ಪುತ್ತೂರು: ಮಂಜಲ್ಪಡ್ಪು ಷಣ್ಮುಖ ನಗರದಲ್ಲಿ ಮೋರಿ ಮತ್ತು ಇಂಟರ್ಲಾಕ್ ರಸ್ತೆಗೆ ಬೇಡಿಕೆಯನ್ನು ಪುತ್ತೂರು ನಗರಸಭೆ ಈಡೇರಿಸಿದೆ ಎಂದು ಸ್ಥಳೀಯ ರಸ್ತೆ ಫಲಾನುಭವಿಗಳು ತಿಳಿಸಿದ್ದಾರೆ.
ನಮ್ಮ ಬೇಡಿಕೆಯನ್ನು ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಸುಂದರ ಪೂಜಾರಿ ಬಡಾವು ಅವರು ತಕ್ಷಣ ಈಡೇರಿಸಿದ್ದಾರೆ. ಇದಕ್ಕೆ ಪೂರಕವಾಗಿ ನಗರಸಭೆ ಸ್ಥಳೀಯ ಸದಸ್ಯ ನವೀನ್ ಅವರು ಸ್ಪಂದಿಸಿದ್ದಾರೆ ಎಂದು ಸ್ಥಳೀಯ ರಸ್ತೆ ಫಲಾನುಭವಿಗಳಾದ ಶಶಿಧರ್ ರೈ, ಶ್ರೀಪತಿ ಭಟ್ ಸಹಿತ ಹಲವಾರು ಮಂದಿ ತಿಳಿಸಿದ್ದಾರೆ.
