ಕಾಣಿಯೂರು: ಕುದ್ಮಾರು ದೇವರಗುಡ್ಡೆ ಶ್ರೀ ವೀರಾಂಜನೇಯಾ ಗೆಳೆಯರ ಬಳಗ ಸೇವಾ ಟ್ರಸ್ಟ್ ವತಿಯಿಂದ ದೀಪಾವಳಿ ಹಬ್ಬದ ಪ್ರಯುಕ್ತ 7ನೇ ವರ್ಷದ ಕ್ರೀಡಾಕೂಟವು ನ.2ರಂದು ದೇವರಗುಡ್ಡೆ ಕ್ರೀಡಾಂಗಣದಲ್ಲಿ ನಡೆಯಲಿದೆ. ಬೆಳಿಗ್ಗೆ ಕಾರ್ಯಕ್ರಮವನ್ನು ಅಜಿರಂಗಳ ಶ್ರೀ ಬಾಲಸುಬ್ರಹ್ಮಣ್ಯ ದೇವಸ್ಥಾನದ ಸಂಚಾಲಕ ಸುಪ್ರೀತ್ ಜೈನ್ ಬೆಳಂದೂರುಗುತ್ತುರವರು ಉದ್ಘಾಟಿಸಲಿದ್ದಾರೆ.

ಶ್ರೀ ವೀರಾಂಜನೇಯಾ ಗೆಳೆಯರ ಬಳಗ ಸೇವಾ ಟ್ರಸ್ಟ್ ನ ಗೌರವಾಧ್ಯಕ್ಷ ಕೇಶವ ಗೌಡ ಅಮೈ ಅಧ್ಯಕ್ಷತೆ ವಹಿಸಲಿದ್ದಾರೆ. ಬೆಳಂದೂರು ಗ್ರಾಮ ಪಂಚಾಯತ್ ಅಧ್ಯಕ್ಷೆ ತೇಜಾಕ್ಷಿ ಬಿ ಕೊಡಂಗೆ,
ಬರೆಪ್ಪಾಡಿ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಜತ್ತಪ್ಪ ರೈ ಬರೆಪ್ಪಾಡಿ, ಸವಣೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕ ತಿಮ್ಮಪ್ಪ ಬನಾರಿ, ಶ್ರೀ ವೀರಾಂಜನೇಯಾ ಗೆಳೆಯರ ಬಳಗದ ಸಂಚಾಲಕ ನವೀನ್ ಕೂಂಕ್ಯ, ಉಪಾಧ್ಯಕ್ಷೆ ಮೋಹಿನಿ ಕೊಯಕ್ಕುಡೆ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಸಂಜೆ ನಡೆಯುವ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಶ್ರೀ ವೀರಾಂಜನೇಯಾ ಗೆಳೆಯರ ಬಳಗದ ಅಧ್ಯಕ್ಷ ಆನಂದ ಗೌಡ ಕೂಂಕ್ಯ ವಹಿಸಲಿದ್ದು, ಚಾರ್ವಾಕ ಕೊರಿಯಾನ ಶ್ರೀ ಬ್ರಹ್ಮಬೈದರ್ಕಳ ಗರಡಿ ಸೇವಾ ಟ್ರಸ್ಟ್ ನ ಅಧ್ಯಕ್ಷ ಸತ್ಯನಾರಾಯಣ ಭಟ್ ಕಲ್ಲೂರಾಯರವರು ಬಹುಮಾನ ವಿತರಣೆ ಮಾಡಲಿದ್ದಾರೆ. ಕಾೖಮಣ ಕೃಷ್ಣಾಪುರ ಜೋಕಾಲಿ ಬಳಗದ ಅಧ್ಯಕ್ಷ ಚಂದ್ರಶೇಖರ ಮುಂಡಾಳ, ಪುಣ್ಚತ್ತಾರು ಶ್ರೀ ಹರಿ ಫ್ರೆಂಡ್ಸ್ ಸ್ಪೋರ್ಟ್ಸ್ ಕ್ಲಬ್ ನ ಅಧ್ಯಕ್ಷ ಹರೀಶ್ ಕಟೀಲು ಪೈಕ, ಪ್ರಗತಿ ಪರ ಕೃಷಿಕ ಗಣೇಶ್ ಕಂಡಿಗ, ಶ್ರೀ ವೀರಾಂಜನೇಯಾ ಗೆಳೆಯರ ಬಳಗದ ಪ್ರಧಾನ ಕಾರ್ಯದರ್ಶಿ ಅಶ್ವಿನ್ ಕೂಂಕ್ಯ, ಸಹ ಸಂಚಾಲಕ ಪ್ರವೀಣ್ ಕುರುಂಜ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ವಿವಿಧ ಆಟೋಟ ಸ್ಪರ್ಧೆಗಳು ಹಿಂದೂ ಬಾಂಧವರಿಗೆ ಮಾತ್ರ ನಡೆಯಲಿದೆ ಎಂದು ಶ್ರೀ ವೀರಾಂಜನೇಯಾ ಗೆಳೆಯರ ಬಳಗದ ಪದಾಧಿಕಾರಿಗಳು ತಿಳಿಸಿದ್ದಾರೆ.