ಪುತ್ತೂರು: ಮರಾಟಿ ಸಮಾಜ ಸೇವಾ ಸಂಘ ಗ್ರಾಮ ಸಮಿತಿ ಕೊಳ್ತಿಗೆ-ಪೆರ್ಲಂಪಾಡಿ ಮತ್ತು ಭಾರತೀಯ ಅಂಚೆ ಇಲಾಖೆ ಪುತ್ತೂರು ವಿಭಾಗ ಇವುಗಳ ಜಂಟಿ ಆಶ್ರಯದಲ್ಲಿ ಮರಾಟಿ ಮಹಿಳಾ ಘಟಕ ಕೊಳ್ತಿಗೆ ಇವರ ಸಹಕಾರದೊಂದಿಗೆ ಸಾರ್ವಜನಿಕ ಆಧಾರ್ ಕಾರ್ಡ್ ನೋಂದಾವಣೆ, ತಿದ್ದುಪಡಿ ಶಿಬಿರ ಮತ್ತು ಅಂಚೆ ಇಲಾಖೆಯ ವಿವಿಧ ಸೇವಾ ಸೌಲಭ್ಯಗಳ ಮಾಹಿತಿ ಕಾರ್ಯಕ್ರಮ ಕೊಳ್ತಿಗೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಸಭಾಂಗಣದಲ್ಲಿ ನಡೆಯಿತು.

ಕೊಳ್ತಿಗೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷರಾದ ತೀರ್ಥಾನಂದ ದುಗ್ಗಳ ಅವರು ದೀಪ ಬೆಳಗಿಸಿ ಉದ್ಘಾಟಿಸಿ, ಕೊಳ್ತಿಗೆ -ಪೆರ್ಲಂಪಾಡಿ ಮರಾಟಿ ಸಮಾಜ ಸೇವಾ ಸಂಘ ಗ್ರಾಮ ಸಮಿತಿಯವರು, ಹಲವಾರು ಸಮಾಜಮುಖಿ ಕೆಲಸಗಳನ್ನು ಮಾಡುತ್ತಿದ್ದು,ಆಧಾರ್ ಶಿಬಿರದಿಂದ ಸಾರ್ವಜನಿಕರಿಗೆ ಅತ್ಯಂತ ಪ್ರಯೋಜನಕಾರಿಯಾಗಿದೆ. ಮುಂದೆಯೂ ಸಮಾಜಮುಖಿ ಸೇವಾ ಕಾರ್ಯಕ್ರಮಗಳು ನಡೆಯಲಿ ಎಂದು ಶುಭ ಹಾರೈಸಿದರು.
ಸುಳ್ಯ ಅಂಚೆ ಇಲಾಖೆಯ ಮೇಲ್ವಿಚಾರಕ ಬಾಬು ಅವರು ಅಂಚೆ ಇಲಾಖೆಯ ಉಳಿತಾಯ ಖಾತೆ,ಸುಕನ್ಯ ಸಮೃದ್ಧಿ ಯೋಜನೆ,ಜೀವ ವಿಮೆ,ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ ಹಾಗೂ ಪ್ರಧಾನಮಂತ್ರಿ ಜೀವನ್ ಭೀಮಾ ಯೋಜನೆ, ಅಟಲ್ ಪೆಂಶನ್ ಯೋಜನೆಗಳು,ಆರೋಗ್ಯ ವಿಮೆಯ ಮಾಹಿತಿಯನ್ನು ನೀಡಿ ಸಾರ್ವಜನಿಕರು ಸೌಲಭ್ಯಗಳನ್ನು ಪಡೆದುಕೊಳ್ಳುವಂತೆ ವಿನಂತಿಸಿದರು.
ಮಾಲೆತ್ತೋಡಿ ಸ.ಕಿ.ಪ್ರಾ.ಶಾಲಾ ಮುಖ್ಯಗುರು ತಿಮ್ಮಪ್ಪ ಕೊಡ್ಲಾಡಿ ಮಾತನಾಡಿ, ಮರಾಟಿ ಸಮಾಜ ಸೇವಾ ಸಂಘ ಕೊಳ್ತಿಗೆ ಗ್ರಾಮ ಸಮಿತಿಯವರು ಕೇವಲ ಅವರ ಸಮಾಜದವರಿಗೆ ಮಾತ್ರ ಕೆಲಸಗಳನ್ನು ಮಾಡದೇ ಸಾರ್ವಜನಿಕರಿಗೆ ಹೆಚ್ಚು ಪ್ರಯೋಜನವಾಗುವ ಕಾರ್ಯಕ್ರಮಗಳನ್ನು ಮಾಡುತ್ತಿದ್ದಾರೆ ಆಧಾರ್ ಶಿಬಿರ ವಿದ್ಯಾಥಿಗಳಿಗೆ ಮತ್ತು ಸಣ್ಣ ಮಕ್ಕಳಿಗೆ ವೃದ್ಧರಿಗೆ ಗ್ರಾಮೀಣ ಮಟ್ಟದಲ್ಲಿ ನಡೆದಾಗ ಅತ್ಯಂತ ಅನುಕೂಲವಾಗುತ್ತದೆ ಎಂದರು.
ಕೊಳ್ತಿಗೆ ಗ್ರಾಮ ಪಂಚಾಯತ್ ಸದಸ್ಯೆ,ಕೊಳ್ತಿಗೆ ಪೆರ್ಲಂಪಾಡಿ ಮರಾಟಿ ಮಹಿಳಾ ಘಟಕದ ಅಧ್ಯಕ್ಷೆ ನಾಗವೇಣಿ ಕೆ ಅವರು ಶುಭ ಹಾರೈಸಿದರು.
ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕೊಳ್ತಿಗೆ-ಪೆರ್ಲಂಪಾಡಿ ಮರಾಟಿ ಸಮಾಜ ಸೇವಾ ಸಂಘ ಗ್ರಾಮ ಸಮಿತಿಯ ಗೌರವಾಧ್ಯಕ್ಷರಾದ ವೆಂಕಪ್ಪ ನಾಯ್ಕ ಕಣ್ಣಕಜೆ ಮಾತನಾಡಿ, ಅಂಚೆ ಇಲಾಖೆ ಜತೆ ಸೇರಿ ನಾವು ಮಾಡುತ್ತಿರುವ 4ನೇ ಕಾರ್ಯಕ್ರಮವಾಗಿದೆ. ಸಾರ್ವಜನಿಕರು ಈ ಶಿಬಿರದ ಪ್ರಯೋಜನವನ್ನು ಪಡೆದುಕೊಂಡು ಇನ್ನೂ ಮುಂದೆಯೂ ಸಹಕಾರ ನೀಡುವಂತೆ ವಿನಂತಿಸಿದರು.
ಕೊಳ್ತಿಗೆ ಗ್ರಾಮ ಪಂಚಾಯತ್ ಅಧ್ಯಕ್ಷೆ ಅಕ್ಕಮ್ಮ ಕಾರ್ಯಕ್ರಮ ಮುಕ್ತಾಯದವರೆಗೆ ಇದ್ದು ಸಹಕರಿಸಿದರು.
ಸಭೆಯಲ್ಲಿ ಗ್ರಾಮದ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಸದಸ್ಯರು,ಪೆರ್ಲಂಪಾಡಿ ಅಂಚೆ ಪಾಲಕ ರಾಮಕೃಷ್ಣ ರಾವ್, ಅಂಚೆ ಸಹಾಯಕ ವೀರಪ್ಪ ಗೌಡ ಪಿ ಬಿ ಮತ್ತು ಮರಾಟಿ ಗ್ರಾಮ ಸಮಿತಿ, ಮರಾಟಿ ಮಹಿಳಾ ಘಟಕದ ಪದಾಧಿಕಾರಿಗಳು ಮತ್ತು ಸದಸ್ಯರು ಉಪಸ್ಥಿತರಿದ್ದರು.
ಕುಮಾರಿ ಪ್ರತೀಕ್ಷಾ ಕೋಡಿಮಜಲು ಪ್ರಾರ್ಥಿಸಿದರು. ಸಂಘದ ಕಾರ್ಯದರ್ಶಿ ಜಗನ್ನಾಥ ಮಾಲೆತ್ತೋಡಿ ಸ್ವಾಗತಿಸಿ, ಸಂಘದ ನಿಕಟಪೂರ್ವ ಕಾರ್ಯದರ್ಶಿ ಭವಿತ್ ಮಾಲೆತ್ತೋಡಿ ವಂದಿಸಿದರು. ಸಂಘದ ಅಧ್ಯಕ್ಷರಾದ ಸುಬ್ಬಯ್ಯ ಕೆಮ್ಮತಕಾನ ಕಾರ್ಯಕ್ರಮ ನಿರೂಪಿದರು