ನಾಣಿಲ ಶಾಲೆಯಲ್ಲಿ ಪೋಷಕರ ಶಿಕ್ಷಕರ ಮಹಾಸಭೆ, ಮಕ್ಕಳ ದಿನಾಚರಣೆ

0

ವರ್ಗಾವಣೆಗೊಂಡ ಶಿಕ್ಷಕಿ ಶೋಭಾ ಖಂಡಿಗ ಅವರಿಗೆ ಬೀಳ್ಕೊಡುಗೆ

ಕಾಣಿಯೂರು: ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ನಾಣಿಲದಲ್ಲಿ ಪೋಷಕರ ಶಿಕ್ಷಕರ ಮಹಾಸಭೆ, ಮಕ್ಕಳ ದಿನಾಚರಣೆ ಮತ್ತು ವರ್ಗಾವಣೆಗೊಂಡ ಶಿಕ್ಷಕಿ ಶೋಭಾ ಖಂಡಿಗ ಅವರಿಗೆ ಬೀಳ್ಕೊಡುಗೆ ಕಾರ್ಯಕ್ರಮವು ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷರಾದ ವಸಂತ ದಲಾರಿಯವರು ಮಾತನಾಡಿ, ಶಿಕ್ಷಕರಾಗಲಿ ಅಥವಾ ಯಾವುದೇ ನೌಕರರಾಗಲಿ ತನ್ನ ಕರ್ತವ್ಯವನ್ನು ಸೇವೆ ಎಂದು ಪರಿಗಣಿಸಿದರೆ ಮಾತ್ರ ದೇವರ ಕೆಲಸವಾಗಲು ಸಾಧ್ಯ ಎಂದರು. ಚಾರ್ವಾಕ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷರಾದ ಗಣೇಶ್ ಉದನಡ್ಕ ಮಾತನಾಡಿ ಶಾಲೆಯ ಅಭಿವೃದ್ಧಿಗೆ ನಿಮ್ಮ ಜೊತೆ ಕೈಜೋಡಿಸುವುದಾಗಿ ತಿಳಿಸಿದರು.

ಈ ಸಂದರ್ಭದಲ್ಲಿ ಕಾಣಿಯೂರು ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಗಂಗಮ್ಮ ಗುಜ್ಜರ್ಮೆ, ಪಂಚಾಯತ್ ಸದಸ್ಯರಾದ ತೇಜಕುಮಾರಿ ಉದ್ಲಡ್ಡ, ಸುಲೋಚನಾ ಮಿಯೋಲ್ಪೆ, ಕಾಣಿಯೂರು ಕ್ಲಸ್ಟರ್ ಯಶೋಧ, ಶಾಲಾ ಅಭಿವೃದ್ಧಿ ಸಮಿತಿ ಉಪಾಧ್ಯಕ್ಷೆ ಶೋಭಾ ಬಾಕಿಲ, ತಾಯಿ ಸಮಿತಿಯ ಅಧ್ಯಕ್ಷರಾದ ಮೋಹಿನಿ ಬಾಕಿಲ, ವಿದ್ಯಾರ್ಥಿ ನಾಯಕಿ ಅನನ್ಯ, ಸಹ ಶಿಕ್ಷಕ ಸುನಿಲ್ ಅವರು ವರ್ಗಾವಣೆಗೊಂಡಿರುವ ಶೋಭಾ ಅವರ ಬಗ್ಗೆ ಅನಿಸಿಕೆ ವ್ಯಕ್ತಪಡಿಸಿದರು. ಮುಖ್ಯ ಗುರು ಪದ್ಮಯ ಗೌಡ ಪ್ರಾಸ್ತಾವಿಕದೊಂದಿಗೆ ಸ್ವಾಗತಿಸಿದರು, ಶಿಕ್ಷಕಿ ಮೋಹಿನಿ ಧನ್ಯವಾದ ಅರ್ಪಿಸಿದರು ಗೌರವ ಶಿಕ್ಷಕಿ ಶಿಶ್ಮಿತಾ ರೈ ಹಾಗೂ ಸುಮಲತಾ ಸಹಕರಿಸಿದರು. ಕಾರ್ಯಕ್ರಮದಲ್ಲಿ ಶಾಲಾ ಅಭಿವೃದ್ಧಿ ಸಮಿತಿ ಸದಸ್ಯರು ಪೋಷಕರು ಮಕ್ಕಳು ಭಾಗವಹಿಸಿದ್ದರು. ವಿದ್ಯಾರ್ಥಿಗಳಾದ ಜಯಲಕ್ಷ್ಮಿ, ಶೌರ್ಯ, ವರ್ಷಿಕ ಡಿ ವಿ, ವರ್ಣಿಕ ಡಿ. ವಿ ಪ್ರಾರ್ಥಿಸಿದರು ಸಹ ಶಿಕ್ಷಕಿ ನಂದಿನಿ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here