ಅಧ್ಯಕ್ಷ ವಾಸುದೇವ ಪೂಜಾರಿ, ಉಪಾಧ್ಯಕ್ಷ ಲೋಕಯ್ಯ ನಾಯ್ಕ
ಪುತ್ತೂರು: ಬೆಟ್ಟಂಪಾಡಿ ಗ್ರಾಮದ ಗುಮ್ಮಟೆಗದ್ದೆ ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ಅವಿರೋಧವಾಗಿ ಆಯ್ಕೆಯಾಗಿದ್ದು, ಅಧ್ಯಕ್ಷರಾಗಿ ಹಾಲಿ ಅಧ್ಯಕ್ಷ ವಾಸುದೇವ ಪೂಜಾರಿ ಯಡ್ಕತ್ತೋಡಿ ಪುನರಾಯ್ಕೆಯಗಿದ್ದಾರೆ. ಉಪಾಧ್ಯಕ್ಷರಾಗಿ ಲೋಕಯ್ಯ ನಾಯ್ಕ ಗುಮ್ಮಟೆಗದ್ದೆ ಆಯ್ಕೆಯಾಗಿದ್ದಾರೆ.
ಸಂಘದ 12 ಸ್ಥಾನಗಳಿಗೆ ಎಲ್ಲಾ ನಿರ್ದೇಶಕ ಸ್ಥಾನಗಳಿಗೂ ನಿರ್ದೇಶಕರು ಅವಿರೋಧವಾಗಿ ಆಯ್ಕೆಯಾಗಿದ್ದರು. ಸಾಮಾನ್ಯ ಸ್ಥಾನದಿಂದ ಹರೀಶ್ ಗೌಡ ಗುಮ್ಮಟೆಗದ್ದೆ, ಕೊಗ್ಗು ಮಣಿಯಾಣಿ ಗುಮ್ಮಟೆಗದ್ದೆ, ತಿಮ್ಮಪ್ಪ ಗೌಡ ಗುಮ್ಮಟೆಗದ್ದೆ, ಹೊನ್ನಪ್ಪ ಗೌಡ ಗುಮ್ಮಟೆಗದ್ದೆ, ಪುರಂದರ ಗೌಡ ಗುಮ್ಮಟೆಗದ್ದೆ, ವಸಂತಿ ಕೆ ಗುಮ್ಮಟೆಗದ್ದೆ, ಯನ್ ಯಾದವಿ ಗುಮ್ಮಟೆಗದ್ದೆ, ಮಹಿಳಾ ಮೀಸಲು ಸ್ಥಾನದಿಂದ ಯಶೋಧ ಎಸ್ ಪೈಂತಿಮುಗೇರು, ವಾರಿಜ ಚೆಲ್ಯಡ್ಕ, ಹಿಂದುಳಿದ ವರ್ಗ ಎ ಸ್ಥಾನದಿಂದ ವಾಸುದೇವ ಪೂಜಾರಿ ಯಡ್ಕತ್ತೋಡಿ, ಹಿಂದುಳಿದ ವರ್ಗ ಬಿ ಸ್ಥಾನದಿಂದ ದಿನೇಶ ಜಿ. ಗುಮ್ಮಟೆಗದ್ದೆ ಹಾಗೂ ಅನುಸೂಚಿತ ಪಂಗಡದಿಂದ ಲೋಕಯ್ಯ ನಾಯ್ಕ ಗುಮ್ಮಟೆಗದ್ದೆ ಅವಿರೋಧವಾಗಿ ಆಯ್ಕೆಯಾಗಿದ್ದರು.
ನ.೮ರಂದು ನಡೆದ ನಿರ್ದೇಶಕರ ಸಭೆಯಲ್ಲಿ ಸಂಘದ ನೂತನ ಅಧ್ಯಕ್ಷ, ಉಪಾಧ್ಯಕ್ಷರನ್ನು ಆಯ್ಕೆ ಮಾಡಲಾಯಿತು. ಸಹಕಾರ ಸಂಘಗಳ ಮಂಗಳೂರು ಸಹಾಯಕ ನಿಬಂಧಕರ ಕಚೇರಿಯ ಅಧೀಕ್ಷಕ ಬಿ.ನಾಗೇಂದ್ರ ಚುನಾವಣಾಧಿಕಾರಿಯಾಗಿದ್ದರು. ಕಾರ್ಯದರ್ಶಿ ಅರುಣಾ ಹಾಗೂ ಸಹಾಯಕಿ ವಿನಯ ಸಹಕರಿಸಿದರು.
