ಉಪ್ಪಿನಂಗಡಿ: ಎಸ್ಡಿಎಂ ಶಿಕ್ಷಣ ಸಂಸ್ಥೆಗಳ ಆಡಳಿತಕ್ಕೊಳಪಟ್ಟ ಕಾಂಚನದ ಶ್ರೀ ವೆಂಕಟಸುಬ್ರಹ್ಮಣ್ಯಂ ಸ್ಮಾರಕ ಪ್ರೌಢಶಾಲೆ ಹಾಗೂ ಶ್ರೀ ಲಕ್ಷ್ಮೀನಾರಾಯಣ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಬೆಂಗಳೂರಿನಲ್ಲಿ ನಡೆದ ಮಿನಿ ರಾಜ್ಯ ಒಲಂಪಿಕ್ಸ್ಗೆ ಆಯ್ಕೆಯಾಗಿ ಹ್ಯಾಂಡ್ಬಾಲ್ ಹಾಗೂ ನೆಟ್ಬಾಲ್ ಕ್ರೀಡೆಯಲ್ಲಿ ಭಾಗವಹಿಸಿದರು.

14 ವರ್ಷದೊಳಗಿನ ಈ ತಂಡದಲ್ಲಿ ಶ್ರವಣ್, ಶೋಭಿತ್, ಆಕಾಶ್, ಪ್ರೀತಮ್, ವೈಶಾಖ್, ಆಕಾಶ್, ಚರಣ್, ಗೌತಮ್, ರಿತೀಶ್, ಯಶಸ್, ಶಂಕರ್, ನಿತೇಶ್ ಪೂಜಾರಿ, ಹಿತೇಶ್, ತನುಷ್ ಎಸ್., ತನುಷ್, ಅಶಿತ್, ಅದ್ವಿತ್, ತನ್ಮಯಿ ಇದ್ದರು. ಇವರಿಗೆ ಶಾಲಾ ದೈಹಿಕ ಶಿಕ್ಷಣ ಶಿಕ್ಷಕ ಹೇಮೋಧರ್ ಹಾಗೂ ತಾರಾನಾಥ್ ಮತ್ತು ಪುನೀತ್ ಅವರು ತರಬೇತಿಯನ್ನು ನೀಡಿದ್ದಾರೆ. ಗ್ರಾಮೀಣ ಭಾಗದ ಶಾಲೆಯೊಂದರ ವಿದ್ಯಾರ್ಥಿಗಳು ಮಿನಿ ಒಲಂಪಿಕ್ಸ್ನಲ್ಲಿ ಭಾಗವಹಿಸಿರುವ ಅವಕಾಶ ಪಡೆದಿರುವುದಕ್ಕೆ ಶಾಲಾ ಆಡಳಿತ ಮಂಡಳಿ ಶ್ಲಾಘನೆ ವ್ಯಕ್ತಪಡಿಸಿದೆ.