ಆಲಂಕಾರು: ಶ್ರೀ ದುರ್ಗಾಂಬಾ ಕಲಾಸಂಗಮ ಶ್ರೀ ಕ್ಷೇತ್ರ ಶರವೂರು ಇದರ ಆಶ್ರಯದಲ್ಲಿ ಭಕ್ತರ ಇಷ್ಟಾರ್ಥ ಸಿದ್ಧಿಗಾಗಿ ನಡೆಯುತ್ತಿರುವ ಯಕ್ಷಗಾಳ ತಾಳಮದ್ದಳೆಯ 18ನೇ ಸೇವೆ ‘ಇಂದ್ರನಂದನ ವಾನರೇಂದ್ರ’ ನ.8ರಂದು ರಾತ್ರಿ ಶರವೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಸಭಾಂಗಣದಲ್ಲಿ ನಡೆಯಿತು.
ಹಿಮ್ಮೇಳದಲ್ಲಿ ಭಾಗವತರಾಗಿ ಜಯಪ್ರಕಾಶ್ ನಾಕೂರು, ಡಿ.ಕೆ.ಆಚಾರ್ಯ ಹಳೆನೇರೆಂಕಿ, ಚೆಂಡೆ ಮದ್ದಳೆಯಲ್ಲಿ ಕೇಶವ ಬೈಪಡಿತ್ತಾಯ, ಚಂದ್ರ ದೇವಾಡಿಗ ನಗ್ರಿ, ಮೋಹನ ಶರವೂರು, ಚಕ್ರತಾಳದಲ್ಲಿ ಕುಮಾರ್ ಅಂಶುಮಾಲಿ ಕಡಬ, ಮುಮ್ಮೆಳದಲ್ಲಿ ರಾಘವೇಂದ್ರ ಭಟ್ ತೋಟಂತಿಲ (ಹನುಮಂತ), ಗಣರಾಜ ಕುಂಬ್ಳೆ (ರಾಮ), ಗುರುಪ್ರಸಾದ್ ಆಲಂಕಾರು (ಸುಗ್ರೀವ), ವಿಶ್ವೇಶ್ವರ ಭಟ್ ಸುಣ್ಣಂಬಳ (ವಾಲಿ), ದಿವಾಕರ ಆಚಾರ್ಯ ಹಳೆನೇರೆಂಕಿ (ತಾರೆ) ಸಹಕರಿಸಿದರು.
ರಕ್ಷಿತ್ ರಾಜ್ ಮತ್ತು ಮನೆಯವರು ಕೊರಂಬಾಡಿ, ಗುರುಪ್ರಸಾದ್ ಆಲಂಕಾರು ಸೇವಾರ್ಥಿಗಳಾಗಿ ಸಹಕರಿಸಿದರು. ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ಸುಬ್ರಹ್ಮಣ್ಯ ರಾವ್ ನಗ್ರಿ, ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಸದಸ್ಯರು, ದೇವಸ್ಥಾನದ ಸಿಬ್ಬಂದಿ ವರ್ಗದವರು, ಭಕ್ತಾಭಿಮಾನಿಗಳು ಉಪಸ್ಥಿತರಿದ್ದರು. ದುರ್ಗಾಂಬಾ ಕಲಾ ಸಂಗಮದ ಗೌರವ ಸಲಹೆಗಾರರಾದ ಗಣರಾಜ ಕುಂಬ್ಳೆ ಸ್ವಾಗತಿಸಿ, ವಂದಿಸಿದರು.
