ಪುತ್ತೂರು: ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ರಾಜಗೋಪುರದಲ್ಲಿ ಬೊಳುವಾರು ಶ್ರೀ ಆಂಜನೇಯ ಯಕ್ಷಗಾನ ಕಲಾ ಸಂಘದ ವತಿಯಿಂದ ತಿಂಗಳ ಸರಣಿ ತಾಳಮದ್ದಳೆ ನ.3ರಂದು ” ಭೀಷ್ಮ ಸೇನಾಧಿಪತ್ಯ” ಪ್ರಸಂಗದೊಂದಿಗೆ ನಡೆಯಿತು.
ಹಿಮ್ಮೇಳದಲ್ಲಿ ಯಲ್ ಯನ್ ಭಟ್ , ಅಚ್ಯುತ ಪಾಂಗಣ್ಣಾಯ ಕೋಡಿಬೈಲು , ಪರೀಕ್ಷಿತ್ ಹಂದ್ರಟ್ಟ , ಸಮರ್ಥ ವಿಷ್ಣು ಈಶ್ವರಮಂಗಲ ಸಹಕರಿಸಿದರು.
ಮುಮ್ಮೇಳದಲ್ಲಿ ಭೀಷ್ಮ ( ಭಾಸ್ಕರ್ ಶೆಟ್ಟಿ ಸಾಲ್ಮರ ಮತ್ತು ಭಾಸ್ಕರ್ ಬಾರ್ಯ ) ಕೌರವ ( ಗುಡ್ಡಪ್ಪ ಬಲ್ಯ ) ಕರ್ಣ (ದುಗ್ಗಪ್ಪ ನಡುಗಲ್ಲು ) ದ್ರೋಣ (ಲಕ್ಷ್ಮೀ ಕಾಂತ ಹೆಗ್ಡೆ ಪುತ್ತೂರು) ಸಹಕರಿಸಿದರು. ಕಾರ್ಯಕ್ರಮದ ಮೊದಲಿಗೆ ಇತ್ತೀಚೆಗೆ ಅಗಲಿದ ಯಕ್ಷಗಾನದ ಹಿರಿಯ ಕಲಾವಿದ ಶಂಭುಶರ್ಮ ವಿಟ್ಲ ರವರ ಕುರಿತು ಶ್ರೀ ದೇವಳದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಪಂಜಿಗುಡ್ಡೆ ಈಶ್ವರ ಭಟ್ ರವರ ಉಪಸ್ಥಿತಿಯಲ್ಲಿ ಭಾಸ್ಕರ್ ಶೆಟ್ಟಿ ಸಾಲ್ಮರ , ಗುಡ್ಡಪ್ಪ ಬಲ್ಯ ಹಾಗು ಭಾಸ್ಕರ್ ಬಾರ್ಯರು ನುಡಿನಮನ ಸಲ್ಲಿಸಿದರು. ಗೌರವ ಕಾರ್ಯದರ್ಶಿ ಟಿ.ರಂಗನಾಥ ರಾವ್ ಸ್ವಾಗತಿಸಿ ವಂದಿಸಿದರು.
