ಕಾಣಿಯೂರು: ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಸವಣೂರು ಮೊಗರು ಇಲ್ಲಿ ನ.4ರಂದು ನಡೆದ ಸವಣೂರು ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಕುದ್ಮಾರು ಶಾಲೆಯ ಹಿರಿಯ ವಿಭಾಗದ ವಿದ್ಯಾರ್ಥಿಗಳು ಸಮಗ್ರ ಪ್ರಥಮ ಬಹುಮಾನವನ್ನು ಪಡೆದುಕೊಂಡಿರುತ್ತಾರೆ.

ಹಾಗೂ ಕಿರಿಯರ ವಿಭಾಗದಲ್ಲೂ ಹಲವು ಬಹುಮಾನಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. ಕನ್ನಡ ಕಂಠಪಾಠದಲ್ಲಿ ಪ್ರಣಾವಿ 7ನೇ ಪ್ರಥಮ, ಹಿಂದಿ ಕಂಠಪಾಠದಲ್ಲಿ ವಂದನಾ ಕೆ ಹೆಚ್ 7ನೇ ಪ್ರಥಮ, ಧಾರ್ಮಿಕ ಪಠಣ ಅರೇಬಿಕ್ ನಲ್ಲಿ ಆಯಿಷತ್ ಬರೀರಾ,7ನೇ ದ್ವಿತೀಯ, ಚಿತ್ರಕಲೆಯಲ್ಲಿ ಆಯಿಷತ್ ಸಝನ ದ್ವಿತೀಯ, ಭಕ್ತಿ ಗೀತೆಯಲ್ಲಿ ತೃಷಾ ಎ,6 ನೇ ಪ್ರಥಮ, ಕಥೆ ಹೇಳುವುದು ವಂದನಾ ಕೆ ಹೆಚ್ ತೃತೀಯ,ಪ್ರಬಂಧದಲ್ಲಿ ಯಜ್ಞ ಎಚ್ಎಸ್ 7ನೇ ಪ್ರಥಮ, ದೇಶಭಕ್ತಿ ಗೀತೆಯಲ್ಲಿ ಹರ್ಷಿತಾ ,6ನೇ ಪ್ರಥಮ, ಕವನ ವಾಚನದಲ್ಲಿ ಹನ್ಸಿಕಾ 7ನೇ -ಪ್ರಥಮ, ಮಿಮಿಕ್ರಿಯಲ್ಲಿ ಅಹಮದ್ ಅಸ್ಲಂ,6ನೇ ದ್ವಿತೀಯ, ಅಭಿನಯ ಗೀತೆಯಲ್ಲಿ ತೃಷಾ ಎ 6 ನೇ ತೃತೀಯ ಬಹುಮಾನ ಪಡೆದುಕೊಂಡಿದ್ದಾರೆ.
ಕಿರಿಯರ ವಿಭಾಗದಲ್ಲಿ
ಕಿರಿಯರ ವಿಭಾಗದ ಛದ್ಮವೇಷದಲ್ಲಿ ಪ್ರದೀಶ್ ಡಿಕೆ 4ನೇ ದ್ವಿತೀಯ, ಸಂಸ್ಕೃತ ಪಠಣದಲ್ಲಿ ಸುಷ್ಮಾ ಎನ್ ಟಿ 4ನೇ ತೃತೀಯ, ಕ್ಲೇ ಮಾಡಲಿಂಗ್ ನಲ್ಲಿ ಸುಪ್ರಿಯಾ ಎಸ್ ತೃತೀಯ, ಕಥೆ ಹೇಳುವುದು ಶಿಶಿರ್ 4ನೇ ತೃತೀಯ, ಅರೇಬಿಕ್ ಪಠಣದಲ್ಲಿ ಮಹಮ್ಮದ್ ಅನಸ್ 3ನೇ ತೃತೀಯ, ಆಶುಭಾಷಣದಲ್ಲಿ ಪ್ರದಿಶ್ ಡಿ ಕೆ
4ನೇ ತೃತೀಯ ಬಹುಮಾನಗಳನ್ನು ಪಡೆದುಕೊಂಡಿರುತ್ತಾರೆ.