ಪೂರ್ವಭಾವಿ ಸಭೆಯಲ್ಲಿ ಕಾರ್ಯಕ್ರಮದ ರೂಪುರೇಷೆ ನೀಡಿದ ಡಾ. ಮೋಹನ್ ಆಳ್ವ
ಕೇವಲ ಮನೋರಂಜನೆಯಾಗದೆ ಸಾವಿರಾರು ಸಂದೇಶ ನೀಡುವ ಕಾರ್ಯಕ್ರಮ – ಡಾ. ಮೋಹನ್ ಆಳ್ವ
ಪುತ್ತೂರಿನ ಜನತೆ ಆಳ್ವಾಸ್ ನುಡಿಸಿರಿ ಜೊತೆ ಇದ್ದೇವೆ- ಅಶೋಕ್ ಕುಮಾರ್ ರೈ
ನುಡಿಸಿರಿಯ ಮೂಲಕ ಸಾಂಸ್ಕೃತಿಕ ಭಾವನೆ ಅರಳಲಿ – ನಳಿನ್ ಕುಮಾರ್ ಕಟೀಲ್
ನುಡಿಸಿರಿಯನ್ನು ಸಮಾಜ ಗೌರವಿಸಿದೆ – ಈಶ್ವರ ಭಟ್ ಪಂಜಿಗುಡ್ಡೆ
ಮೋಹನ್ ಆಳ್ವ ಅವರ ಋಣ ತೀರಿಸುವ ಅವಕಾಶ – ಹೇಮನಾಥ ಶೆಟ್ಟಿ ಕಾವು
ಪುತ್ತೂರು: ಆಳ್ವಾಸ್ ಶಿಕ್ಷಣ ಸಂಸ್ಥೆಗಳಿಂದ ವಿದ್ಯಾರ್ಥಿಗಳಲ್ಲಿ ಸೌಂದರ್ಯ ಪ್ರಜ್ಞೆ ಬೆಳೆಸುವ ನಿಟ್ಟಿನಲ್ಲಿ ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ದೇವರಮಾರು ಗದ್ದೆಯಲ್ಲಿ ಆಳ್ವಾಸ್ ಸಾಂಸ್ಕೃತಿಕ ಕಾರ್ಯಕ್ರಮ ನ.16 ರಂದು ನಡೆಯಲಿದೆ. 3 ಗಂಟೆಯ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಕೇವಲ ಮನೋರಂಜನೆಯಾಗದೆ ಸಾವಿರಾರು ಸಂದೇಶ ಹೋಗಬೇಕು ಎಂದು ಮೂಡಿಬಿದಿರೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಮೋಹನ್ ಆಳ್ವ ಅವರು ತಿಳಿಸಿದ್ದಾರೆ.
ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಸಭಾಭವನದಲ್ಲಿ ನ.4 ರಂದು ನಡೆದ ಪೂರ್ವ ಭಾವಿ ಸಭೆಯಲ್ಲಿ ಅವರು ಕಾರ್ಯಕ್ರಮದ ವಿವರವನ್ನು ನೀಡಿದರು.
ಪುತ್ತೂರಿನ ಜನತೆ ಆಳ್ವಾಸ್ ನುಡಿಸಿರಿ ಜೊತೆ ಇದ್ದೇವೆ:
ಶಾಸಕ ಅಶೋಕ್ ಕುಮಾರ್ ರೈ ಅವರು ಮಾತನಾಡಿ, ಒಳ್ಳೆಯ ಕಾರ್ಯಕ್ರಮಕ್ಕೆ ನಮ್ಮ ಪೂರ್ಣ ಸಹಕಾರವಿದೆ. ಆಳ್ವಾಸ್ ಸಂಸ್ಥೆಯ ಕಾರ್ಯಕ್ರಮ ಸಾರ್ವಜನಿಕ ಪ್ರಶಂಸೆಗೆ ಪಾತ್ರವಾಗಿದೆ. ಪುತ್ತೂರಿನ ಜನತೆ ಆಳ್ವಾಸ್ ನುಡಿಸಿರಿ ಜೊತೆ ಇದ್ದೇವೆ. ಪಕ್ಷಾತೀತವಾಗಿ ಎಲ್ಲರನ್ನು ಸೇರಿಸುವ ಕೆಲಸ ನಾವು ಮಾಡುತ್ತೇವೆ. ಮಾಧ್ಯಮದಲ್ಲಿ ಪ್ರಚಾರ ಮಾಡಿ, ಎಲ್ಲಾ ಶಾಲೆಗಳಿಗೂ ತಿಳಿಸುವ ಕೆಲಸ ಮಾಡಬೇಕು ಎಂದರು.

ನುಡಿಸಿರಿಯ ಮೂಲಕ ಸಾಂಸ್ಕೃತಿಕ ಭಾವನೆ ಅರಳಲಿ:
ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್ ಅವರು ಮಾತನಾಡಿ, ಡಾ ಮೋಹನ್ ಆಳ್ವ ಅದ್ಬುತವಾದ ನೃತ್ಯಗಾರ, ಅವರಲ್ಲಿರುವ ಕಲೆ ಇವತ್ತು ದೊಡ್ಡ ಶಿಕ್ಷಣ ಸಂಸ್ಥೆಯ ಕಲೆಯನ್ನು ಹೇಗೆ ಆರಾಧಿಸುತ್ತಾರೆ ಅನ್ನುವುದಕ್ಕೆ ಆಳ್ವಾಸ್ನ ವಿರಾಸತ್ ಜಗತ್ತಿನ ಇವತ್ತು ಮಾದರಿಯಾಗಿದೆ. ಯಾಕೆಂದರೆ ಭಾರತದ ವಿವಿಧ ರಾಜ್ಯಗಳ, ಸಾಹಿತ್ಯ, ಪ್ರಕಾರಗಳ, ಸಂಗೀತಗಳನ್ನು ವಿರಾಸತ್ ಮೂಲಕ ಜೋಡಣೆ ಮಾಡಿ ವಿದ್ಯಾರ್ಥಿಗಳಲ್ಲಿ ಪ್ರೇರಣೆ ನೀಡುವ ಕೆಲಸ ಮಾಡಿದ್ದಾರೆ. ನಾಡು, ನುಡಿ, ಸಂಸ್ಕೃತಿ, ಭಾಷೆಯ ಸಾಹಿತ್ಯದ ವೈಭವನ್ನು ಸರಕಾರ ಮಾಡಬೇಕು. ಆದರೆ ಸರಕಾರದಷ್ಟೆ ಜವಾಬ್ದಾರಿ ಖಾಸಗಿಗಳಿವೆ ಎಂದು ಮೊಟ್ಟಮೊದಲ ಬಾರಿಗೆ ನುಡಿಸಿರಿಯನ್ನು ಖಾಸಗಿಯಾಗಿ ಮಾಡಿದ ವ್ಯಕ್ತಿ ಇದ್ದರೆ ಅದು ಮೋಹನ್ ಆಳ್ವ ಅವರು. ಇವತ್ತು ಅವರು ಪುತ್ತೂರಿನಲ್ಲೂ ನುಡಿಸಿರಿಯನ್ನು ನೀಡಲು ಮುಂದಾಗಿದ್ದಾರೆ. ಅವರಿಗೆ ನಮ್ಮ ಬೆಂಬಲ ನೀಡಬೇಕು. ನುಡಿಸಿರಿಯ ಮೂಲಕ ಸಾಂಸ್ಕ್ರತಿಕ ಭಾವನೆ ಅರಳಲಿ ಎಂದರು.
ನುಡಿಸಿರಿಯನ್ನು ಸಮಾಜ ಗೌರವಿಸಿದೆ:
ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆಯವರು ಮಾತನಾಡಿ, ಮಹಾಲಿಂಗೇಶ್ವರ ದೇವಸ್ಥಾನದ ದೆವರಮಾರು ಗದ್ದೆಯಲ್ಲಿ ಎಷ್ಟೋ ಸಂಘಟನೆಯಿಂದ ಕಾರ್ಯಕ್ರಮ ನಡೆಯುತ್ತದೆ. ಆದರೆ ಎಲ್ಲಾ ಪಕ್ಷ ಬೇದವಿದಲ್ಲದೆ ಎಲ್ಲರನ್ನು ಸೇರಿಸಿಕೊಂಡು ಮೋಹನ್ ಆಳ್ವ ಅವರು ಕಾರ್ಯಕ್ರಮ ಮಾಡುತ್ತಾರೆ ಎಂಬುದಕ್ಕೆ ಈ ಸಭೆಯೇ ಸಾಕ್ಷಿ. ವಿದ್ಯಾಕ್ಷೇತ್ರ, ಕ್ರೀಡೆ, ಕಲೆಗೆ ಹೆಚ್ಚಿನ ಆಸಕ್ತಿಯನ್ನು ನೀಡುತ್ತಿರುವ ಆಳ್ವಾಸ್ ಶಿಕ್ಷಣ ಸಂಸ್ಥೆಯಿಂದ ಮೂಡಿ ಬರುವ ಈ ನುಡಿಸಿರಿ ಕಾರ್ಯಕ್ರಮ ನಮ್ಮ ಕಾರ್ಯಕ್ರಮದಂತೆ ನಾವು ಪೂರ್ಣ ಸಹಕಾರ ನೀಡುತ್ತೇವೆ. ಮುಂದಿನ ದಿನ ಮಹಾಲಿಂಗೇಶ್ವರ ದೇವಸ್ಥಾನದ ಜೀರ್ಣೋದ್ದಾರ ಕಾರ್ಯಕ್ರಮಳಿಗೂ ಎಲ್ಲರ ಸಹಕಾರ ಕೋರುತ್ತೇವೆ ಎಂದರು.
ಮೋಹನ್ ಆಳ್ವ ಅವರ ಋಣ ತೀರಿಸುವ ಅವಕಾಶ:
ಶ್ರೀ ರಾಮಕೃಷ್ಣ ಪ್ರೌಢಶಾಲೆಯ ಸಂಚಾಲಕ ಹೇಮನಾಥ ಶೆಟ್ಟಿ ಕಾವು ಅವರು ಮಾತನಾಡಿ, ಆಳ್ವಾಸ್ನಿಂದ ಪ್ರತಿ ವರ್ಷ ನೀಡುವ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಎಲ್ಲಾರೂ ಕಾಯುತ್ತಾರೆ. ಇವತ್ತು 10 ವರ್ಷದ ಬಳಿಕ ಮತ್ತೊಮ್ಮೆ ಪುತ್ತೂರಿನಲ್ಲಿ ಅವರ ಸಂಸ್ಥೆಯಿಂದ ಕಲಾಪ್ರದರ್ಶನ ನಡೆಯುತ್ತದೆ. ಪುತ್ತೂರಿನವರಿಗೆ ಮೋಹನ್ ಆಳ್ವ ಮತ್ತು ಅವರ ಸಂಸ್ಥೆಯ ಋಣವಿದೆ. ಆ ಋಣವನ್ನು ಯಾವ ವೇದಿಕೆಯಲ್ಲೂ ಸಂದಾಯ ಮಾಡಲು ಸಾಧ್ಯವಿಲ್ಲ. ಅವಕಾಶ ಸಿಕ್ಕಿದಾಗ ಅದನ್ನು ಸದುಪಯೋಗ ಮಾಡಬೇಕು. ಈ ನಿಟ್ಟಿನಲ್ಲಿ ಪುತ್ತೂರಿನಲ್ಲಿ ನಡೆಯುವ ಆಳ್ವಾಸ್ ನುಡಿಸಿರಿ ಯಶಸ್ವಿಯಾಗಲು ಎಲ್ಲರ ಪೂರ್ಣ ಸಹಕಾರ ಬೇಕು ಎಂದರು.
ನಗರಸಭೆ ಸದಸ್ಯ ಕೆ ಜೀವಂಧರ್ ಜೈನ್, ಸವಣೂರು ವಿದ್ಯಾರಶ್ಮಿಯ ಸಮೂಹ ಶಿಕ್ಷಣ ಸಂಸ್ಥೆಗಳ ಆಡಳಿತಾಧಿಕಾರಿ ಅಶ್ವಿನ್ ಆಳ್ವ, ಶ್ರೀನಿವಾಸ ಕಲ್ಯಾಣೋತ್ಸವ ಸಮಿತಿ ಸಂಚಾಲಕ ಅರುಣ್ ಕುಮಾರ್ ಪುತ್ತಿಲ, ಪುತ್ತೂರು ನುಡಿಸಿರಿ ಘಟಕದ ಮತ್ತು ಕರ್ನಾಟಕ ಸಂಘದ ಅಧ್ಯಕ್ಷ ಬಿ ಪುರಂದರ ಭಟ್, ಸುದಾನ ವಸತಿಯುತ ಶಾಲೆಯ ಸಂಚಾಲಕ ರೇ ವಿಜಯ ಹಾರ್ವಿನ್, ಕರಾವಳಿ ಅಭಿವೃದ್ದಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಚನಿಲ ತಿಮ್ಮಪ್ಪ ಶೆಟ್ಟಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಪ್ರೊ. ದತ್ತಾತ್ರೆಯ ಪ್ರಾರ್ಥಿಸಿದರು. ಪುತ್ತೂರು ನುಡಿಸಿರಿ ಘಟಕದ ಕೋಶಾಧಿಕಾರಿ ಬಿ ಐತ್ತಪ್ಪ ನಾಯ್ಕ್ ಸ್ವಾಗತಿಸಿದರು. ಕಾರ್ಯದರ್ಶಿ ಡಾ. ರಾಜೇಶ್ ಬೆಜ್ಜಂಗಳ ಕಾರ್ಯಕ್ರಮ ನಿರೂಪಿಸಿದರು. ಸಭೆಯಲ್ಲಿ ಡಾ. ಎಮ್.ಕೆ.ಪ್ರಸಾದ್, ಪ್ರೊ. ವಿ.ಬಿ ಅರ್ತಿಕಜೆ, ನ್ಯಾಯವಾದಿ ಎಂ.ಪಿ.ಅಬೂಬಕ್ಕರ್ ಸಹಿತ ಹಲವಾರು ಮಂದಿ ಉಪಸ್ಥಿತರಿದ್ದರು.
3 ಗಂಟೆ ಕಾಲ ಸಾಂಸ್ಕೃತಿಕ ಕಾರ್ಯಕ್ರಮ
ರಾಜಕೀಯ, ಧಾರ್ಮಿಕ, ಜಾತ್ರೆಯಂತಹ ಬೇಕಾದಷ್ಟು ಸಮಾವೇಶ ನಡೆಯುತ್ತದೆ. ಇದೆಲ್ಲವನ್ನು ಮೀರಿ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಬೇಕು. ಕನಿಷ್ಠ 10 ಸಾವಿರ ಸಂಖ್ಯೆ ಸೇರಬೇಕು. ಇದು ನಮ್ಮ ವಿದ್ಯಾಸಂಸ್ಥೆಯನ್ನು ವಿಸ್ತರಿಸುವ ಕಾರ್ಯಕ್ರಮವಲ್ಲ. ಪ್ರಿತಿ ವಿಶ್ವಾಸ ಬೆಸೆಯುವ ಕೆಲಸ ಕಾರ್ಯಕ್ರಮ ಆಗಬೇಕು. ಸಮಯಕ್ಕೆ ಆದ್ಯತೆ ನೀಡಿ ಕಾರ್ಯಕ್ರಮ ನಡೆಯಬೇಕು. 1 ಗಂಟೆ ಸಭಾ ಕಾರ್ಯಕ್ರಮ. 3 ಗಂಟೆಗಳ ಕಾಲ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.
ಡಾ.ಮೋಹನ್ ಆಳ್ವ
ಮಹಾಲಿಂಗೇಶ್ವರನಿಗೂ ಮೋಹನ್ ಆಳ್ವರಿಗೂ ಅನ್ಯೋನ್ಯ ಸಂಬಂಧ
ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದಲ್ಲಿ 2013ರಲ್ಲಿ ನಡೆದ ಬ್ರಹ್ಮಕಲಶೋತ್ಸವ ಯೋಜನೆಯಲ್ಲಿ ಡಾ.ಮೋಹನ್ ಆಳ್ವ ಅವರ ಪಾತ್ರ ಬಹಳ ದೊಡ್ಡದಾಗಿತ್ತು. ಒಂದೂವರೆ ತಿಂಗಳ ಕಾಲ ಬ್ರಹ್ಮಕಲಶೋತ್ಸವದಲ್ಲಿ ಸಭಾಕಾರ್ಯಕ್ರಮ, ಸಾಂಸ್ಕೃತಿಕ ಕಾರ್ಯಕ್ರಮ ಸಹಿತ ವೇದಿಕೆಗಳನ್ನು ಅದ್ಭುತವಾಗಿ ಉಚಿತವಾಗಿ ಮಾಡಿಕೊಟ್ಟವರು ಡಾ. ಮೋಹನ್ ಅಳ್ವ ಅವರು. ಹಾಗಾಗಿ ಮಹಾಲಿಂಗೇಶ್ವರನಿಗೂ ಅವರಿಗೂ ಬಹಳ ಅನ್ಯೋನ್ಯವಾಗಿರುವ ಸಂಬಂಧವಿದೆ. ಹಾಗಾಗಿ ಮೋಹನ್ ಆಳ್ವರ ಕೊಡುಗೆ ಸಮಾಜದಲ್ಲಿದೆ. ಸಮಾಜದ ಚಿಂತನೆ ಈ ಪ್ರದೇಶದಲ್ಲಿ ಸಾಂಸ್ಕೃತಿಕ ಭಾವನೆ ಅರಳಬೇಕು. ಹತ್ತಾರು ಜನರಿಗೆ ಪ್ರೇರಣೆ ಆಗಬೇಕು. ಮುಂದಿನ ವಿದ್ಯಾರ್ಥಿಗಳಿಗೆ ಚಿಂತನೆಗಳು ಬರಬೇಕೆಂಬುದು ಅವರ ಅಶಯ.
ನಳಿನ್ ಕುಮಾರ್ ಕಟೀಲ್, ಮಾಜಿ ಸಂಸದರು