ವಿದ್ಯಾಮಾತಾ ಅಕಾಡೆಮಿಯಲ್ಲಿ ಟೆರಿಟೋರಿಯಲ್ ಆರ್ಮಿ ನೇಮಕಾತಿ 2025ಕ್ಕೆ ಉಚಿತ ತರಬೇತಿ ಆಯೋಜನೆ

0

ಮೈದಾನ ತರಬೇತಿ ಹಾಗೂ ಲಿಖಿತ ಪರೀಕ್ಷೆಗೆ ಉಚಿತ ವಸತಿಯುತ ತರಬೇತಿ ನೀಡಲಿರುವ ಪ್ರತಿಷ್ಠಿತ ತರಬೇತಿ ಸಂಸ್ಥೆ

ಪುತ್ತೂರು: ನ.21 ರಿಂದ 23ರ ವರೆಗೆ ಬೆಳಗಾವಿಯಲ್ಲಿ ನಡೆಯಲಿರುವ Teritorial Army ನೇಮಕಾತಿಗೆ ಹಾಜರಾಗುವ ಅಭ್ಯರ್ಥಿಗಳಿಗೆ ಅನುಕೂಲ ಆಗುವ ನಿಟ್ಟಿನಲ್ಲಿ ನ.15ರಿಂದ 19 ರ ವರೆಗೆ ಮೈದಾನ ತರಬೇತಿ ಮತ್ತು ಲಿಖಿತ ಪರೀಕ್ಷೆಯ ಉಚಿತ ಪೂರ್ವ ಸಿದ್ದತಾ ತರಬೇತಿಯನ್ನು ವಿದ್ಯಾಮಾತಾ ಅಕಾಡೆಮಿಯು ಆಯೋಜನೆ ಮಾಡಿದೆ.
ಉಚಿತ ವಸತಿಯೊಂದಿಗೆ ರ‍್ಯಾಲಿಗೆ ಹಾಜರಾಗುವ ಅಭ್ಯರ್ಥಿಗಳು ಈ ತರಬೇತಿಯನ್ನು ಸದುಪಯೋಗಪಡಿಸಿಕೊಳ್ಳಲು ಅಕಾಡೆಮಿ ಪ್ರಕಟಣೆ ತಿಳಿಸಿದೆ.

ನೇಮಕಾತಿಯ ಮಾನದಂಡಗಳು:

ರಾಷ್ಟೀಯ ಮಿಲಿಟರಿ ಸ್ಕೂಲ್ ಸ್ಟೇಡಿಯಂ ಬೆಳಗಾವಿಯಲ್ಲಿ ನಡೆಯಲಿರುವ ಆಯ್ಕೆ ಪ್ರಕ್ರಿಯೆ

SSLC ಮೇಲ್ಪಟ್ಟ ಪುರುಷ ಅಭ್ಯರ್ಥಿಗಳು ನೇಮಕಾತಿಯಲ್ಲಿ ನೇರವಾಗಿ ಭಾಗವಹಿಸಬಹುದು

  • ದೈಹಿಕ ಸದೃಢತೆ/ದೈಹಿಕ ಸಾಮರ್ಥ್ಯ ಹಾಗೂ ಲಿಖಿತ ಪರೀಕ್ಷೆಯ ಮೂಲಕ ನಡೆಯಲಿರುವ ನೇಮಕಾತಿ
  • 18ರಿಂದ 42 ವರ್ಷದೊಳಗಿನ ಅರ್ಹ ಪುರುಷ ಅಭ್ಯರ್ಥಿಗಳು ಭಾಗವಹಿಸಲು ಅವಕಾಶ
  • ಅರ್ಜಿ ಸಲ್ಲಿಸಲು ಅವಶ್ಯಕ ದಾಖಲೆಗಳು: ಫೋಟೋ, ಅಂಕಪಟ್ಟಿಗಳು,ಆಧಾರ್ ಕಾರ್ಡ್, ಜಾತಿ ಪ್ರಮಾಣಪತ್ರ,ನಿವಾಸ ಪ್ರಮಾಣ ಪತ್ರ(ಎಲ್ಲಾ ದಾಖಲಾತಿಗಳ original ಮತ್ತು ಜೆರಾಕ್ಸ್ ಪ್ರತಿಯನ್ನು ಹೊಂದಿರಬೇಕು)

    ನ. 21ರಂದು ಈ ಕೆಳಗಿನ ಜಿಲ್ಲೆಗಳಿಗೆ ನಡೆಯಲಿರುವ ನೇಮಕಾತಿ ಪ್ರಕ್ರಿಯೆ:
    ಕೊಪ್ಪಳ, ಧಾರವಾಡ, ಕೋಲಾರ, ಚಿತ್ರದುರ್ಗ, ಚಿಕ್ಕಬಳ್ಳಾಪುರ, ತುಮಕೂರು, ಕೊಡಗು, ಕಲಬುರಗಿ, ಬಳ್ಳಾರಿ, ಬೀದರ್, ಚಿಕಮಗಳೂರು.

•ನ. 22ರಂದು ಈ ಕೆಳಗಿನ ಜಿಲ್ಲೆಗಳಿಗೆ ನಡೆಯಲಿರುವ ನೇಮಕಾತಿ ಪ್ರಕ್ರಿಯೆ:
ದಕ್ಷಿಣ ಕನ್ನಡ, ರಾಮನಗರ, ಮೈಸೂರು, ಮಂಡ್ಯ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಬಾಗಲಕೋಟೆ, ಹಾಸನ, ಉತ್ತರ ಕನ್ನಡ, ಚಾಮರಾಜನಗರ

  • ನ.23ರಂದು ಈ ಕೆಳಗಿನ ಜಿಲ್ಲೆಗಳಿಗೆ ನಡೆಯಲಿರುವ ನೇಮಕಾತಿ ಪ್ರಕ್ರಿಯೆ: ಉಡುಪಿ, ದಾವಣಗೆರೆ, ಬೆಳಗಾವಿ, ಶಿವಮೊಗ್ಗ, ರಾಯಚೂರು, ಗದಗ, ಹಾವೇರಿ, ವಿಜಯಪುರ, ವಿಜಯನಗರ, ಯಾದಗಿರಿ.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ

ವಿದ್ಯಾಮಾತಾ ಅಕಾಡೆಮಿ
ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ& ಖಾಸಗಿ ಉದ್ಯೋಗ ಕೌಶಲ್ಯ ತರಬೇತಿ ಸಂಸ್ಥೆ
ಪುತ್ತೂರು /ಸುಳ್ಯ /ಕಾರ್ಕಳ
PH: 9620468869 / 9148935808

LEAVE A REPLY

Please enter your comment!
Please enter your name here