ಪುತ್ತೂರು: ಇಲ್ಲಿನ ಕಲ್ಲಿಮಾರು ನಿವಾಸಿ, ಹೆಲ್ಮ್ಹೋಲ್ಟ್ಜ್ ಸೆಂಟ್ರಮ್ ಬರ್ಲಿನ್ (HZB) ನಲ್ಲಿ ವೇಗವರ್ಧನೆಗಾಗಿ ವಸ್ತು ರಸಾಯನಶಾಸ್ತ್ರ ವಿಭಾಗದ ಮುಖ್ಯಸ್ಥ ಮತ್ತು ಖ್ಯಾತ ವಸ್ತು ರಸಾಯನಶಾಸ್ತ್ರಜ್ಞ ಪ್ರೊ. ಪ್ರಶಾಂತ್ ಡಬ್ಲ್ಯೂ.ಮಿನೇಜಸ್ ರವರಿಗೆ ಪ್ರತಿಷ್ಠಿತ ವೈಶ್ವಿಕ್ ಭಾರತೀಯ ವೈಜ್ಞಾನಿಕ (VAIBHAV) ಫೆಲೋಶಿಪ್ ಅವಾರ್ಡ್ 2025 ಪ್ರದಾನ ಮಾಡಲಾಗಿದೆ.
ನವದೆಹಲಿಯಲ್ಲಿ ನ.3ರಿಂದ 5ರ ತನಕ ನನಕ ನಡೆದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ನಡೆದ ಎಮರ್ಜಿನ್ ಸೈನ್ಸ್ ಟೆಕ್ನಾಲಜಿ ಅಂಡ್ ಇನ್ನೋವೇಶನ್ ಕಾನ್ಫ್ಲೇವ್ 205ನಲ್ಲಿ ಪ್ರೊ. ಪ್ರಶಾಂತ್ ಡಬ್ಲ್ಯೂ ಮಿನೇಜಸ್ರವರಿಗೆ ವೈಭವ್ ಸ್ಕಾಲರ್ ಶಿಪ್ ನೀಡಿ ಗೌರವಿಸಲಾಯಿತು. ಪ್ರಧಾನಮಂತ್ರಿ ನರೇಂದ್ರ ಹಾಗೂ ತಂತ್ರಜ್ಞಾನ ಸಚಿವ ಡಾ. ಜಿತೇಂದ್ರ ಸಿಂಗ್ದೇಶದ ಉನ್ನತ ಮಟ್ಟದ ಅನೇಕ ಗಣ್ಯರು ಉಪಸ್ಥಿತರಿದ್ದರು.
ಈ ಫೆಲೋಶಿಪ್ ಅವಾರ್ಡ್ ಭಾರತ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯದ ಪ್ರಮುಖ ಕಾರ್ಯಕ್ರಮವಾಗಿದ್ದು, ಇದನ್ನು ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಪ್ರಾರಂಭಿಸಲಾಗಿದೆ. ಇದು ಭಾರತೀಯ STEMM (ವಿಜ್ಞಾನ, ತಂತ್ರಜ್ಞಾನ, ಎಂಜಿನಿಯರಿಂಗ್, ಗಣಿತ ಮತ್ತು ವೈದ್ಯಕೀಯ) ವಲಸೆಗಾರರು ಮತ್ತು ಭಾರತದ ಪ್ರಮುಖ ಸಂಶೋಧನಾ ಸಂಸ್ಥೆಗಳ ನಡುವಿನ ಸಂಬಂಧವನ್ನು ಬಲಪಡಿಸಲು ಪ್ರಾರಂಭಿಸಲಾಗಿದೆ. 2025ರ ಚಕ್ರಕ್ಕೆ ವಸ್ತುಗಳು ಮತ್ತು ಸಂಸ್ಕರಣಾ ತಂತ್ರಜ್ಞಾನಗಳ ಕ್ಷೇತ್ರದಲ್ಲಿ ಆಯ್ಕೆಯಾದ ಏಕೈಕ ವಿಜ್ಞಾನಿ ಪ್ರಶಾಂತ್ ಮಿನೇಜಸ್ ರವರ ವೇಗವರ್ಧನೆ ಮತ್ತು ವಸ್ತು ವಿಜ್ಞಾನದಲ್ಲಿ ಅವರ ಪ್ರವರ್ತಕ ಕೊಡುಗೆಗಳಿಗೆ ಸಾಕ್ಷಿಯಾಗಿದೆ. ಇವರು ಪುತ್ತೂರಿನ ಪ್ರತಿಭಾನ್ವಿತ ಸೈನ್ಸ್ ಅಂಡ್ ಟೆಕ್ನಾಲಜಿ ಇದರಲ್ಲಿ ಪಿಎಚ್ಡಿ ಮಾಡಿ ಪ್ರಸ್ತುತ ಜರ್ಮನಿಯಲ್ಲಿ ಉದ್ಯೋಗದಲ್ಲಿದ್ದಾರೆ. ಜೊತೆಗೆ ಹಲವು ದೇಶಗಳಿಗೆ ಭೇಟಿ ನೀಡಿ ಅಲ್ಲಿ ಸೈನ್ಸ್ ಟೆಕ್ನಾಲಜಿ ಬಗ್ಗೆ ತಮ್ಮ ಸಂಶೋಧನೆಯನ್ನು ಮಂಡಿಸಿರುತ್ತಾರೆ . ಇದರ ಜೊತೆ ಹಲವಾರು ಪ್ರಶಸ್ತಿಗಳನ್ನು ಹಲವು ದೇಶಗಳಲ್ಲಿ ಪಡೆದಿರುತ್ತಾರೆ.
