ಪುತ್ತೂರು: ಶ್ರೀ ಧರ್ಮಸ್ಥಳ ನೈಸರ್ಗಿಕ ಚಿಕಿತ್ಸಾ ಮತ್ತು ಯೋಗ ವಿಜ್ಞಾನ ಕಾಲೇಜು ಇವರಿಂದ ನೈಸರ್ಗಿಕ ಚಿಕಿತ್ಸಾ ಶಿಬಿರ – ವಿಶೇಷ ಮಾಹಿತಿ ಕಾರ್ಯಕ್ರಮ ನ.11ರಿಂದ 15 ರವರೆಗೆ ಪುತ್ತೂರಿನ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ನಟರಾಜ ವೇದಿಕೆಯಲ್ಲಿ ನಡೆಯಲಿದೆ.
ನೈಸರ್ಗಿಕ ಚಿಕಿತ್ಸೆ (Naturopathy) ನಮ್ಮ ದೇಹದಲ್ಲೇ ಇರುವ ರೋಗ ನಿರೋಧಕ ಶಕ್ತಿಯನ್ನು ಜಾಗೃತಗೊಳಿಸಿ ದೇಹ, ಮನಸ್ಸು ಮತ್ತು ಆತ್ಮದ ಸಮತೋಲನವನ್ನು ಕಾಪಾಡಲು ಸಹಾಯ ಮಾಡುತ್ತದೆ. ಇದು ಔಷಧಿ ಇಲ್ಲದ, ಸುರಕ್ಷಿತ ಮತ್ತು ಪ್ರಕೃತಿ ಸ್ನೇಹಿ ವಿಧಾನವಾಗಿದೆ. ಆರೋಗ್ಯವನ್ನು ದೀರ್ಘಕಾಲ ಕಾಪಾಡಲು ಇದು ಬಹಳ ಉಪಯುಕ್ತ. ನೈಸರ್ಗಿಕ ಚಿಕಿತ್ಸೆ ಸಮಗ್ರ ರೀತಿಯಲ್ಲಿ ಆರೋಗ್ಯದ ಕಡೆ ಗಮನ ಕೊಡುತ್ತದೆ ಮತ್ತು ಖರ್ಚು ಕಡಿಮೆ ಆಗುತ್ತದೆ. ಪ್ರತಿದಿನ ಪರಿಣತ ವೈದ್ಯರಿಂದ ಈ ಬಗ್ಗೆ ಉಪನ್ಯಾಸ ನೀಡಲಾಗುತ್ತದೆ. ಅಲ್ಲದೇ ರೋಗಿಗಳ ಜೊತೆ ಸಂವಾದ ನಡೆಯಲಿದೆ. ಪ್ರತಿದಿನ ಬೆಳಗ್ಗೆ 10 ರಿಂದ ಮಧ್ಯಾಹ್ನ 1ರವರೆಗೆ ಹಾಗೂ ನ. 12ರಂದು ಮಧ್ಯಾಹ್ನ 3ರಿಂದ ಸಂಜೆ 5ರವರೆಗೆ ಶಿಬಿರ ನಡೆಯಲಿದೆ ಎಂದು ಶ್ರೀ ಧರ್ಮಸ್ಥಳ ನೈಸರ್ಗಿಕ ಚಿಕಿತ್ಸಾ ಮತ್ತು ಯೋಗ ವಿಜ್ಞಾನ ಕಾಲೇಜಿನ ಡಾ.ಆಯಿಷಾ ತಿಳಿಸಿದ್ದಾರೆ.