ಪುತ್ತೂರು: ಸಂತ ಫಿಲೋಮಿನಾ ಅನುದಾನಿತ ಪ್ರೌಢಶಾಲೆ ಮತ್ತು ಸಂತ ಫಿಲೋಮಿನಾ ಆಂಗ್ಲ ಮಾಧ್ಯಮ ಪ್ರಾಥಮಿಕ ಶಾಲೆಯ ವತಿಯಿಂದ ಕನ್ನಡ ರಾಜ್ಯೋತ್ಸವದ ಆಚರಣೆ ನಡೆಯಿತು.
ಮುಖ್ಯ ಅತಿಥಿ, ಸಂಸ್ಥೆಯ ಹಿರಿಯ ವಿದ್ಯಾರ್ಥಿ, ಆಯುರ್ವೇದ ವೈದ್ಯ ಡಾ.ಎಸ್.ಎನ್ ಅಮೃತ್ ಮಲ್ಲ ಮಾತನಾಡಿ ನನ್ನ ಶಾಲಾ ದಿನಗಳಲ್ಲಿ ಉತ್ತೇಜಸಿದ ಗುರುಗಳು ನನ್ನ ಶ್ರೇಯಸ್ಸಿನ ಹಿಂದಿರುವ ಶಕ್ತಿಗಳು. ಕನ್ನಡ ನಾಡು ಮತ್ತು ಭಾಷೆಗೋಸ್ಕರ ಹಲವರು ಶ್ರಮಿಸಿದ್ದಾರೆ. ಇಂಥಹ ಮಹನಿಯರ ಸಾಹಿತ್ಯವನ್ನು ಓದಬೇಕು. ನನ್ನ ಜನ್ಮಭೂಮಿ ಭಾರತ, ತಾಯಿನಾಡು ಕರ್ನಾಟಕ ಎಂದು ತಿಳಿದು ದುಡಿಯಿರಿ ಎಂದರು. ಅಧ್ಯಕ್ಷತೆ ವಹಿಸಿದ್ದ ಮುಖ್ಯಗುರು ವಂ.ಮ್ಯಾಕ್ಸಿಮ್ ಡಿಸೋಜ ಮಾತನಾಡಿ ಕನ್ನಡ ನಾಡು – ಶ್ರೀಗಂಧದ ನಾಡು, ಚಿನ್ನದ ಬೀಡು. ರಾಷ್ಟ್ರಪ್ರೇಮದೊಂದಿಗೆ ನಾಡಭಕ್ತಿಯನ್ನು ಬೆಳೆಸಿಕೊಳ್ಳಿ ಎಂದರು.
ಸಂತ ಫಿಲೋಮಿನ ಪ್ರೌಢಶಾಲೆಯ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಜಯಕುಮಾರ್ ರೈ, ಸಂತ ಫಿಲೋಮಿನ ಆಂಗ್ಲ ಮಾಧ್ಯಮ ಶಾಲೆಯ ರಕ್ಷಕ-ಶಿಕ್ಷಕ ಸಂಘದ ಉಪಾಧ್ಯಕ್ಷ ಮುಕೇಶ್ ಕೆಮ್ಮಿಂಜೆ, ವೇದಿಕೆಯಲ್ಲಿ ಉಪಸ್ಥಿತರಿದ್ದರು.
ರಾಷ್ಟ್ರಧ್ವಜ ಆರೋಹಣಗೊಳಿಸಿ ಆಚರಣೆಗೆ ಚಾಲನೆ ನೀಡಲಾಯಿತು. ರಾಷ್ಟ್ರಗೀತೆ, ನಾಡಗೀತೆ ಮತ್ತು ಹಚ್ಚೇವು ಕನ್ನಡದ ದೀಪ ಹಾಡುಗಳನ್ನು ಹಾಡಿ ಗೌರವವನ್ನು ಸೂಚಿಸಲಾಯಿತು. ಉಭಯಶಾಲೆಗಳ ವಿದ್ಯಾರ್ಥಿಗಳಾದ ಹರ್ಷಲ್ ಮತ್ತು ಜೆರಿನ ದಿನದ ಮಹತ್ವದ ಕುರಿತು ಮಾತನಾಡಿದರು. ಮುಖ್ಯ ಅತಿಥಿ, ಡಾ.ಅಮೃತ್ ಮಲ್ಲರವರನ್ನು ಸಂಸ್ಥೆಯ ವತಿಯಿಂದ ಸನ್ಮಾನಿಸಲಾಯಿತು. ಪ್ರೌಢಶಾಲೆಯ ವಿದ್ಯಾರ್ಥಿಗಳಿಗೆ ಇಲಾಖಾ ವತಿಯಿಂದ ನಡೆಸಲ್ಪಟ್ಟ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ದೈಹಿಕ ಶಿಕ್ಷಕ ಶಿಕ್ಷಕ ನರೇಶ್ ಸನ್ಮಾನ ಕಾರ್ಯಕ್ರಮ ನಿರ್ವಹಿಸಿದರು.
ಶಿಕ್ಷಕ ಬೆನೆಟ್ ಮುಖ್ಯ ಅತಿಥಿಗಳ ಪರಿಚಯ ಮಾಡಿದರು. ಸಂತ ಫಿಲೋಮಿನಾ ಆಂಗ್ಲ ಮಾಧ್ಯಮ ಪ್ರಾಥಮಿಕ ಶಾಲಾ ಮುಖ್ಯಗುರು ಸಿಸ್ಟರ್ ಲೋರ ಪಾಯ್ಸ್ ಸ್ವಾಗತಿಸಿ ಚೈತನ್ಯ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕಿ ರೇಷ್ಮಾ ವಂದಿಸಿದರು. ಶಿಕ್ಷಕ-ಶಿಕ್ಷಕೇತರ ಸಿಬ್ಬಂದಿ ವರ್ಗದವರು ಸಹಕರಿಸಿದರು. ಎನ್ಸಿಸಿ ಆರ್ಮಿ, ನೇವಿ ಮತ್ತು ಉಭಯ ಶಾಲೆಗಳ ಸ್ಕೌಟ್ಸ್-ಗೈಡ್ಸ್, ಬುಲ್ ಬುಲ್ ಹಾಗೂ ವಾದ್ಯವೃಂದದವರು ವಿಶೇಷ ಮೆರುಗು ನೀಡಿದರು.
