ಪಾಣಾಜೆ: ಸಂತೃಪ್ತಿ ಜ್ಞಾನ ವಿಕಾಸ ಕೇಂದ್ರದ ವಾರ್ಷಿಕೋತ್ಸವ

0

ಯೋಜನೆಯ ಚಿಂತನೆಯಿಂದ ಊರಿನ ಬಡತನ ದೂರವಾಗಿದೆ: ಶ್ರೀಕೃಷ್ಣ ಬೊಳ್ಳಿಲ್ಲಾಯ


ಪುತ್ತೂರು: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ ಸಿ ಟ್ರಸ್ಟ್ ಪುತ್ತೂರು ತಾಲೂಕಿನ ಮಹಿಳಾ ಜ್ಞಾನವಿಕಾಸ ಕಾರ್ಯಕ್ರಮದಡಿಯಲ್ಲಿ ಬೆಟ್ಟಂಪಾಡಿ ವಲಯದ ಪಾಣಾಜೆ ಕಾರ್ಯಕ್ಷೇತ್ರದ ಸಂತೃಪ್ತಿ ಜ್ಞಾನವಿಕಾಸ ಕೇಂದ್ರದಲ್ಲಿ ಕೇಂದ್ರದ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೇಂದ್ರದ ಸದಸ್ಯೆ ಸರಸ್ವತಿ ವಹಿಸಿದ್ದರು. ಕಾರ್ಯಕ್ರಮದ ಉದ್ಘಾಟನೆಯನ್ನು ರಣಮಂಗಳ ಕ್ಷೇತ್ರ ಪಾಣಾಜೆಯ ಆಡಳಿತ ಮೊಕ್ತೇಸರರಾಗಿರುವ ಶ್ರೀಕೃಷ್ಣ ಬೊಳ್ಳಿಲ್ಲಾಯ್ಯ ಕಡಮಾಜೆ ಇವರು ನೆರವೇರಿಸಿ ಗ್ರಾಮ ಅಭಿವೃದ್ಧಿ ಯೋಜನೆಯಿಂದ ನಡೆಯುವ ಹಲವಾರು ಕಾರ್ಯಕ್ರಮಗಳಿಂದ ಊರಿನ ಬಡತನವು ದೂರವಾಗಿದೆ, ಮಧ್ಯವರ್ಜನ ಶಿಬಿರದಿಂದ ಮಹಿಳೆಯರು ತಮ್ಮ ಕುಟುಂಬವನ್ನು ಬಲಪಡಿಸಿ ಮುನ್ನಡೆಸುತ್ತಿದ್ದಾರೆ, ಜ್ಞಾನ ವಿಕಾಸದಿಂದ ಮಹಿಳೆಯರು ತಮ್ಮ ಒತ್ತಡವನ್ನು ದೂರ ಸರಿಸಿ ಖುಷಿ ಪಡೆಯುತ್ತಿದ್ದಾರೆ ಎಂದು ಹೇಳಿ ಶುಭ ಹಾರೈಸಿದರು.

ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದ ಅಚ್ಚುತ್ ನಾಯಕ್ ಪುತ್ತೂರು ಇವರು ಮಾತನಾಡುತ್ತಾ ಮಹಿಳೆ ಮತ್ತು ಕುಟುಂಬ ಸಮಾಜದಲ್ಲಿ ಹೇಗಿರಬೇಕು, ಮಹಿಳೆ ತನ್ನ ಕುಟುಂಬದ ಎಲ್ಲಾ ಸದಸ್ಯರನ್ನು ಪ್ರೀತಿಸಿ ಒಳ್ಳೆಯ ರೀತಿಯಲ್ಲಿ ಮುನ್ನಡೆಸಿಕೊಂಡು ಹೋದಾಗ ಆ ಕುಟುಂಬ ಆ ಮನೆ ಆನಂದದಿಂದಿರುತ್ತದೆ ಎಂದು ಹೇಳಿ ಶುಭ ಹಾರೈಸಿದರು.


ದಕ್ಷಿಣ ಕನ್ನಡ ೨ ಜಿಲ್ಲೆಯ ಜಿಲ್ಲಾ ನಿರ್ದೇಶಕರಾದ ಬಾಬು ನಾಯ್ಕ್‌ರವರು ಮಾತನಾಡುತ್ತಾ ಮಹಿಳೆಯರ ಆಸಕ್ತಿಯನ್ನು ಮತ್ತು ಪ್ರತಿಭೆಯನ್ನು ಗುರುತಿಸಿ ಸರಿಯಾದ ವೇದಿಕೆಯನ್ನು ಸೃಷ್ಟಿ ಮಾಡಿ ಕೊಟ್ಟಿರುವುದೇ ಜ್ಞಾನವಿಕಾಸ ಕಾರ್ಯಕ್ರಮ. ಮಹಿಳೆಯರಲ್ಲಿ ಬದಲಾವಣೆ ಆಗಿದೆ, ತಾಲೂಕಿನಲ್ಲಿ ಒಂದು ಮಾದರಿ ಜ್ಞಾನವಿಕಾಸ ಕೇಂದ್ರ ಎಂಬ ಹೆಗ್ಗಳಿಕೆಯನ್ನು ಪಡೆದುಕೊಳ್ಳಿ ಎಂದು ಶುಭ ಹಾರೈಸಿದರು. ಪಾಣಾಜೆಯ ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ನಾರಾಯಣ ಪ್ರಕಾಶ್ ನೆಲ್ಲಿತ್ತಿಮಾರು ಮಾತನಾಡುತ್ತಾ ಮಹಿಳೆಯರಲ್ಲಿ ಧೈರ್ಯವನ್ನು ತಂದು ವೇದಿಕೆ ಮುಂದೆ ಮಾತನಾಡುವಂತಹ ಛಲ ಧೈರ್ಯ ತುಂಬಿರುವಂತಹದ್ದು ಜ್ಞಾನವಿಕಾಸ ಕಾರ್ಯಕ್ರಮ ಗ್ರಾಮ ಗ್ರಾಮಗಳ ವಿಕಾಸವಾಗಿ ಗ್ರಾಮಕ್ಕೆ ಸ್ವಾತಂತ್ರ್ಯ ಬಂದಂತದ್ದು ಗ್ರಾಮಾಭಿವೃದ್ಧಿ ಯೋಜನೆಯಿಂದ ಕುಟುಂಬದ ಸರ್ವತೋಮುಖ ಅಭಿವೃದ್ಧಿಯು ಗ್ರಾಮಾಭಿವೃದ್ಧಿ ಯೋಜನೆಯಿಂದ ಆಗಿದೆ ಎಂದರು.


ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಕೇಂದ್ರದ ಸದಸ್ಯರು ವಿವಿಧ ರೀತಿಯ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನೀಡಿದರು. ಕೇಂದ್ರದ ಸದಸ್ಯರು ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸಿದರು. ಕೇಂದ್ರದ ಸದಸ್ಯರಿಗೆ ವಿವಿಧ ರೀತಿಯ ಆಟೋಟ ಸ್ಪರ್ಧೆಗಳನ್ನು ನೆರವೇರಿಸಿ ವಿಜೇತರಿಗೆ ಬಹುಮಾನ ನೀಡಿ ಅಭಿನಂದಿಸಲಾಯಿತು.

ಕಾರ್ಯಕ್ರಮದಲ್ಲಿ ತಾಲೂಕು ಜನಜಾಗೃತಿ ವೇದಿಕೆಯ ಸದಸ್ಯರಾಗಿರುವಂತಹ ಸದಾಶಿವ ರೈ ಸೂರಂಬೈಲು, ಸಿಎ ಬ್ಯಾಂಕ್ ಪಾಣಾಜೆಯ ಮಾಜಿ ಅಧ್ಯಕ್ಷ ರವೀಂದ್ರ ಭಂಡಾರಿ, ಹಾಲು ಉತ್ಪಾದಕರ ಸಂಘ ಪಾಣಾಜೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸತ್ಯನಾರಾಯಣ ಅಡಿಗ, ವಲಯದ ಮೇಲ್ವಿಚಾರಕ ಸೋಹನ್ ಗೌಡ,ಪಾಣಾಜೆ ಒಕ್ಕೂಟದ ಅಧ್ಯಕ್ಷ ಐತ್ತಪ್ಪ ನಾಯ್ಕ, ಪಾಣಾಜೆ ಎ ಒಕ್ಕೂಟದ ಅಧ್ಯಕ್ಷೆ ಕಮಲ, ಒಕ್ಕೂಟದ ಪದಾಧಿಕಾರಿಗಳು,ಶೌರ್ಯ ವಿಪತ್ತು ಘಟಕದವರು, ಜ್ಞಾನವಿಕಾಸ ಕೇಂದ್ರದ ಸದಸ್ಯರು, ಗಿಐಇ, ಒಕ್ಕೂಟದ ಸದಸ್ಯರು ಉಪಸ್ಥಿತರಿದ್ದರು. ಜ್ಞಾನವಿಕಾಸ ಸಮನ್ವಯಾಧಿಕಾರಿ ಕಾವ್ಯಶ್ರೀ ಕಾರ್ಯಕ್ರಮ ನಿರೂಪಿಸಿದರು. ಸೇವಾಪ್ರತಿನಿಧಿ ಜಯಶ್ರೀ ಸ್ವಾಗತಿಸಿದರು.ಕೇಂದ್ರದ ಸಂಯೋಜಕಿ ಜಯಶ್ರೀ ಕೇಂದ್ರದ ವರದಿ ಮಂಡನೆ ಮಾಡಿದರು. ಕೇಂದ್ರದ ಸದಸ್ಯೆ ಭವಾನಿ ವಂದಿಸಿದರು.

LEAVE A REPLY

Please enter your comment!
Please enter your name here