ಬಡಗನ್ನೂರು : ಬೆಂಗಳೂರು ಕಠೀರವ ಕ್ರೀಡಾಂಗಣದಲ್ಲಿ ನಡೆದ ಕರ್ನಾಟಕ ಮಿನಿ ಒಲಂಪಿಕ್ 2025 ಕ್ರೀಡಾಕೂಟದಲ್ಲಿ ಸರ್ವೋದಯ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳು ಭಾಗವಹಿಸಿ 3 ಬೆಳ್ಳಿ, 2 ಕಂಚು ಪಡೆದುಕೊಂಡಿದ್ದಾರೆ.
42 ಕೆಜಿ ವಿಭಾಗದಲ್ಲಿ ದಿಶಾನ್ ಕೆ (8ನೇ )ಬೆಳ್ಳಿ ಪದಕ,36 ಕೆ.ಜಿ ವಿಭಾಗದಲ್ಲಿ ಜಯಶ್ರೀ (9ನೇ) ಕಂಚಿನ ಪದಕ, 40 ಕೆಜಿ ವಿಭಾಗದಲ್ಲಿ ಅನುಶ್ರೀ (8ನೇ) ಕಂಚಿನ ಪದಕ, 58 ಕೆಜಿ ಭಾಗದಲ್ಲಿ ನಂದಿತಾ (9ನೇ) ಬೆಳ್ಳಿ ಪದಕ, 63+ ಕೆ ಜಿ ವಿಭಾಗದಲ್ಲಿ ಅಕ್ಷತಾ (9ನೇ)ಕಂಚಿನ ಪದಕ ಪಡೆಯುವುದರ ಮೂಲಕ ರಾಜ್ಯ ಮಟ್ಟದಲ್ಲಿ ಪ್ರಥಮ ಭಾರಿಗೆ ಸಂಸ್ಥೆಗೆ ಐದು ಪದಕಗಳನ್ನು ಪಡೆದು ಸಂಸ್ಥೆಗೆ ಕೀರ್ತಿ ತಂದಿರುತ್ತಾರೆ
ಇವರಿಗೆ ಕೃಷ್ಣಪ್ಪಗೌಡ ಹಾಗೂ ದೈಹಿಕ ಶಿಕ್ಷಣ ಶಿಕ್ಷಕ ಸುಖೇಶ ರೈ ಎನ್ ತರಬೇತಿ ನೀಡಿದರು.
