
ಪುತ್ತೂರು: ನ.10ರಂದು ಇನ್ನರ್ ವೀಲ್ ಸಂಸ್ಥೆಯ ಸದಸ್ಯರು ಆನಂದ ಆಶ್ರಮಕ್ಕೆ ಭೇಟಿ ನೀಡಿ ಆಶ್ರಮದ ಹಿರಿಯ ಸದಸ್ಯರೊಂದಿಗೆ ಬೆರೆತು ಉಪಹಾರ ಬಡಿಸಿ ಉಭಯ ಕುಶಲೋಪರಿ ನಡೆಸಿದರು.
ಆಶ್ರಮದ ಸ್ಥಾಪಕಿ ಡಾ.ಗೌರಿ ಪೈ ಅವರ ಉಪಸ್ಥಿತಿಯಲ್ಲಿ ಆಶ್ರಮದ ವ್ಯವಸ್ಥಾಪಕ ಸದಾಶಿವ ಪೈ ಅವರು ಆಶ್ರಮದ ವ್ಯವಸ್ಥೆಗಳ ಮಾಹಿತಿ ಕೊಟ್ಟು ಹಿರಿಯರನ್ನು ಪರಿಚಯಿಸಿದರು. ಇನ್ನರ್ ವೀಲ್ ವತಿಯಿಂದ ಸಂಜೆ ಆಶ್ರಮದ ಪ್ರಾರ್ಥನಾ ಹಾಲ್ ನಲ್ಲಿ ಹಿರಿಯರೊಂದಿಗೆ ಭಜನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
ವಿಶ್ವ ಹಿಂದೂ ಪರಿಷತ್ ನ ಮಾತ್ರ ಶಕ್ತಿ ಮಂಡಳಿಯವರು ಭಜನಾ ಕಾರ್ಯಕ್ರಮವನ್ನು ನಡೆಸಿಕೊಟ್ಟರು.ಆಶ್ರಮದ ಹಿರಿಯ ಸದಸ್ಯರಿಗೆ ಅಗತ್ಯವಿರುವ ಆಯುರ್ವೇದ ಔಷಧಿಯನ್ನು ಡಾ.ಗೌರಿ ಪೈ ಯವರಿಗೆ ಹಸ್ತಾಂತರಿಸಲಾಯಿತು.
ಇನ್ನರ್ ವೀಲ್ ಅಧ್ಯಕ್ಷೆ ರೂಪ ಲೇಖ ಅವರೊಂದಿಗೆ ಪದಾಧಿಕಾರಿಗಳು ಹಾಗೂ ಎಲ್ಲಾ ಸದಸ್ಯರು ಉಪಸ್ಥಿತರಿದ್ದರು.