ಸವಣೂರು: ಯುವ ಮತ್ತು ಮಹಿಳಾ ಸಬಲೀಕರಣ ಹಾಗೂ ನಾಗರಿಕ ಶಿಷ್ಟಾಚಾರದ ಅರಿವು ಕಾರ್ಯಕ್ರಮ

0

ಸವಣೂರು: ಸವಣೂರು ಗ್ರಾ.ಪಂ., ಶ್ರೀರಾಮ ಸಂಜೀವಿನಿ ಗ್ರಾಮ ಪಂಚಾಯತ್ ಮಟ್ಟದ ಒಕ್ಕೂಟ ಹಾಗೂ ಪುತ್ತೂರು ವಿವೇಕಾನಂದ ಕಾನೂನು ಮಹಾವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆ ಘಟಕದ ಕಾನೂನು ಅರಿವು ನೆರವು ಘಟಕದ ವತಿಯಿಂದ ಯುವ ಮತ್ತು ಮಹಿಳಾ ಸಬಲೀಕರಣ ಹಾಗೂ ನಾಗರಿಕ ಶಿಷ್ಟಾಚಾರದ ಅರಿವು ಕಾರ್ಯಕ್ರಮ ಗ್ರಾ.ಪಂ.ನ ಕುಮಾರಧಾರ ಸಭಾಂಗಣದಲ್ಲಿ ನಡೆಯಿತು.

ಸಂಪನ್ಮೂಲ ವ್ಯಕ್ತಿ, ಪುಣ್ಚಪ್ಪಾಡಿ ಸಮರ್ಥ ಜನ ಸೇವಾ ಟ್ರಸ್ಟ್ ಅಧ್ಯಕ್ಷ, ಗ್ರಾ.ಪಂ.ಸದಸ್ಯ ಗಿರಿಶಂಕರ ಸುಲಾಯ ಅವರು ಮಾತನಾಡಿ, ಯುವ ಹಾಗೂ ಮಹಿಳೆಯರ ಸಬಲೀಕರಣ ನಾಗರಿಕ ಶಿಷ್ಟಾಚಾರ,ಮಹಿಳಾ ಮೀಸಲಾತಿ ಬಗ್ಗೆ, ಸಂಜೀವಿನಿ ಒಕ್ಕೂಟದ ಕಾರ್ಯಗಳ ಕುರಿತು ಸಮಗ್ರ ಮಾಹಿತಿ ನೀಡಿದರು.

ಶ್ರೀರಾಮ ಸಂಜೀವಿನಿ ಗ್ರಾಮ ಪಂಚಾಯತ್ ಮಟ್ಟದ ಒಕ್ಕೂಟದ ಅಧ್ಯಕ್ಷೆ ವಿಜಯ ಈಶ್ವರ ಗೌಡ ಅಧ್ಯಕ್ಷತೆ ವಹಿಸಿದ್ದರು.

ವೇದಿಕೆಯಲ್ಲಿ ಪಂಚಾಯತ್ ಅಭಿವೃದ್ಧಿ ಅಧಿಕಾರಿ ವಸಂತ ಶೆಟ್ಟಿ,ಗ್ರಾ.ಪಂ. ಲೆಕ್ಕ ಸಹಾಯಕಿ ಜಯಂತಿ, ಸಂಜೀವಿನಿ ಒಕ್ಕೂಟದ ಉಪಾಧ್ಯಕ್ಷೆ ದಮಯಂತಿ ಬಸ್ತಿ , ಕಾರ್ಯದರ್ಶಿ ಪೂರ್ಣಿಮಾ ಮಹೇಶ್, ಜತೆಕಾರ್ಯದರ್ಶಿ ಸುಶ್ಮಿತಾ ಉಪ್ಪಳಿಗೆ, ಕೋಶಾಧಿಕಾರಿ ಸರೋಜಿನಿ ಎಂ, ವಲಯ ಮೇಲ್ವಿಚಾರಕಿ ಸುವಿನಾ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಒಕ್ಕೂಟದ ಮಾಸಿಕ ಸಭೆ ನಡೆಯಿತು. ಸಭೆಯಲ್ಲಿ ಘನ ತ್ಯಾಜ ಘಟಕದ ಬಗ್ಗೆ, ಸಮುದಾಯ ಬಂಡವಾಳ ನಿಧಿ ಸಾಲ ಮರುಪಾವತಿ ಬಗ್ಗೆ ಚರ್ಚಿಸಲಾಯಿತು.

ಈ ಸಂದರ್ಭದಲ್ಲಿ ಸಂಜೀವಿನಿ ಒಕ್ಕೂಟದ ಪದಾಧಿಕಾರಿಗಳು ಸಂಘದ ಸದಸ್ಯರು, ಕೃಷಿ ಸಖಿ, ಪಶು ಸಖಿ, ಸವಣೂರು ಹಾಲು ಉತ್ಪಾದಕರ ಸಹಕಾರಿ ಸಂಘದ ಮಾಜಿ ಅಧ್ಯಕ್ಷೆ ಮಮತಾ ರೈ ದೇವಶ್ಯ, ಘಟಕದ ಸಿಬ್ಬಂದಿಗಳು, ಗ್ರಂಥ ಪಾಲಕಿ ಶಾರದ, ವಿಶೇಷ ಚೇತನರ ಪುನರ್‌ವಸತಿ ಕಾರ್ಯಕರ್ತೆ ದೀಪಿಕಾ ಮೊದಲಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here