ಅಂಬಿಕಾ ವಿದ್ಯಾಲಯದಲ್ಲಿ ವಂದೇ ಮಾತರಂ – 150 : ವಿಶೇಷ ಕಾರ್ಯಕ್ರಮ

0

ಪುತ್ತೂರು: ಭಾರತ ಮಾತೆಯನ್ನು ದುರ್ಗೆಯಾಗಿ, ಸರಸ್ವತಿಯಾಗಿ, ಲಕ್ಷ್ಮಿಯಾಗಿ, ಅಮಲೆಯಾಗಿ, ಸುಜಲೆಯಾಗಿ, ಸುಶ್ಮಿತೆಯಾಗಿ ಕಂಡ ಕವಿ ಬಂಕಿಮ ಚಂದ್ರ ಚಟರ್ಜಿ ಅವರ ಲೇಖನಿಯಿಂದ ಮೂಡಿದ ಗೀತೆಯೇ ವಂದೇ ಮಾತರಂ. ಮೊಟ್ಟಮೊದಲ ಬಾರಿಗೆ ಅಂದಿನ ಕಾಂಗ್ರೆಸ್ ಸಮ್ಮೇಳನದಲ್ಲಿ ಹಾಡಿ ಈ ಗೀತೆಗೆ ಶಕ್ತಿಯನ್ನು ತುಂಬಿದವರು ವಿಷ್ಣು ದಿಗಂಬರ ಪುಲಸ್ಕರ್ ಎಂದು ಅಂಬಿಕಾ ಪದವಿಪೂರ್ವ ವಿದ್ಯಾಲಯದ ಉಪನ್ಯಾಸಕ ಆದರ್ಶ ಗೋಖಲೆ ಹೇಳಿದರು.


ಅವರು ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಬಪ್ಪಳಿಗೆಯಲ್ಲಿನ ಅಂಬಿಕಾ ವಿದ್ಯಾಲಯ ಸಿಬಿಎಸ್‌ಇ ಸಂಸ್ಥೆಯಲ್ಲಿ ವಂದೇ ಮಾತರಂ ಹಾಡಿನ 150ನೇ ವರ್ಷಾಚರಣೆಯ ಪ್ರಯುಕ್ತ ಆಯೋಜಿಸಲಾದ ವಿಶೇಷ ಕಾರ್ಯಕ್ರಮದಲ್ಲಿ ಭಾಗವಹಿಸಿ ಉಪನ್ಯಾಸ ನೀಡಿದರು.


ವೇದಿಕೆಯಲ್ಲಿ ಸಂಸ್ಥೆಯ ಅಧ್ಯಕ್ಷ ಸುಬ್ರಹ್ಮಣ್ಯ ನಟ್ಟೋಜ, ಕಾರ್ಯದರ್ಶಿ ರಾಜಶ್ರೀ ನಟ್ಟೋಜ ಪ್ರಾಂಶುಪಾಲೆ ಮಾಲತಿ ಡಿ. ಹಾಗೂ ಉಪಪ್ರಾಂಶುಪಾಲೆ ಸುಜನಿ ಬೋರ್ಕರ್ ಉಪಸ್ಥಿತರಿದ್ದರು. ಎಂಟನೇ ತರಗತಿಯ ವಿದ್ಯಾರ್ಥಿನಿಯರಾದ ಅನ್ವಿತಾ ಮತ್ತು ಮನಸ್ವಿ ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿದರು. ಸಭಾ ಕಾರ್ಯಕ್ರಮದ ಬಳಿಕ ವಿದ್ಯಾರ್ಥಿಗಳು ವಂದೇ ಮಾತರಂ ಹಾಡಿನ ಮಹತ್ವವನ್ನು ನಾಟಕದ ಮೂಲಕ ಪ್ರದರ್ಶಿಸಿ ವಂದೇ ಮಾತರಂ ಹಾಡಿಗೆ ಹೆಜ್ಜೆ ಹಾಕಿದರು. ಸಾಂಸ್ಕೃತಿಕ ಕಾರ್ಯಕ್ರಮದ ನಿರೂಪಣೆಯನ್ನು ಮಾನ್ಯಲಕ್ಷ್ಮಿ ಹಾಗೂ ಕುವಿರ ನೆರವೇರಿಸಿದರು.

LEAVE A REPLY

Please enter your comment!
Please enter your name here