ಕ್ರಮಕ್ಕೆ ಜಿಲ್ಲಾಧಿಕಾರಿಗೆ ಮುಖ್ಯಮಂತ್ರಿ ಸೂಚನೆ
ಪುತ್ತೂರು: ಪುತ್ತೂರು ವಿಧಾನಸಭಾ ಕ್ಷೇತ್ರದ ಬಂಟ್ವಾಳ ತಾಲೂಕಿನ ವಿಟ್ಲಮುಡ್ನೂರು, ಶಿಬರಿ ಯುವಕ ಮಂಡಲ, ಮಾಡತ್ತಡ್ಕ ಇವರು ಯುವಕ ಮಂಡಲಕ್ಕೆ ನಿವೇಶನ ಮಂಜೂರು ಮಾಡುವಂತೆ ಶಾಸಕ ಅಶೋಕ್ ರೈ ಗೆ ಮನವಿ ಮಾಡಿದ್ದು, ಗುರುವಾರ ಮುಖ್ಯಮಂತ್ರಿಗಳನ್ನು ಭೇಟಿಯಾದ ಶಾಸಕರು ಈ ವಿಚಾರವಾಗಿ ಮಾತುಕತೆ ನಡೆಸಿದ್ದು, ತಕ್ಷಣ ಕ್ರಮಕ್ಕೆ ದ ಕ ಜಿಲ್ಲಾಧಿಕಾರಿಗೆ ಸೂಚನೆಯನ್ನು ನೀಡಿದ್ದಾರೆ.
ಶಿಬರಿ ಯುವಕ ಮಂಡಲವು 1988 ರಿಂದ ಕಾರ್ಯ ನಿರ್ವಹಿಸಿಕೊಂಡು ಹಲವಾರು ಸಾಮಾಜಿಕ ಕೆಲಸ ಕಾರ್ಯಗಳನ್ನು ಮಾಡಿಕೊಂಡು ಬಂದಿರುತ್ತಾರೆ. ಸದರಿ ಸಂಘಕ್ಕೆ ಯಾವುದೇ ಸ್ಥಿರಾಸ್ತಿ ಇರುವುದಿಲ್ಲ. ಆದ್ದರಿಂದ ಸದ್ರಿ ಸಂಘದ ಅಭಿವೃದ್ಧಿಗೆ ಕಟ್ಟಡ ನಿರ್ಮಾಣದ ಅವಶ್ಯಕತೆಯಾಗಿರುತ್ತದೆ. ಆದ್ದರಿಂದ ಬಂಟ್ವಾಳ ತಾಲೂಕು ವಿಟ್ಲಮುಡ್ನರು ಗ್ರಾಮದ ಸ.ನಂ:352/1 ರಲ್ಲಿ 0.25 ಸೆಂಟ್ಸ್ ಜಮೀನನ್ನು ಶಿಬರಿ ಯುವಕ ಮಂಡಲ(ರಿ.) ಮಾಡತ್ತಡ್ಕ ಹೆಸರಿನಲ್ಲಿ ಮಂಜೂರು ಮಾಡುವಂತೆ ಇಲಾಖೆಗೆ ಶೀಫಾರಸ್ಸು ಮಾಡುವಂತೆ ಮುಖ್ಯಮಂತ್ರಿಗಳಿಗೆ ಮನವಿ ಮಾಡಲಾಗಿದೆ. ತಕ್ಷಣ ಸ್ಪಂದಿಸಿದ ಸಿ ಎಂ ಜಾಗ ಮಂಜೂರಾತಿ ನೀಡುವಂತೆಯೂ ಆದೇಶ ನೀಡಿದ್ದಾರೆ.
