ಅಂತರರಾಜ್ಯ ಮಟ್ಟದ ಮುಕ್ತ ಹಗ್ಗ ಜಗ್ಗಾಟ, 3 ತಾಲೂಕು ಮಟ್ಟದ ವಾಲಿಬಾಲ್, ಅಟ್ಟಿಮಡಿಕೆ
ಪುತ್ತೂರು: ಜಿಲ್ಲಾ ಪ್ರಶಸ್ತಿ ಪುರಸ್ಕೃತ ಮಜ್ಜಾರಡ್ಕ ಶ್ರೀ ವಿಷ್ಣು ಯುವಶಕ್ತಿ ಬಳಗ ಇದರ ಅಶ್ರಯದಲ್ಲಿ ನಡೆಯುವ 8ನೇ ವರ್ಷದ ಅದ್ಧೂರಿ ಕೆಸರುಡೊಂಜಿ ದಿನ ಕಾರ್ಯಕ್ರಮ ನ.2ರಂದು ಅರಿಯಡ್ಕ ಗ್ರಾಮದ ಮಜ್ಜಾರು ಗದ್ದೆಯಲ್ಲಿ ನಡೆಯಲಿದೆ. ಪ್ರತಿ ವರ್ಷದಂತೆ ಈ ವರ್ಷವೂ ಹಲವು ವಿಶೇಷ ಕಾರ್ಯಕ್ರಮಗಳೊಂದಿಗೆ ವಿವಿಧ ಆಟೋಟ ಸ್ಪರ್ಧೆಗಳ ನಡೆಯಲಿದೆ.
ವಿಶೇಷವಾಗಿ ಸುಳ್ಯ,ಪುತ್ತೂರು ಮತ್ತು ಕಡಬ ತಾಲೂಕು ಮಟ್ಟದ ವಾಲಿಬಾಲ್ ಪಂದ್ಯಾಟ, ಅಂತರರಾಜ್ಯ ಮಟ್ಟದ ಕೆಸರು ಗದ್ದೆ ಮುಕ್ತ ಹಗ್ಗ ಜಗ್ಗಾಟ ಹಾಗೇ ಸ್ಥಳೀಯರಿಗೆ ಕಬಡ್ಡಿ ,ಕೆಸರು ಗದ್ದೆಯಲ್ಲಿ ಅಟ್ಟಿ ಮಡಿಕೆ ಒಡೆಯುವ ಸ್ಪರ್ಧೆ ಸೇರಿದಂತೆ ಕೆಸರು ಗದ್ದೆಯಲ್ಲಿ ವಿವಿಧ ಆಟೋಟ ಸ್ಪರ್ಧೆಗಳು ನಡೆಯಲಿದೆ. ಇದಲ್ಲದೆ ಸಾಧಕರಿಗೆ ಸನ್ಮಾನದೊಂದಿಗೆ ಯುವ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಯಲಿದೆ.

ಬೆಳಿಗ್ಗೆ ಕುಣಿತ ಭಜನೆಯೊಂದಿಗೆ ಕಾರ್ಯಕ್ರಮ ಆರಂಭಗೊಳ್ಳಲಿದ್ದು ಉದ್ಯಮಿ ಅಜಿತ್ ರೈ ದೇರ್ಲ ಕುಣಿತ ಭಜನಾ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಸಭಾ ಕಾರ್ಯಕ್ರಮವನ್ನು ಶಾಸಕರಾದ ಅಶೋಕ್ ಕುಮಾರ್ ರೈಯವರು ಉದ್ಘಾಟಿಸಲಿದ್ದು, ಯುವಶಕ್ತಿ ಬಳಗದ ಉಪಾಧ್ಯಕ್ಷ ಸುಜಿತ್ ಶೇಖಮಲೆ ಸಭಾಧ್ಯಕ್ಷತೆ ವಹಿಸಲಿದ್ದಾರೆ. ಅತಿಥಿಗಳಾಗಿ ಜಿಲ್ಲಾ ಯುವಜನ ಒಕ್ಕೂಟದ ಅಧ್ಯಕ್ಷ ಸುರೇಶ್ ರೈ ಸೂಡಿಮುಳ್ಳು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಯುವ ತರಬೇತುದಾರ ಶ್ರೀಕಾಂತ್ ಪೂಜಾರಿ ಬಿರಾವು, ಅರಿಯಡ್ಕ ಗ್ರಾಪಂ ಉಪಾಧ್ಯಕ್ಷ ಮೀನಾಕ್ಷಿ ಪಾಪೆಮಜಲು, ಕೊಳ್ತಿಗೆ ಮರಾಠಿ ಸಮಾಜ ಸೇವಾ ಸಂಘದ ಅದ್ಯಕ್ಷ ಸುಬ್ಬಯ್ಯ ನಾಯ್ಕ, ಸವಣೂರು ಸರಕಾರಿ ಪ್ರೌಢಶಾಲಾ ದೈಹಿಕ ಶಿಕ್ಷಣ ಶಿಕ್ಷಕ ಮಾಮಚ್ಚನ್, ನಿವೃತ್ತ ಸೈನಿಕ ಬಾಲಕೃಷ್ಣ ಪಾಟಾಳಿ ಎನ್.ಕಲ್ಲರ್ಪೆ, ಪತ್ರಕರ್ತ ಸಿಶೇ ಕಜೆಮಾರ್, ದರ್ಬೆತ್ತಡ್ಕ ಶ್ರೀ ವಿಷ್ಣು ಸೇವಾ ಬಳಗದ ಗೌರವ ಅಧ್ಯಕ್ಷ ರವೀಂದ್ರ ಮಣಿಯಾಣಿ ಭಾಗವಹಿಸಲಿದ್ದಾರೆ. ಸಂಜೆ ಸಮಾರೋಪ ಸಮಾರಂಭ ನಡೆಯಲಿದ್ದು, ಯುವಶಕ್ತಿ ಬಳಗದ ಗೌರವ ಅಧ್ಯಕ್ಷ ಶರತ್ ರೈ ಓಲ್ತಾಜೆ ಬೆಂಗಳೂರು ಸಭಾಧ್ಯಕ್ಷ ವಹಿಸಲಿದ್ದು, ಅತಿಥಿಗಳಾಗಿ ಧಾರ್ಮಿಕ ಮುಖಂಡ ಅರುಣ್ ಕುಮಾರ್ ಪುತ್ತಿಲ, ಯುವಶಕ್ತಿ ಬಳಗದ ಅಧ್ಯಕ್ಷ ಲೋಕೇಶ್ ಸ್ವಾಮಿನಗರ, ವಿಜಯ ಸಾಮ್ರಾಟ್ ಸಂಘಟನೆ ಸ್ಥಾಪಕ ಅಧ್ಯಕ್ಷ ಸಹಜ್ ರೈ ಬಳಜ್ಜ, ಉದ್ಯಮಿ, ಸಂಘಟನೆಯ ಗೌರವ ಸಲಹೆಗಾರರಾದ ಕುಂಬ್ರ ಮೋಹನದಾಸ ರೈ, ಮನೋಜ್ ರೈ,ಲೋಕೇಶ್ ರೈ ಅಮೈ, ಜನಾರ್ದನ ಪೂಜಾರಿ ಪದಡ್ಕ ಪಡುಮಲೆ, ಮಧುರಾಜ್ ಶೆಟ್ಟಿ ಬೆಂಗಳೂರು, ಉದ್ಯಮಿ ಶ್ರೀಧರ ಶೆಟ್ಟಿ, ಪಾಲ್ತಾಡಿ ಶ್ರೀ ಉಳ್ಳಾಕ್ಲು ಫ್ರೆಂಡ್ಸ್ ಕ್ಲಬ್ನ ಸದಸ್ಯ ಗಣೇಶ್ ಗೌಡ ಅಮೆಚ್ಚೋಡ್, ರೇಷ್ಮಾ ಉದಯ ಪೂಜಾರಿ ಮಡಿಕೇರಿ ಭಾಗವಹಿಸಲಿದ್ದಾರೆ.
ಆಟೋಟ ಸ್ಪರ್ಧೆಗಳು
ಕೆಸರುಗದ್ದೆಯಲ್ಲಿ ಬೆಳಿಗ್ಗೆಯಿಂದಲೇ ಸ್ಥಳೀಯರಿಗೆ ವಿವಿಧ ಆಟೋಟ ಸ್ಪರ್ಧೆಗಳು ನಡೆಯಲಿದ್ದು ವಿಶೇಷವಾಗಿ ಅಂತರರಾಜ್ಯ ಮಟ್ಟದ ಕೆಸರು ಗದ್ದೆ ಹಜ್ಜಜಗ್ಗಾಟ ಸ್ಪರ್ಧೆ ನಡೆಯಲಿದೆ. ಇದಲ್ಲದೆ ಪುತ್ತೂರು, ಸುಳ್ಯ, ಕಡಬ ತಾಲೂಕು ಮಟ್ಟದ ವಾಲಿಬಾಲ್ ಪಂದ್ಯಾಟ ನಡೆಯಲಿದೆ. ಈ ಸ್ಪರ್ಧೆಗಳಲ್ಲಿ ವಿಶೇಷವಾಗಿ ನಗದು ಬಹುಮಾನ, ಟ್ರೋಪಿ ನೀಡಲಾಗುತ್ತದೆ. ವಿಶೇಷ ಆಕರ್ಷಣೆಯಾಗಿ ಅಟ್ಟಿ ಮಡಿಕೆ ಒಡೆಯುವ ಸ್ಪರ್ಧೆ ನಡೆಯಲಿದ್ದು ಇದರಲ್ಲಿ ಭಾಗವಹಿಸಿದ ಎಲ್ಲಾ ತಂಡಗಳಿಗೆ ಗೌರವ ಧನ ಹಾಗೂ ಸ್ಮರಣಿಕೆ ನೀಡಲಾಗುತ್ತದೆ. ಇದಲ್ಲದೆ ಸ್ಥಳೀಯರಿಗೆ ಕಬಡ್ಡಿ ಪಂದ್ಯಾಟ ಸೇರಿದಂತೆ ವಿವಿಧ ಸ್ಪರ್ಧೆಗಳು ನಡೆಯಲಿದೆ.
ಯುವ ಪ್ರಶಸ್ತಿ ಪ್ರದಾನ, ಸನ್ಮಾನ
ಇಂಡಿಯನ್ ಬುಕ್ ಅಫ್ ರೇಕಾರ್ಡ್ ದಾಖಲೆ ಬರೆದ ಪುಟಾಣಿ ಅತ್ಮಿಕಾ ವಿಜಯ್, ಸಾಮಾಜಿಕ ಸೇವೆಯಲ್ಲಿ ತೊಡಗಿಸಿಕೊಂಡಿರುವ ಅರುಣಾ ಸಾರಥಿ ಅಟೋ ಚಾಲಕ ಮಾಲಕರು ಪುತ್ತೂರು, ೬೧ ಬಾರಿ ರಕ್ತದಾನ ಮಾಡಿದ ಶಶಿಧರ ಪಾಟಾಳಿ ದೇರ್ಲರವರುಗಳಿಗೆ ವಿಶೇಷ ಸನ್ಮಾನ ಹಾಗೇ ಸಂಘಟನೆಯ ಓರ್ವರಿಗೆ `ಯುವ ಪ್ರಶಸ್ತಿ’ ಪ್ರದಾನ ನಡೆಯಲಿದೆ. 
ಹೆಚ್ಚಿನ ಮಾಹಿತಿಗೆ ಮೊ.9483285830ಗೆ ಸಂಪರ್ಕಿಸಬಹುದಾಗಿದೆ. ಈ ಎಲ್ಲಾ ಕಾರ್ಯಕ್ರಮಗಳಿಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಪ್ರೋತ್ಸಾಹ ನೀಡುವಂತೆ ಶ್ರೀ ವಿಷ್ಣು ಯುವಶಕ್ತಿ ಬಳಗದ ಗೌರವ ಅಧ್ಯಕ್ಷ ಶರತ್ ರೈ ಓಲ್ತಾಜೆ ಬೆಂಗಳೂರು, ಅಧ್ಯಕ್ಷ ಲೋಕೇಶ್ ಸ್ವಾಮಿನಗರ, ಪ್ರಧಾನ ಕಾರ್ಯದರ್ಶಿ ಹರೀಶ್ ಮಡಿವಾಳ ಕೋಡಿಯಡ್ಕ, ಸಂಘಟಕ ರಾಜೇಶ್ ಕೆ. ಮಯೂರ ಗೋಳ್ತಿಲ, ಜತೆ ಕಾರ್ಯದರ್ಶಿ ಮೋಹನ್ ಬಂಗಾರುಗುಡ್ಡೆ, ಉಪಾಧ್ಯಕ್ಷ ಸುಜಿತ್ ಶೇಖಮಲೆ, ಕೋಶಾಧಿಕಾರಿ ಗುರುಪ್ರಸಾದ್ ಮಜ್ಜಾರ್, ಕ್ರೀಡಾ ಕಾರ್ಯದರ್ಶಿ ಹರೀಶ್ ಸ್ವಾಮಿನಗರ, ಜತೆ ಕ್ರೀಡಾ ಕಾರ್ಯದರ್ಶಿ ಸುಭಾಷ್ ಕೊಲ್ಲಾಜೆ, ಸಾಂಸ್ಕೃತಿಕ ಕಾರ್ಯದರ್ಶಿ ನವೀನ್ ಮಜ್ಜಾರ್, ಜತೆ ಸಾಂಸ್ಕೃತಿಕ ಕಾರ್ಯದರ್ಶಿ ಚೇತನ್ ಕೊಡಿಮರ ಹಾಗೂ ಗೌರವ ಸಲಹೆಗಾರರು, ಸದಸ್ಯರುಗಳ ಪ್ರಕಟಣೆ ತಿಳಿಸಿದೆ.