ಪುತ್ತೂರು : ಶ್ರೀ ರಾಮಕೃಷ್ಣ ಪ್ರೌಢಶಾಲೆ ಪುತ್ತೂರು, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಪುತ್ತೂರು, ಶ್ರೀ ರಾಮಕೃಷ್ಣ ಲಿಯೋಕ್ಲಬ್ ಮತ್ತು ಇಂಟರಾಕ್ಟ್‌ಕ್ಲಬ್ ಇವರ ಸಹಯೋಗದೊಂದಿಗೆ ಕನ್ನಡ ರಾಜ್ಯೋತ್ಸವದ ಸವಿನೆನಪಿಗಾಗಿ ಅಂತರ್ ಶಾಲಾ ವಿದ್ಯಾರ್ಥಿಗಳಿಗೆ ನ. 9 ರಂದು ನಡೆದ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣಾ ಸಮಾರಂಭವು ನ.14 ರಂದು ಬೆಳಿಗ್ಗೆ 11.30 ಕ್ಕೆ ಕೊಂಬೆಟ್ಟು ತಾಲೂಕು ಕ್ರೀಡಾಂಗಣದಲ್ಲಿ ನಡೆಯುವ ಶ್ರೀ ರಾಮಕೃಷ್ಣ ಪ್ರೌಢಶಾಲೆಯ ವಾರ್ಷಿಕ ಕ್ರೀಡಾಕೂಟದ ಸಮಾರಂಭದಲ್ಲಿ ಲಯನ್ಸ್‌ಕ್ಲಬ್ ಪುತ್ತೂರು ಕಾವು, ರೋಟರಿಕ್ಲಬ್ ಪುತ್ತೂರು ಯುವ ಇವರ ಪ್ರಾಯೋಜಕತ್ವದಲ್ಲಿ ವಕೀಲ ಕುಂಬ್ರ ದುರ್ಗಾಪ್ರಸಾದ್ ರೈ , ನಾರಾಯಣ ರೈ ಕುಕ್ಕುವಳ್ಳಿ ಇವರ ಉಪಸ್ಥಿತಿಯಲ್ಲಿ ನಡೆಯಲಿರುವುದು.
7 ಮತ್ತು 8ನೇ ತರಗತಿ ವಿದ್ಯಾರ್ಥಿಗಳಿಗೆ ನಡೆದ ಪ್ರಬಂಧ ಇಂದು ನಾ ಕಂಡ ಕರ್ನಾಟಕ ಎಂಬ ವಿಷಯದಲ್ಲಿ ಪ್ರಥಮ ಸ್ಥಾನವನ್ನು ಸ.ಪ.ಪೂ.ಕಾಲೇಜಿನ (ಪ್ರೌಢ ವಿಭಾಗದ) 8ನೇ ತರಗತಿಯ ವಿಧಾತ್ರಿ ಬಿ.ಎಸ್., ದ್ವಿತೀಯ ಬಹುಮಾನವನ್ನು ಅಂಬಿಕಾ ವಿದ್ಯಾಲಯದ 8ನೇ ತರಗತಿಯ ಅನ್ವಿತಾ ಎಸ್, ತೃತೀಯ ಬಹುಮಾನವನ್ನು ದ.ಕ.ಹಿ.ಪ್ರಾ.ಶಾಲೆ, ಪಾಣಾಜೆಯ 8ನೇ ತರಗತಿಯ ಬಿ.ಬಿ.ಫಾತಿಮಾ ಹಾಗೂ ಪ್ರೋತ್ಸಾಹಕ ಬಹುಮಾನವನ್ನು ಸ.ಹಿ.ಪ್ರಾ.ಶಾಲೆ, ಪಾಣಾಜೆಯ 7ನೇ ತರಗತಿಯ ಧನ್ವೀ ಬಿ ಮತ್ತು ನವೋದಯ ಪ್ರೌಢಶಾಲೆ ಬೆಟ್ಟಂಪಾಡಿಯ 8ನೇ ತರಗತಿಯ ದೀಶಾ ಬಿ ಯವರು ಪಡೆದುಕೊಂಡಿರುತ್ತಾರೆ.
9 ಮತ್ತು 10ನೇ ತರಗತಿ ವಿದ್ಯಾರ್ಥಿಗಳಿಗೆ ನಡೆದ ಪ್ರಬಂಧ ಮುಂದಿನ ನನ್ನ ಕನಸಿನ ಕರ್ನಾಟಕ ಹೇಗಿರಬೇಕ ಎಂಬ ವಿಷಯದಲ್ಲಿ ಪ್ರಥಮ ಹಾಗೂ ದ್ವಿತೀಯ ಸ್ಥಾನವನ್ನು ಕ್ರಮವಾಗಿ ಸಂತ ವಿಕ್ಟರ್ ಬಾಲಿಕಾ ಪ್ರೌಢಶಾಲೆಯ 10ನೇ ತರಗತಿಯ ವಿದ್ಯಾರ್ಥಿನಿಯರಾದ ಧೃತಿ ಹಾಗೂ ವಿನಿಶಾ ಡಿ.ಕುನ್ಹಾ, ತೃತೀಯ ಸ್ಥಾನವನ್ನು ಸಂತ ಫಿಲೋಮಿನಾ ಪ್ರೌಢಶಾಲೆಯ 10ನೇ ತರಗತಿಯ ದಿಯಾ ಬಿ ಹಾಗೂ ಪ್ರೋತ್ಸಾಹಕ ಬಹುಮಾನವನ್ನು ಅಂಬಿಕಾ ವಿದ್ಯಾಲಯದ 9ನೇ ತರಗತಿಯ ಸೋನ ಪೃಥ್ವಿ ಜೆ.ಕೆ. ಹಾಗೂ ವಿಠಲ ಪ್ರೌಢಶಾಲೆಯ 9ನೇ ತರಗತಿಯ ನಿಶ್ಮಿತಾ ರವರು ಪಡೆದುಕೊಂಡಿರುತ್ತಾರೆ ಎಂದು ಶಾಲಾ ಸಂಚಾಲಕ ಹೇಮನಾಥ ಶೆಟ್ಟಿ ಕಾವು ಹಾಗೂ ಪ್ರಭಾರ ಮುಖ್ಯೋಪಾಧ್ಯಾಯಿನಿ ಗಾಯತ್ರಿ ಎಸ್ ತಿಳಿಸಿರುತ್ತಾರೆ.
