ಪುತ್ತೂರು: ರೋಟರಿ ಕ್ಲಬ್ ಪುತ್ತೂರು ಇದರ ಆಶ್ರಯದಲ್ಲಿ, ಡಾ.ನಝೀರ್ಸ್ ಡಯಾಬಿಟಿಸ್ ಸೆಂಟರ್ ಪುತ್ತೂರು, ಪ್ರಗತಿ ಸ್ಪೆಷಾಲಿಟಿ ಆಸ್ಪತ್ರೆ ಪುತ್ತೂರು, ಇನ್ನರ್ವೀಲ್ ಕ್ಲಬ್ ಪುತ್ತೂರು, ರೋಟರ್ಯಾಕ್ಟ್ ಕ್ಲಬ್ ಪುತ್ತೂರು, ರೋಟರ್ಯಾಕ್ಟ್ ಕ್ಲಬ್ ಪ್ರಗತಿ ಪ್ಯಾರಾಮೆಡಿಕಲ್ ಕಾಲೇಜು ಪುತ್ತೂರು, ಹಾಸ್ಟಿಟಲ್ ಅಸೋಸಿಯೇಷನ್ ಪುತ್ತೂರು, ಡಾಕ್ಟರ್ಸ್ ಪೋರಮ್ ಪುತ್ತೂರು, ಇಂಡಿಯನ್ ಮೆಡಿಕಲ್ ಅಸೋಸಿಯೇಷನ್ ಪುತ್ತೂರು ಇವುಗಳ ಸಹಯೋಗದಲ್ಲಿ ನ.14ರಂದು ಆಚರಿಸಲ್ಪಡುವ “ವಿಶ್ವ ಮಧುಮೇಹ ದಿನಾಚರಣೆ” ಪ್ರಯುಕ್ತ ವಾಕಥಾನ್-ಜಾಗೃತಿ ಜಾಥಾ ಮತ್ತು ಪ್ರಾಜೆಕ್ಟ್ ಸ್ವೀಟ್ ಚೈಲ್ಡ್ ಮಕ್ಕಳ ಸಮ್ಮಿಲನ ಕಾರ್ಯಕ್ರಮದ ಜಾಥಾದ ಉದ್ಘಾಟನೆ ಪುತ್ತೂರು ಕೆಎಸ್ಆರ್ಟಿಸಿ ಬಸ್ಸು ನಿಲ್ದಾಣದಲ್ಲಿ ಬಳಿಕ ಸಭಾ ಕಾರ್ಯಕ್ರಮ ಪುತ್ತೂರು ಸಾರ್ವಜನಿಕ ಸರಕಾರಿ ಆಸ್ಪತ್ರೆಯ ಆವರಣದಲ್ಲಿ ನ.11ರಂದು ಜರಗಿತು.
ನೀವು ಮಧುಮೇಹಿಗಳಾದರೆ ಒಪ್ಪಿಕೊಳ್ಳಿ ಅದರಲ್ಲಿ ತಪ್ಪೇನು?:
ಪುತ್ತೂರು ತಾಲೂಕು ವೈದ್ಯಾಧಿಕಾರಿ ಡಾ.ದೀಪಕ್ ರೈಯರವರು ಸಮಾರೋಪ ಕಾರ್ಯಕ್ರಮದಲ್ಲಿ ಮಾತನಾಡಿ, ವೈದ್ಯರುಗಳು ತಮ್ಮ ಕರ್ತವ್ಯದ ಜೊತೆಗೆ ಸೇವೆಯನ್ನು ಕೂಡ ಮಾಡಬೇಕಾಗುತ್ತದೆ. ಈ ನಿಟ್ಟಿನಲ್ಲಿ ಡಾ.ನಝೀರ್ರವರ ಸೇವೆ ಅನನ್ಯ. ನಮ್ಮಲ್ಲಿ ಯಾವುದೇ ಕಾಯಿಲೆ ಇದ್ರೆ ಅದನ್ನು ಬಚ್ಚಿಟ್ಟುಕೊಳ್ಳುವುದರಲ್ಲಿ ಯಾವುದೇ ಪ್ರಯೋಜನವಿಲ್ಲ. ನಮಗೆ ಇಂತಹ ಕಾಯಿಲೆ ಇದೆ ಅಂತ ತಜ್ಞ ವೈದ್ಯರಲ್ಲಿ ಹೇಳಿ, ಆ ಕಾಯಿಲೆಗೆ ಸೂಕ್ತ ಚಿಕಿತ್ಸೆ ಪಡೆದುಕೊಳ್ಳಿ. ತನ್ನ ಕಾಯಿಲೆಗೆ ಯಾವುದೇ ನಾಟಿ ಔಷಧಿ ತೆಗೆದುಕೊಂಡರೆ ಕಾಯಿಲೆ ವಾಸಿಯಾಗೋಲ್ಲ. ನೀವು ಮಧುಮೇಹಿಗಳಾದರೆ ಅದನ್ನು ಒಪ್ಪಿಕೊಳ್ಳಿ ಅದರಲ್ಲಿ ತಪ್ಪೇನು?. ಅದಕ್ಕೆ ಬೇಕಾದ ಚಿಕಿತ್ಸೆ ಇದೆ, ಭಯಪಟ್ಟುಕೊಳ್ಳಬೇಡಿ. ಕೂಡಲೇ ತಜ್ಞ ವೈದ್ಯರಲ್ಲಿ ಭೇಟಿಯಾಗಿ ಆರೋಗ್ಯವನ್ನು ಕಾಪಾಡಿಕೊಳ್ಳಿ.
ಉತ್ತಮ ಆರೋಗ್ಯಕ್ಕೆ ಉತ್ತಮ ಆರೋಗ್ಯಶೈಲಿ ಮುಖ್ಯ-ಡಾ.ನಝೀರ್ ಅಹಮ್ಮದ್:
ಕಾರ್ಯಕ್ರಮದ ಸಂಯೋಜಕ, ಕಲ್ಲಾರೆ ಡಾ.ನಝೀರ್ಸ್ ಡಯಾಬಿಟಿಸ್ ಸೆಂಟರ್ನ ಡಾ.ನಝೀರ್ ಅಹಮ್ಮದ್ ಮಾತನಾಡಿ, ನಮ್ಮ ಆರೋಗ್ಯ ಚೆನ್ನಾಗಿರಬೇಕಾದರೆ ನಾವು ಬೆಳಿಗ್ಗೆ ಎದ್ದು ನಡೆಯಬೇಕು. ನಿಮ್ಮ ಜೊತೆ ನಾವಿದ್ದೇವೆ, ನಾವೆಲ್ಲಾ ನಮ್ಮ ಆರೋಗ್ಯಕ್ಕೋಸ್ಕರ ಒಟ್ಟಾಗಿ ನಡೆಯೋಣ. ಮಧುಮೇಹ ಕುರಿತು ವೈದ್ಯರುಗಳ ಬಳಿ ಹೋದರೆ ಅದು ಪರಿಹಾರವಾಗೋದಿಲ್ಲ, ವೈದ್ಯರುಗಳ ಸೂಚನೆಗಳನ್ನು ಪಾಲಿಸಿ ನಮ್ಮಲ್ಲಿನ ಆಹಾರ ಕ್ರಮದಲ್ಲಿ ಸುಧಾರಿಸುವಿಕೆ, ನಿರಂತರ ವ್ಯಾಯಾಮ, ಒತ್ತಡರಹಿತ ಜೀವನವನ್ನು ಕೂಡ ಹೊಂದಬೇಕಾಗುತ್ತದೆ. ರೋಟರಿ ಪುತ್ತೂರು ಕಳೆದ 61 ವರ್ಷಗಳಲ್ಲಿ ಹಲವಾರು ಶಾಶ್ವತ ಪ್ರಾಜೆಕ್ಟ್ಗಳನ್ನು ಸಮಾಜಕ್ಕೆ ನೀಡಿದೆ. ಡಯಾಬಿಟಿಸ್ನಲ್ಲಿ ಟೈಪ್-1 ಹ ಟೈಪ್-2 ಡಯಾಬಿಟಿಸ್ ಇದ್ದು ಇದರ ಬಗ್ಗೆ ವೈದ್ಯರುಗಳಲ್ಲಿ ಸೂಕ್ತ ಸಮಯದಲ್ಲಿ ಮಾಹಿತಿ ಪಡೆದುಕೊಂಡು ಆರೋಗ್ಯವನ್ನು ಉತ್ತಮವಾಗಿಸಿ ಎಂದರು.
ಮಧುಮೇಹ ನಿಯಂತ್ರಣಕ್ಕೆ ಮೊದಲು ಮನಸ್ಸು ಮುಖ್ಯ-ಡಾ.ಶ್ರೀಪ್ರಕಾಶ್ ಬಿ;
ರೋಟರಿ ಕ್ಲಬ್ ಪುತ್ತೂರು ಅಧ್ಯಕ್ಷ ಡಾ.ಶ್ರೀಪ್ರಕಾಶ್ ಬಿ.ರವರು ಜಾಗೃತಿ ಜಾಥಾಗೆ ಚಾಲನೆ ನೀಡಿ ಮಾತನಾಡಿ, ಮಧುಮೇಹ ನಿಯಂತ್ರಣದಲ್ಲಿರಬೇಕಾದರೆ ಮನಸ್ಸು ಮೊದಲು ಕೇಂದ್ರೀಕೃತರಾಗಿಸಬೇಕು ಜೊತೆಗೆ ನಿಯಮಿತ ವ್ಯಾಯಾಮವನ್ನು ದಿನನಿತ್ಯ ಅಳವಡಿಸಿಕೊಳ್ಳಬೇಕು. ಪ್ರಸಕ್ತ ದಿನಗಳಲ್ಲಿ ಒತ್ತಡದ ಜೀವನ ಇಲ್ಲದಿರುವರು ಇಲ್ಲ. ನಾವು ಶಾರೀರಿಕ ಚಟುವಟಿಕೆಗಳಲ್ಲಿ ಆದಷ್ಟು ತೊಡಗಿಸಿಕೊಂಡಾಗ ನಮ್ಮ ಮನಸ್ಸು ಉಲ್ಲಾಸಭರತವಾಗುತ್ತದೆ. ಹುಟ್ಟಿನಿಂದ ಸಾಯುವವರೆಗೆ ನಾವು ಯಾವುದೇ ಕಾಯಿಲೆಯಿಂದ ಬಳಲದ ರೀತಿಯಲ್ಲಿ ಸಂತೋಷದಿಂದ ಬದುಕುವ ಜೀವನ ನಮ್ಮದಾಗಲಿ ಎಂದರು.
ಅಂತರ್ ರಾಷ್ಟ್ರೀಯ ದತ್ತು ಮಾಸಾಚರಣೆ ಪ್ರತಿಜ್ಞಾವಿಧಿ:
ಅಂತರ್ ರಾಷ್ಟ್ರೀಯ ದತ್ತು ಮಾಸಾಚರಣೆ-2025ರ ಕುರಿತು ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಮಕ್ಕಳ ರಕ್ಷಾಣಾಧೀಕ ಅಸಾಂಸ್ಥಿಕ ವಜೀರ್ ಅಹಮ್ಮದ್ರವರು ಕಾನೂನು ಬದ್ಧ ದತ್ತು ಸ್ವೀಕಾರ ಮತ್ತು ದತ್ತು ಅಧಿನಿಯಮಗಳ ಕುರಿತು ಮತ್ತು ಮಕ್ಕಳ ರಕ್ಷಣಾಧಿಕಾರಿ ಕುಮಾರ್ ಶೆಟ್ಟಿಗಾರ್ರವರು ದತ್ತು ಸ್ವೀಕಾರದ ಸಂಕಲ್ಪ ಸಂದೇಶ ಕುರಿತು ಪ್ರತಿಜ್ಞಾವಿಧಿ ಬೋಧಿಸಿದರು.
ಇನ್ನರ್ ವೀಲ್ ಕ್ಲಬ್ ಅಧ್ಯಕ್ಷೆ ರೂಪರೇಖ ಹಾಗೂ ಸದಸ್ಯರು, ಡಾಕ್ಟರ್ಸ್ ಫೋರಂ ಅಧ್ಯಕ್ಷ ಡಾ.ಸುರೇಶ್ ಪುತ್ತೂರಾಯ ಹಾಗೂ ಸದಸ್ಯರು, ರೋಟರ್ಯಾಕ್ಟ್ ಕ್ಲಬ್ ಪುತ್ತೂರು ಅಧ್ಯಕ್ಷ ವಿನೀತ್ ಹಾಗೂ ಸದಸ್ಯರು, ಪ್ರಗತಿ ಪ್ಯಾರಾಮೆಡಿಕಲ್ ಇದರ ನಿರ್ದೇಶಕಿ ಪ್ರೀತಾ ಹೆಗ್ಡೆ ಹಾಗೂ ವಿದ್ಯಾರ್ಥಿಗಳು, ಸಾರ್ವಜನಿಕ ಸರಕಾರಿ ಆಸ್ಪತ್ರೆಯ ನರ್ಸಿಂಗ್ ಸೂಪರಿಂಟೆಂಡೆಂಟ್ ಪುಷ್ಪಾವತಿ, ಹಾಸ್ಟಿಟಲ್ ಅಸೋಸಿಯೇಷನ್ ಇದರ ಡಾ.ಭಾಸ್ಕರ್ ಎಸ್ ಹಾಗೂ ಸದಸ್ಯರು, ರೋಟರಿ ಕ್ಲಬ್ ಪುತ್ತೂರು ಸದಸ್ಯರು, ಫಾ.ಪತ್ರಾವೋ ಆಸ್ಪತ್ರೆಯ ಸಿಬ್ಬಂದಿಗಳು, ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಮತ್ತು ಮಕ್ಕಳ ಸಹಾಯವಾಣಿ ಸಿಬ್ಬಂದಿಗಳು ಭಾಗವಹಿಸಿದ್ದರು. ಬೊಳ್ವಾರು ಪ್ರಗತಿ ಪ್ಯಾರಾಮೆಡಿಕಲ್ ಕಾಲೇಜಿನ ವಿದ್ಯಾರ್ಥಿನಿಯರು ಪ್ರಾರ್ಥಿಸಿದರು. ರೋಟರಿ ಕ್ಲಬ್ ಪುತ್ತೂರು ಅಧ್ಯಕ್ಷ ಡಾ.ಶ್ರೀಪ್ರಕಾಶ್ ಬಿ. ಸ್ವಾಗತಿಸಿ, ಕಾರ್ಯದರ್ಶಿ ಪ್ರೊ|ಸುಬ್ಬಪ್ಪ ಕೈಕಂಬ ವಂದಿಸಿದರು. ಎರಿಸ್ ಕಂಪೆನಿಯ ಜಯಪ್ರಕಾಸ್ ಹಾಗೂ ಅಹಮ್ಮದ್ ನಜ್ರೆನ್, ಲಿನಕ್ಸ್ ಕಂಪೆನಿಯ ಕೃಷ್ಣ, ಮ್ಯಾನ್ಕೈಂಡ್ ಕಂಪೆನಿಯ ತೌಸಿಫ್ ಮತ್ತು ಮನೋಜ್, ಐಪಿಸಿಎ ಕಂಪೆನಿಯ ಯಾಸಿರ್ ಅರಾಫತ್, ಡಾ.ನಝೀರ್ ಡಯಾಬಿಟಿಸ್ ಸೆಂಟರ್ ಸಿಬ್ಬಂದಿಗಳು ಸಹಕರಿಸಿದರು.
ವಾಕಥಾನ್ ಜಾಥಾ..
ವಿಶ್ವ ಮಧುಮೇಹ ದಿನಾಚರಣೆ ಪ್ರಯುಕ್ತ ಬೆಳಿಗ್ಗೆ ಕೆ.ಎಸ್.ಆರ್ಟಿ.ಸಿ ಬಸ್ಸು ನಿಲ್ದಾಣದಲ್ಲಿ ನಡೆದ ವಾಕಥಾನ್ ಜಾಥಾವನ್ನು ರೋಟರಿ ಕ್ಲಬ್ ಪುತ್ತೂರು ಅಧ್ಯಕ್ಷ ಡಾ.ಶ್ರೀಪ್ರಕಾಶ್ ಬಿ.ರವರು ಉದ್ಘಾಟಿಸಿ ಚಾಲನೆ ನೀಡಿದರು. ಬಳಿಕ ಜಾಥಾವು ಕೆ.ಎಸ್.ಆರ್.ಟಿಸಿ ಬಸ್ಸು ನಿಲ್ದಾಣದಿಂದ ಹೊರಟು ಪುತ್ತೂರು ಸಿಟಿ ಆಸ್ಪತ್ರೆ ಮಾರ್ಗವಾಗಿ ಅರುಣಾ ಚಿತ್ರಮಂದಿರ-ಮುಖ್ಯರಸ್ತೆ-ಶ್ರೀಧರ್ ಭಟ್ ರಸ್ತೆ ಮೂಲಕ ಸಂಚರಿಸಿ ಪುತ್ತೂರು ಸಾರ್ವಜನಿಕ ಆಸ್ಪತ್ರೆ ಬಳಿ ತೆರೆ ಕಾಣಲಾಯಿತು. ವಾಕಥಾನ್ ಜಾಥಾದಲ್ಲಿ ಭಾಗವಹಿಸಿದವರು ಬಿಳಿ ಟೀ-ಶರ್ಟ್ ಅನ್ನು ಧರಿಸಿದ್ದರು.
ಪ್ರಾಜೆಕ್ಟ್ ಸ್ವೀಟ್ ಚೈಲ್ಡ್..
ಟೈಪ್ 1 ಮಧುಮೇಹದಿಂದ ಬಳಲುತ್ತಿರುವವರಿಗೆ ಡಾ.ನಝೀರ್ ಡಯಾಬಿಟಿಸ್ ಸೆಂಟರ್, ರೋಟರಿ ಕ್ಲಬ್ ಪುತ್ತೂರು, ಇಡಿಆರ್ಟಿ ಬೆಂಗಳೂರು ವತಿಯಿಂದ ಇಂತಹ ಮಕ್ಕಳಿಗೆ ನೆರವಾಗಲು ಪ್ರಾಜೆಕ್ಟ್ ಸ್ವೀಟ್ ಚೈಲ್ಡ್(ರೋಟರಿ ಪುತ್ತೂರು ಡಯಾಬಿಟಿಕ್ ಚಿಲ್ಡ್ರನ್ ಕೇರ್ ಸೆಂಟರ್) ಎಂಬ ಯೋಜನೆಯನ್ನು ಈಗಾಗಲೇ ರೂಪುಗೊಳಿಸಲಾಗಿದೆ. ಈ ಯೋಜನೆಯು ಮಕ್ಕಳಿಗೆ ವೈದ್ಯಕೀಯ ನೆರವು, ಅವಶ್ಯಕ ವೈದ್ಯಕೀಯ ಉಪಕರಣಗಳು, ಔಷಧ ವಿತರಿಸುವ ಮತ್ತು ಅವಶ್ಯಕತೆ ಇರುವವರಿಗೆ ಶಿಕ್ಷಣಕ್ಕೆ ಆರ್ಥಿಕ ನೆರವನ್ನು ಒದಗಿಸುವ ಉದ್ದೇಶಗಳನ್ನು ಹೊಂದಿದೆ. ಕಳೆದ ನಾಲ್ಕೈದು ವರ್ಷಗಳಿಂದ ಸುಮಾರು 15 ಮಂದಿ ಫಲಾನುಭವಿಗಳಿಗೆ ಉಚಿತ ಇನ್ಸುಲಿನ್, ಗ್ಲುಕೋಮೀಟರ್ ಹಾಗೂ ಟೆಸ್ಟ್ ಸ್ಟ್ರಿಪ್ಗಳನ್ನು ನಿರಂತರವಾಗಿ ಒದಗಿಸುವ ಮಾನವೀಯ ಸೇವಾ ಯೋಜನೆಯಾಗಿದ್ದು ಮಾತ್ರವಲ್ಲ ಈ ಫಲಾನುಭವಿಗಳು ಸಮಾಜದಲ್ಲಿ ಮುಕ್ತವಾಗಿ ಜೀವನ ನಡೆಸುವಲ್ಲಿ ಸಫಲರಾಗಿರುತ್ತಾರೆ.
-ಡಾ.ನಝೀರ್ ಅಹಮ್ಮದ್,
ಕಾರ್ಯಕ್ರಮದ ಸಂಯೋಜಕರು
ಮಧುಮೇಹ ಉಚಿತ ಪರೀಕ್ಷೆ..
ಮಧುಮೇಹ-120
ಊಃಂ೧ಅ-25
