ಕಂಬಳಬೆಟ್ಟು ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಕಿರಿಯ ವಿಭಾಗದಲ್ಲಿ ಅಳಕೆಮಜಲು ಶಾಲೆಗೆ ದ್ವಿತೀಯ ಬಹುಮಾನ

0

ವಿಟ್ಲ: ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಒಜಾಲದಲ್ಲಿ ನ.8ರಂದು ನಡೆದ ಕಂಬಳಬೆಟ್ಟು ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಅಳಕೆಮಜಲು ಕಿರಿಯ ಪ್ರಾಥಮಿಕ ಶಾಲೆಯ ಕಿರಿಯ ವಿಭಾಗದಲ್ಲಿ ವಿದ್ಯಾರ್ಥಿಗಳು ಸಮಗ್ರ ದ್ವಿತೀಯ ಬಹುಮಾನವನ್ನು ಪಡೆದುಕೊಂಡಿರುತ್ತಾರೆ. ಹಿರಿಯ ವಿಭಾಗದಲ್ಲೂ ಹಲವು ಬಹುಮಾನಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.


ಕಿರಿಯ ವಿಭಾಗದಲ್ಲಿ ಸಂಸ್ಕೃತ ಪಠಣ ತನ್ವಿಕಾ ಎಚ್., ಪ್ರಥಮ, ಅರೇಬಿಕ್ ಪಠಣ ಮರಿಯಂ ಝುಲ್ಫಾ ಪ್ರಥಮ, ಭಕ್ತಿಗೀತೆಯಲ್ಲಿ ಯಶಸ್ ಪ್ರಥಮ, ದೇಶಭಕ್ತಿ ಗೀತೆ ಲವ್ಯ ದ್ವಿತೀಯ, ಅಭಿನಯ ಗೀತೆ ಫಾತಿಮತ್ ಅಫ್ರೀನಾ ದ್ವಿತೀಯ, ಆಶುಭಾಷಣ ಯಶಸ್.ಪಿ ದ್ವಿತೀಯ, ಕ್ಲೇ ಮಾಡೆಲಿಂಗ್ ಈಥನ್ ಮಸ್ಕರೇನಸ್ ದ್ವಿತೀಯ, ಕನ್ನಡ ಕಂಠ ಪಾಠ ಫಾತಿಮತ್ ಅಫ್ರಿನಾ, ಚಿತ್ರಕಲೆ ಮುಹಾಮ್ಮದ್ ಝಿಯದ್ ತೃತೀಯ, ಹಿರಿಯ ವಿಭಾಗದಲ್ಲಿ ಧಾರ್ಮಿಕ ಪಠಣ ಮುಯೀನುದ್ದೀನ್ ಪ್ರಥಮ, ಕಥೆ ಹೇಳುವುದರಲ್ಲಿ ಆದ್ಯ ಕೆ. ಪ್ರಥಮ, ಚಿತ್ರಕಲೆ ಫಾತಿಮಾ ಮುಯೀನ ದ್ವಿತೀಯ, ಭಕ್ತಿ ಗೀತೆ ನಿರೀಕ್ಷಾ ದ್ವಿತೀಯ, ಕವನ ವಾಚನ ಮುಹಮ್ಮದ್ ಮುಯೀನುದ್ದೀನ್ ದ್ವಿತೀಯ ಅಶು ಭಾಷಣ ಮಿಸ್ತಾಹ್ ತೃತೀಯ ಬಹುಮಾನಗಳನ್ನು ಪಡೆದುಕೊಂಡಿರುತ್ತಾರೆ.

LEAVE A REPLY

Please enter your comment!
Please enter your name here