VCET: ವಿಟಿಯು ರಾಜ್ಯಮಟ್ಟದ ಸ್ಪರ್ಧೆಯಲ್ಲಿ ಚಿನ್ನ ಹಾಗೂ ಬೆಳ್ಳಿಯ ಪದಕದ ಸಾಧನೆ

0


ಪುತ್ತೂರು: ಪುತ್ತೂರಿನ ವಿವೇಕಾನಂದ ಕಾಲೇಜ್ ಆಫ್ ಎಂಜಿನಿಯರಿಂಗ್ ಎಂಡ್ ಟೆಕ್ನಾಲಜಿಯ ವಿದ್ಯಾರ್ಥಿಗಳು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯ ರಾಜ್ಯಮಟ್ಟದ ಅಂತರ್ಕಾಲೇಜು ಭಾರ ಎತ್ತುವ ಸ್ಪರ್ಧೆಯಲ್ಲ್ಲಿ ಒಂದು ಚಿನ್ನ ಹಾಗೂ ಒಂದು ಬೆಳ್ಳಿಯ ಪದಕವನ್ನು ಗೆದ್ದುಕೊಂಡಿದ್ದು, ಇವರ ಸಾಧನೆಯಿಂದ ಕಾಲೇಜು ದ್ವಿತೀಯ ಸಮಗ್ರ ಪ್ರಶಸ್ತಿಯನ್ನು ಗಳಿಸಿಕೊಂಡಿದೆ.


ಬೆಂಗಳೂರಿನ ಗ್ಲೋಬಲ್ ಅಕಾಡೆಮಿ ಆಫ್ ಟೆಕ್ನಾಲಜಿಯ ಆಶ್ರಯದಲ್ಲಿ ನಡೆದ ಈ ಕ್ರೀಡಾಕೂಟದಲ್ಲಿ ಕಾಲೇಜಿನ ತೃತೀಯ ವರ್ಷದ ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಭಾಗದ ವಿದ್ಯಾರ್ಥಿ ಭುವನ್‌ರಾಮ್ ಜಗದೀಶ್ ಭಂಡಾರಿ 71 ಕೆಜಿ ವಿಭಾಗದಲ್ಲಿ ಸ್ನಾಚ್‌ನಲ್ಲಿ 85 ಕೆಜಿ ಹಾಗೂ ಕ್ಲೀನ್ ಎಂಡ್ ಜರ್ಕ್‌ನಲ್ಲಿ 110 ಕೆಜಿ ಹೀಗೆ ಒಟ್ಟು 195 ಕೆಜಿ ಭಾರ ಎತ್ತುವುದರ ಮೂಲಕ ಚಿನ್ನದ ಪದಕದ ಸಾಧನೆಯನ್ನು ಮಾಡಿದ್ದಾರೆ.


ಇದೇ ಕ್ರೀಡಾಕೂಟದ 65 ಕೆಜಿ ವಿಭಾಗದಲ್ಲಿ ತೃತೀಯ ವರ್ಷದ ಆರ್ಟಿಫೀಶಿಯಲ್ ಇಂಟೆಲಿಜೆನ್ಸ್ ಎಂಡ್ ಮೆಶಿನ್ ಲರ್ನಿಂಗ್ ವಿಭಾಗದ ಸ್ಕಂದ ಪ್ರಸಾದ್ ಸ್ನಾಚ್‌ನಲ್ಲಿ 67 ಕೆಜಿ ಹಾಗೂ ಕ್ಲೀನ್ ಎಂಡ್ ಜರ್ಕ್‌ನಲ್ಲಿ 90 ಕೆಜಿ ಹೀಗೆ ಒಟ್ಟು 157 ಕೆಜಿ ಭಾರವನ್ನು ಎತ್ತಿ ರಜತ ಪದಕವನ್ನು ತಮ್ಮದಾಗಿಸಿಕೊಂಡಿದ್ದಾರೆ.
ಇವರಿಗೆ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಬಾಲಚಂದ್ರ ಗೌಡ ಭಾರ್ತಿಕುಮೇರು ಅವರ ಮಾರ್ಗದರ್ಶನದಲ್ಲಿ ಈ ಸಾಧನೆಯನ್ನು ಮಾಡಿದ್ದಾರೆ ಎಂದು ಪ್ರಾಂಶುಪಾಲ ಡಾ.ಮಹೇಶ್ ಪ್ರಸನ್ನ.ಕೆ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here