೆ ಪುತ್ತೂರು ಐದನೇ ಹೆಚ್ಚುವರಿ ಜಿಲ್ಲಾ ಸೆಷನ್ಸ್ ನ್ಯಾಯಾಲಯ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ. ಆರೋಪಿಗಳ ಪರ ವಕೀಲರಾದ ಮಾಧವ ಪೂಜಾರಿ, ರಾಕೇಶ್ ಬಲ್ನಾಡು, ಮೋಹಿನಿ ಕೆ ವಾದಿಸಿದ್ದರು.
