ಪುತ್ತೂರು: ಪರ್ಪುಂಜ ಅಪಘಾತದಲ್ಲಿ ಗಾಯಗೊಂಡಿದ್ದ ಪುಟ್ಟ ಮಗುವಿನ ಆರೈಕೆ ಮಾಡಿ ಮಾನವೀಯತೆ ಮೆರೆದಿರುವ ಚಂದ್ರಪ್ರಭಾ ಗೌಡ ರವರಿಗೆ AIKMCC ಹಾಗೂ ಶಿಹಾಬ್ ತಂಙಳ್ ಸೆಂಟರ್ ಫಾರ್ ಹ್ಯುಮಾನಿಟಿ ವತಿಯಿಂದ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ನೋಟರಿ ಎಂ,ಪಿ,ಅಬೂಬಕ್ಕರ್ ನಿಮ್ಮ ಮಾನವೀಯ ಸೇವೆಯು ಎಲ್ಲ ಮಹಿಳೆಯರಿಗೆ ಮಾದರಿಯಾಗಲಿ ಎಂದರು.
AIKMCC ಪ್ರದಾನ ಕಾರ್ಯದರ್ಶಿ ಅಫ್ಹಾಂ ಅಲೀ ತಂಙಳ್ ಅವರು AIKMCC ಪಾಲಿಯೇಟಿವ್ ಹೋಮ್ ಕೇರ್ ವತಿಯಿಂದ ಜಿಲ್ಲೆಯಲ್ಲಿ ನೀಡುತ್ತಿರುವ ರೋಗಿಗಳ ಆರೈಕೆ ವಿವರ ನೀಡಿದರು.
ಕಾರ್ಯಕ್ರಮದಲ್ಲಿ ಯೂಸುಫ್ ಸಾಲ್ಮರ, ಅಬೂಬಕ್ಕರ್, ಭರತ್ ರಾವ್, ಶರ್ಫ್ಯೂದ್ದೀನ್, ಜಬ್ಬಾರ್ ಕೆಎಂಸಿಸಿ , ಅನೀಸ್ ಕೆ.ಎಸ್, ಮಹಮ್ಮದ್ ಪಡೀಲ್, ಮಹಮ್ಮದ್ ಶಮೀರ್, ಹನೀಫ್ ದರ್ಬೆ ಉಪಸ್ಥಿತರಿದ್ದರು. AIKMCC ದ,ಕ,ಜಿಲ್ಲಾ ಮೀಡಿಯಾ ವಿಂಗ್ ಕಾರ್ಯದರ್ಶಿ ತಾಜುದ್ದೀನ್ ಟರ್ಲಿ ಸ್ವಾಗತಿಸಿ,ವಂದಿಸಿದರು.
