ನೆಲ್ಯಾಡಿ: ಸರಕಾರಿ ಪ್ರೌಢಶಾಲೆ ಹಿರೆಬಂಡಾಡಿ ಇಲ್ಲಿ ನಡೆದ ಉಪ್ಪಿನಂಗಡಿ ವಲಯ ಮಟ್ಟದ ಬಾಲಕ ಹಾಗೂ ಬಾಲಕಿಯರ ಕ್ರೀಡಾಕೂಟದ 14ರ ವಯೋಮಾನದ ಬಾಲಕರ ವಿಭಾಗದಲ್ಲಿ ಉದನೆ ಬಿಷಪ್ ಪೋಳಿಕಾರ್ಪೋಸ್ ಪಬ್ಲಿಕ್ ಸ್ಕೂಲ್‌ಗೆ ದ್ವಿತೀಯ ಸಮಗ್ರ ಪ್ರಶಸ್ತಿ ಲಭಿಸಿದೆ.
14ರ ವಯೋಮಾನದ ವಿಭಾಗದಲ್ಲಿ ರೆನಿಲ್ ಸಿ.ಪಿ. 600 ಮೀ. ಓಟ ಪ್ರಥಮ, ಎತ್ತರ ಜಿಗಿತ ಪ್ರಥಮ, ಉದ್ದ ಜಿಗಿತ ದ್ವಿತೀಯ, ರಿಶಾದ್ ಚಕ್ರ ಎಸೆತ ತೃತೀಯ, ರೆನಿಲ್ ಸಿ.ಪಿ., ಅದ್ವಿತ್, ಅಲೆನ್ ಜೋಸೆಫ್, ಶೈಬಿನ್ ಮ್ಯಾಥ್ಯೂ 4/100ಮೀ. ರಿಲೇಯಲ್ಲಿ ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾರೆ. 17ರ ವಯೋಮಾನದ ವಿಭಾಗದಲ್ಲಿ ವರುಣ್ ಎಂ.ಡಿ., 400 ಮೀ. ಓಟ ಪ್ರಥಮ, 4/400 ಮೀ. ರಿಲೇ ಪ್ರಥಮ, 200 ಮೀ. ಓಟ ತೃತೀಯ, ಆದರ್ಶ್ ಜೋಶಿ ಟ್ರಿಪಲ್ ಜಂಪ್ ಪ್ರಥಮ, ಉದ್ದ ಜಿಗಿತ ಪ್ರಥಮ, ಶಿಫಾ ಸಂತೋಷ್
ಗುಂಡೆಸೆತ ದ್ವಿತೀಯ, ಈಟಿ ಎಸೆತ ತೃತೀಯ, ವರುಣ್ ಎಂ.ಡಿ., ಆದರ್ಶ್ ಜೋಶಿ 4/100 ಮೀ. ರಿಲೇ ತೃತೀಯ, ಮೆರ್ಲಿನ್ ಮೋಕ್ಷಿತಾ, ಪ್ರಣಮ್ಯ 4/100 ಮೀ. ರಿಲೇ ತೃತೀಯ, ಪ್ರಣಮ್ಯ ಉದ್ದ ಜಿಗಿತ ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ.
ಸಂಸ್ಥೆಯ ಸಂಚಾಲಕರಾದ ರೆ.ಫಾ ಹನಿ ಜೇಕಬ್, ಸಹಸಂಚಾಲಕರಾದ ಡೀಕನ್ ಜಾರ್ಜ್ ಕೆ.ಎಂ., ಮುಖ್ಯಗುರು ಸಿಬಿಚ್ಚನ್ ಟಿ.ಸಿ., ಹಾಗೂ ಶಿಕ್ಷಕರು ವಿಜೇತ ವಿದ್ಯಾರ್ಥಿಗಳನ್ನು ಅಭಿನಂದಿಸಿದರು. ದೈಹಿಕ ಶಿಕ್ಷಣ ಶಿಕ್ಷಕರಾದ ಜಿಮ್ಸನ್ ವರ್ಗೀಸ್ ವಿದ್ಯಾರ್ಥಿಗಳಿಗೆ ತರಬೇತಿ ನೀಡಿದ್ದರು.
