ಬೆಟ್ಟಂಪಾಡಿ: ಬೆಂಗಳೂೂರಿನ ಯು.ಆರ್ ರಾವ್ ಉಪಗ್ರಹ ಕೇಂದ್ರ ಇವರು ಆಯೋಜಿಸಿದ ಉಪಗ್ರಹ ತಂತ್ರಜ್ಞಾನದಲ್ಲಿ ಮೂಲ ವೈಜ್ಞಾನಿಕ ತತ್ವಗಳು ಎಂಬ ಪ್ರಸ್ತುತಿ ಸ್ಫರ್ಧೆಗೆ ರಾಜ್ಯದಾದ್ಯಂತ ಸುಮಾರು 55 ವಿದ್ಯಾರ್ಥಿಗಳು ಪ್ರಸ್ತುತಿಯನ್ನು ಸಿದ್ಧಪಡಿಸಿದ್ದು, ಎರಡನೇ ಸುತ್ತಿಗೆ 18 ವಿದ್ಯಾರ್ಥಿಗಳು ಆಯ್ಕೆಯಾಗಿದ್ದರು. ಅದರಲ್ಲಿ ಒಂದು ಪ್ರಸ್ತುತಿ ಪ್ರಿಯದರ್ಶಿನಿ ಆಂಗ್ಲ ಮಾಧ್ಯಮ ಶಾಲೆ ಬೆಟ್ಟಂಪಾಡಿಯ ಹತ್ತನೇ ತರಗತಿ ವಿದ್ಯಾರ್ಥಿ ವಸು ಶರ್ಮ ಅವರದ್ದಾಗಿದೆ.
ಇವರು ದಕ್ಷಿಣ ಕನ್ನಡದಿಂದ ಪ್ರಸ್ತುತಿಯನ್ನು ಮಂಡಿಸಿದ ಏಕೈಕ ವಿದ್ಯಾರ್ಥಿಯಾಗಿದ್ದು, ಯು ಆರ್ ರಾವ್ ಉಪಗ್ರಹ ಕೇಂದ್ರವು ಇವರಿಗೆ ಸ್ಮರಣಿಕೆಯನ್ನು ನೀಡಿ ಗೌರವಿಸಿರುವುದು ಹೆಮ್ಮೆಯ ಸಂಗತಿ. ವಸು ಶರ್ಮಾ ಇವರು ಮಂಡಿಸಿದ ಪ್ರಸ್ತುತಿಯನ್ನು ವೀಕ್ಷಿಸಲು ಪ್ರಿಯದರ್ಶಿನಿ ವಿದ್ಯಾಸಂಸ್ಥೆಯ ಇತರ ಮೂರು ವಿದ್ಯಾರ್ಥಿಗಳು ಯು ಆರ್ ರಾವ್ ಉಪಗ್ರಹ ಕೇಂದ್ರಕ್ಕೆ ಹೋಗಿ ಉತ್ತೇಜನವನ್ನು ಪಡೆದು ಬಂದಿರುತ್ತಾರೆೆ.
