ನೆಹರೂನಗರದಲ್ಲಿ ದಿವಾಕರ ದಾಸ್ ನೇರ್ಲಾಜೆ ಮಾಲಕತ್ವದ ಎಸ್.ಎಲ್.ವಿ. ಬುಕ್ ಹೌಸ್ ಶುಭಾರಂಭ

0

ರಾಜ್ಯದಾದ್ಯಂತ ಹೆಸರು ಮಾಡಿದ ಸಂಸ್ಥೆ-ಅಶೋಕ್ ಕುಮಾರ್ ರೈ
ಸಂಸ್ಥೆ ಆರಂಭ ಪುತ್ತೂರಿಗೆ ಬಹುದೊಡ್ಡ ಕೊಡುಗೆ-ಸವಣೂರು ಸೀತಾರಾಮ ರೈ
ಇಂದು ಎಸ್.ಎಲ್.ವಿ. ಒಂದು ಬ್ರ್ಯಾಂಡ್ ಆಗಿದೆ-ಸಂಜೀವ ಮಠಂದೂರು
ಎಸ್.ಎಲ್.ವಿ. ಮಾದರಿ ಸಂಸ್ಥೆಯಾಗಿ ಬೆಳೆಯಲಿ-ಎಸ್.ಆರ್. ರಂಗಮೂರ್ತಿ
ದಿವಾಕರ ದಾಸ್‌ರವರ ಗುಣ, ನಡೆತೆ,ಕಾರ್ಯ ವೈಖರಿ ಇತರರಿಗೆ ಮಾದರಿ-ಅರುಣ್ ಪುತ್ತಿಲ
ಇಂತಹ ಸಂಸ್ಥೆ ಪುತ್ತೂರಿನ ಬೆಳವಣಿಗೆಗೆ ಪೂರಕ-ರೆ| ವಿಜಯ ಹಾರ್ವಿನ್
ಧಾರ್ಮಿಕವಾಗಿಯೂ ತೊಡಗಿಕೊಂಡ ವ್ಯಕ್ತಿ ದಿವಾಕರ ದಾಸ್-ಪಂಜಿಗುಡ್ಡೆ ಈಶ್ವರ ಭಟ್

ಪುತ್ತೂರು: ಕರ್ನಾಟಕದ ಅತೀ ದೊಡ್ಡ ಪುಸ್ತಕ ಮಾರಾಟ ಮಳಿಗೆ ಎಸ್.ಎಲ್.ವಿ. ಬುಕ್ ಹೌಸ್‌ನ ವಿಭಿನ್ನ, ವಿಸ್ತಾರವಾದ ಮತ್ತು ಗ್ರಾಹಕರಿಗೆ ಹೊಸ ಅನುಭವವನ್ನು ಒದಗಿಸಬಲ್ಲ ಸಂಪೂರ್ಣ ಹವಾನಿಯಂತ್ರಿತ ಮಳಿಗೆ ‘ಎಸ್‌ಎಲ್‌ವಿ ಬುಕ್ ಹೌಸ್’ ನೆಹರೂನಗರದ ಕಾಲೇಜ್ ಗೇಟ್ ಕಾಂಪ್ಲೆಕ್ಸ್‌ನಲ್ಲಿ ನ.15ರಂದು ಶುಭಾರಂಭಗೊಂಡಿತು.


ರಿಬ್ಬನ್ ಕಟ್ ಮಾಡುವ ಮೂಲಕ ಉದ್ಘಾಟಿಸಿದ ಶಾಸಕ ಅಶೋಕ್ ಕುಮಾರ್ ರೈಯವರು ಮಾತನಾಡಿ, ದಿವಾಕರ್‌ ರವರನ್ನು ಹತ್ತು ವರುಷದಿಂದ ಹತ್ತಿರದಿಂದ ನೋಡಿದವ ನಾನು. ಧಾರ್ಮಿಕ ಶ್ರದ್ದಾ ಕೇಂದ್ರಗಳಿಗೆ ನಿರಂತರ ಸಹಕಾರ ನೀಡುತ್ತಾ ಬಂದಿರುವ ಶ್ರೀಮಂತ ವ್ಯಕ್ತಿ. ಎಸ್.ಎಲ್.ವಿ ಬುಕ್ ಹೌಸ್ ರಾಜ್ಯದಾದ್ಯಂತ ಹೆಸರು ಮಾಡಿದ ಸಂಸ್ಥೆ,ಇಂದು ದೊಡ್ಡ ದೊಡ್ಡ ಸಂಸ್ಥೆಗಳಿಗೆ ಸ್ಪರ್ಧೆ ನೀಡುವ ಮಟ್ಟಿಗೆ ತಲುಪಿದೆ ಎನ್ನಲು ಬಹಳಷ್ಟು ಸಂತಸವಾಗಿದೆ. ಇವರ ಮಂಗಳೂರು ಔಟ್‌ಲೆಟ್ ಬಹಳಷ್ಟು ಜನಪ್ರಿಯವಾಗಿದೆ.ನನ್ನ ಮಗಳಿಗೆ ಎಲ್ಲೂ ಸಿಗದ ಪಠ್ಯ ಪುಸ್ತಕ ಎಸ್‌ಎಲ್‌ವಿ ಬುಕ್ ಹೌಸ್‌ನಲ್ಲಿ ಸಿಕ್ಕಿದೆ.ಇದು ನನ್ನ ಅಭಿಪ್ರಾಯ ಅಲ್ಲ ನನ್ನ ಮಕ್ಕಳ ಫೀಡ್ ಬ್ಯಾಕ್. ಒಳ್ಳೆಯ ವ್ತಕ್ತಿ ಒಳ್ಳೆಯ ಸಂಸ್ಥೆ ಹುಟ್ಟು ಹಾಕಿದರೆ ಯಶಸ್ಸು ಸಾಧ್ಯ.ಪುತ್ತೂರಿನ ಔಟ್‌ಲೆಟ್ ಈ ಭಾಗದ ಜನರ ಆಶೋತ್ತರವನ್ನು ಈಡೇರಿಸಲಿ. ಸಂಸ್ಥೆ ಉತ್ತಮವಾಗಿ ಬೆಳೆಯಲಿ ಎಂದು ಶುಭಹಾರೈಸಿದರು.


ಸವಣೂರು ವಿದ್ಯಾರಶ್ಮಿ ಸಮೂಹ ಶಿಕ್ಷಣ ಸಂಸ್ಥೆಗಳ ಸಂಚಾಲಕ ಸವಣೂರು ಸೀತಾರಾಮ ರೈರವರು ಮಾತನಾಡಿ, ನಮಗೂ ದಿವಾಕರ್ ಅವರಿಗೂ ಹೆಚ್ಚೇನು ಪರಿಚಯವಿಲ್ಲದಿದ್ದರೂ ಅವರ ಬಗ್ಗೆ ತಿಳಿದಿದ್ದೇನೆ. ಬಹಳಷ್ಟು ಕಷ್ಟದಿಂದ ಮೇಲೆ ಬಂದವರು ಅವರಾಗಿದ್ದಾರೆ. ನಮ್ಮ ಭಾಗದಲ್ಲಿ ಹಿಂದಿನಿಂದಲೂ ಶಾಲಾಕಾಲೇಜು ಪುಸ್ತಕಗಳಲ್ಲಿ ಅವರ ಹೆಸರು ಮುಂಚೂಣಿಯಲ್ಲಿ ಕೇಳಿಬರುತ್ತಿದೆ. ನಮ್ಮ ಶಿಕ್ಷಣ ಸಂಸ್ಥೆಗಳಿಂದ ಮುಂದಿನ ದಿನಗಳಲ್ಲಿ ಸಹಕಾರ ನೀಡಲಾಗುವುದು. ಅವರದ್ದು ಪುತ್ತೂರಿಗೆ ಬಹುದೊಡ್ಡ ಕೊಡುಗೆಯಾಗಿದೆ.ಅದಕ್ಕೆ ನಾವೆಲ್ಲರೂ ಋಣಿಯಾಗಿರಬೇಕು ಎಂದು ಹೇಳಿ ಶುಭಹಾರೈಸಿದರು.


ಶುಭ ಹಾರೈಸಿದ ಮಾಜಿ ಶಾಸಕ ಸಂಜೀವ ಮಠಂದೂರುರವರು ಮಾತನಾಡಿ, ರಾಜ್ಯಾದ್ಯಂತ ಹೆಸರು ಮಾಡಿದ ಸಂಸ್ಥೆ ಎಸ್.ಎಲ್.ವಿ. ಉದ್ಯಮ ಕ್ಷೇತ್ರದಲ್ಲಿ ತನ್ನದೇ ಆದ ರೀತಿಯಲ್ಲಿ ಬೆಳೆದ ಛಲಗಾರ. ಇಂದು ಎಸ್.ಎಲ್.ವಿ. ಒಂದು ಬ್ರ್ಯಾಂಡ್ ಆಗಿದೆ. ಪುತ್ತೂರಿಗೆ ಇಂತಹ ಸಂಸ್ಥೆಯ ಅನಿವಾರ್ಯತೆ ಇತ್ತು. ಸಂಸ್ಥೆ ಇನ್ನಷ್ಟು ಬೆಳಗಲಿ ಎಂದರು.
ಕರ್ನಾಟಕ ಲೋಕಸೇವಾ ಆಯೋಗದ ಮಾಜಿ ಸದಸ್ಯ ಎಸ್. ಆರ್. ರಂಗಮೂರ್ತಿರವರು ಮಾತನಾಡಿ, ಉದ್ಯಮಗಳು ಬೆಳೆದಂತೆ ಪೇಟೆ ಪಟ್ಟಣಗಳ ಜೊತೆಗೆ ದೇಶದ ಅಭಿವೃದ್ಧಿಯೂ ಸಾಧ್ಯ. ಉದ್ಯಮ ಯಶಸ್ವಿಯಾಗಲಿ. ಎಸ್.ಎಲ್.ವಿ. ಮಾದರಿ ಸಂಸ್ಥೆಯಾಗಿ ಬೆಳೆಯಲಿ ಎಂದು ಹಾರೈಸಿದರು.


ಪುತ್ತಿಲ ಪರಿವಾರ ಸೇವಾ ಟ್ರಸ್ಟ್‌ನ ಸಂಚಾಲಕ ಅರುಣ್ ಕುಮಾರ್ ಪುತ್ತಿಲರವರು ಮಾತನಾಡಿ ಇದೊಂದು ಸಂತಸದ ಕ್ಷಣ, ದಿವಾಕರ ದಾಸ್‌ರವರು ಹತ್ತಿದ ಮೆಟ್ಟಿಲನ್ನು ಮರೆಯದ ವ್ಯಕ್ತಿ. ಅವರ ಗುಣ ನಡೆತೆ ಕಾರ್ಯ ವೈಖರಿ ಇತರರಿಗೆ ಮಾದರಿ ಎಂದರು. ಸುಧಾನ ವಸತಿ ಶಾಲೆಯ ಸಂಚಾಲಕ ರೆ|ವಿಜಯ ಹಾರ್ವಿನ್‌ ಮಾತನಾಡಿ ದಿವಾಕರ್‌ರವರು ಮಾನವೀಯ ಗುಣ ಹೊಂದಿರುವ ವ್ಯಕ್ತಿ. ಅವರ ಶ್ರಮಕ್ಕೆ ತಕ್ಕ ಪ್ರತಿಫಲ ಸಿಕ್ಕಿದೆ. ಹಲವಾರು ವರುಷಗಳಿಂದ ನಾನು ವ್ಯವಹಾರ ಮಾಡುತ್ತಾ ಬಂದಿದ್ದೇನೆ. ಸಂಸ್ಥೆ ಗುಣಮಟ್ಟವನ್ನು ಕಾಯ್ದುಕೊಂಡಿದೆ. ಇಂತಹ ಸಂಸ್ಥೆ ಪುತ್ತೂರಿನ ಬೆಳವಣಿಗೆಗೆ ಪೂರಕ ಎಂದು ಹೇಳಿ ಶುಭಹಾರೈಸಿದರು.


ಪುತ್ತೂರು ಶ್ರೀ ಮಹಾಲಿಂಗೇಶ್ಬರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪಂಜಿಗುಡ್ಡೆ ಈಶ್ವರ ಭಟ್‌ರವರು ಮಾತನಾಡಿ, ದಿವಾಕರ ದಾಸ್‌ರವರು ಬಹುದೊಡ್ಡ ಸಾಧನೆ ಮಾಡಿದ್ದಾರೆ. ಕಡುಬಡತನದಲ್ಲಿ ಹುಟ್ಟಿ ಬೆಳೆದ ಅವರು ತನ್ನ ಪರಿಶ್ರಮದ ಮೂಲಕ ಬಹುದೊಡ್ಡ ವ್ಯಕ್ತಿಯಾಗಿ ಬೆಳೆದಿದ್ದಾರೆ. ದಾನ ಧರ್ಮ ಮಾಡಲು ಗಟ್ಟಿ ನಿರ್ಧಾರ ಬೇಕು. ಧಾರ್ಮಿಕವಾಗಿಯೂ ತನ್ನನ್ನು ತೊಡಗಿಸಿಕೊಂಡ ವ್ಯಕ್ತಿ ಅವರು. ಈ ಮಳಿಗೆ ಮಕ್ಕಳ ಬೌದ್ಧಿಕ ಬೆಳವಣಿಗೆಗೆ ಪೂರಕ ಎಂದರು. ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಪ್ರಧಾನ ಅರ್ಚಕ ವಸಂತ್ ಕೆದಿಲಾಯರವರು ಲಕ್ಷ್ಮೀಪೂಜೆ ನಡೆಸಿದರು. ಶ್ರೀ ಕ್ಷೇತ್ರ ಕಟೀಲಿನ ಪ್ರಧಾನ ಅರ್ಚಕ ವೆಂಕಟರಮಣ ಅಸ್ರಣ್ಣ ರವರು ದೀಪ ಬೆಳಗಿಸಿ ಸಂಸ್ಥೆಗೆ ಶುಭ ಹಾರೈಸಿದರು. ಚೆನ್ನಮ್ಮ ಮದನ ಗೌಡರವರು ಪ್ರಥಮ ಗ್ರಾಹಕರಾದರು.


ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ.ಪ್ರಭಾಕರ್ ಭಟ್ ಕಲ್ಲಡ್ಕ, ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ ಪುತ್ತೂರು, ಜನಪ್ರಿಯ ವೈದ್ಯರಾದ ಡಾ.ಸುರೇಶ್ ಪುತ್ತೂರಾಯ, ಡಾ.ಎಂ.ಕೆ.ಪ್ರಸಾದ್, ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಸದಸ್ಯ ಪಿ.ರಾಜಾರಾಮ ಶೆಟ್ಟಿ ಕೋಲ್ಪೆಗುತ್ತು, ಬಿಜೆಪಿ ಗ್ರಾಮಾಂತರ ಮಂಡಲದ ಅಧ್ಯಕ್ಷ ದಯಾನಂದ ಶೆಟ್ಟಿ ಉಜಿರೆಮಾರ್, ಮುರ ಎಂ.ಪಿ.ಎಂ ಸ್ಕೂಲ್‌ನ ಅಧ್ಯಕ್ಷ ಎಂ.ಪಿ.ಅಬೂಬಕ್ಕರ್, ಇಡ್ಕಿದು ಸೇವಾ ಸಹಕಾರಿ ಸಂಘದ ಅಧ್ಯಕ್ಷ ಸುಧಾಕರ್ ಶೆಟ್ಟಿ ಬೀಡಿನಮಜಲು, ನ್ಯಾಯವಾದಿ ಮಹೇಶ್ ಕಜೆ, ಹಿಂದೂ ಸಂಘಟನೆಯ ಮುಖಂಡ ಮುರಳಿಕೃಷ್ಣ ಹಸಂತಡ್ಕ, ಎಂ ಫ್ರೆಂಡ್ಸ್ ನ ರಶೀದ್ ವಿಟ್ಲ, ರಾಮಕುಂಜೇಶ್ವರ ವಿದ್ಯಾಸಂಸ್ಥೆಯ ಮುಖ್ಯಸ್ಥ ಸೇಸಪ್ಪ ರೈ, ಸುಧಾನ ವಸತಿ ಶಾಲೆಯ ಮುಖ್ಯೋಪಾಧ್ಯಾಯಿನಿ ಶೋಭಾ, ವಿಠಲ್ ಜೇಸಿಸ್ ಆಂಗ್ಲ ಮಾಧ್ಯಮ ಶಾಲೆಯ ಪ್ರಾಂಶುಪಾಲ ಜಯರಾಮ್ ರೈ, ವಿವೇಕಾನಂದ ಪದವಿ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಡಾ|ಪೀಟರ್ ವಿಲ್ಸನ್ ಪ್ರಭಾಕರ್, ಕಾಣಿಯೂರು ಪ್ರಗತಿ ವಿದ್ಯಾ ಸಂಸ್ಥೆಯ ಸಂಚಾಲಕ ಜಯಸೂರ್ಯ ರೈ, ಅಂಬಿಕಾ ವಿದ್ಯಾಸಂಸ್ಥೆಯ ಮುಖ್ಯೋಪಾಧ್ಯಾಯಿನಿ ಮಾಲತಿ ಭಟ್, ಮೌಂಟನ್ ವ್ಯೂ ಸ್ಕೂಲ್‌ನ ಸಾಹಿಕ, ಕಂಬಳಬೆಟ್ಟು ಜನಪ್ರಿಯ ಫೌಂಡೇಶನ್ ನ ಅಧ್ಯಕ್ಷ ಡಾ.ಅಬ್ದುಲ್ ಬಶೀರ್ ವಿ.ಕೆ., ಪುತ್ತೂರು ಸುದ್ದಿಬಿಡುಗಡೆ ಸಿಇಒ ಸೃಜನ್ ಊರುಬೈಲ್, ಮಾಸ್ಟರ್ ಪ್ಲಾನರಿಯ ಮಾಲಕ ಎಸ್.ಕೆ.ಆನಂದ್, ಜಿ.ಎಲ್.ಆಚಾರ್ಯ ಜ್ಯುವೆಲ್ಲರ‍್ಸ್‌ನ ಆಡಳಿತ ನಿರ್ದೇಶಕ ಬಲರಾಮ ಆಚಾರ್ಯ, ಸುದಾನ ಪಿಯು ಕಾಲೇಜಿನ ಪ್ರಾಂಶುಪಾಲ ಸುಪ್ರಿತ್ ಕೆ.ಸಿ., ಎ.ವಿ.ಜಿ ಆಂಗ್ಲ ಮಾಧ್ಯಮ ಶಾಲಾ ಮುಖ್ಯೋಪಾಧ್ಯಾಯಿನಿ ಸವಿತ, ಸಂಪ್ಯ ಅಕ್ಷಯ ಕಾಲೇಜಿನ ಮುಖ್ಯಸ್ಥ ಜಯಂತ್ ನಡುಬೈಲ್,ಪೋಪ್ಯುಲರ್ ಸ್ವೀಟ್ಸ್‌ನ ಮಾಲಕ ನಾಗೇಂದ್ರ ಕಾಮತ್, ಪುತ್ತೂರು ಕಂಬಳ ಸಮಿತಿ ಅಧ್ಯಕ್ಷ ಎನ್.ಚಂದ್ರಹಾಸ ಶೆಟ್ಟಿ, ವಿಜಯ ಸಾಮ್ರಾಟ್ ಪುತ್ತೂರು ಸ್ಥಾಪಕಾಧ್ಯಕ್ಷ ಸಹಜ್ ರೈ ಬಳಜ್ಜ, ಎಪಿಎಂಸಿ ಮಾಜಿ ಅಧ್ಯಕ್ಷ ಬೂಡಿಯಾರ್ ರಾಧಾಕೃಷ್ಣ ರೈ, ವಿಟ್ಲ ಗ್ರಾಮೀಣ ಸಹಕಾರಿ ಸಂಘದ ಅಧ್ಯಕ್ಷ ಜಗನ್ನಾಥ ಸಾಲಿಯಾನ್, ವಿಟ್ಲ ಪಟ್ಟಣ ಪಂಚಾಯತ್ ಅಧ್ಯಕ್ಷ ಕರುಣಾಕರ ಗೌಡ ನಾಯ್ತೋಟು, ನವಚೇತನ ಚಿಟ್ಸ್ & ಫೈನಾನ್ಸ್ ಕೆಂಪೆನಿ ಪ್ರೈವೇಟ್‌ ಲಿ. ನ ಆಡಳಿತ ನಿರ್ದೇಶಕರಾದ ಕೆ. ಲೊಕೇಶ್ ಶೆಟ್ಟಿ ಪ್ರಮುಖರಾದ ಮೌರ್ಯ ರೇಣುಕಾಪ್ರಸಾದ್, ಭವಾನಿ ಟೀಚರ್ ಕೊಲ್ಯ, ಸಂತೋಷ್ ಕುಮಾರ್ ರೈ ಕೈಕಾರ, ಕೊಂಕೋಡಿ ಪದ್ಮನಾಭ, ಕೃಷ್ಣ ಭಟ್ ಕೊಂಕೋಡಿ, ಮೋಹನ್ ಕೆ.ಎಸ್.ಉರಿಮಜಲು, ಕೆ.ಟಿ.ವೆಂಕಟೇಶ್ವರ ನೂಜಿ, ಕಶೆಕೋಡಿ ಸೂರ್ಯನಾರಾಯಣ ಭಟ್, ಪ್ರಸನ್ನ ಶೆಟ್ಟಿ ಸಿಝ್ಲರ್ ಸೇರಿದಂತೆ ಹಲವಾರು ಗಣ್ಯರು ಉಪಸ್ಥಿತರಿದ್ದು ಸಂಸ್ಥೆಗೆ ಶುಭಹಾರೈಸಿದರು.

ಸನ್ಮಾನ
ಪುತ್ತೂರಿನ ಮಳಿಗೆಯನ್ನು ಆರಂಭಿಸುವಲ್ಲಿ ವಿಶೇಷ ಮತುವರ್ಜಿ ವಹಿಸಿ, ಎಸ್.ಎಲ್.ವಿ ಸಂಸ್ಥೆಯ ಪ್ರತೀ ಕಾರ್ಯಚಟುವಟಿಕೆಯಲ್ಲಿಯೂ ಸಹಕರಿಸುತ್ತಿರುವ ದಿವಾಕರ್ ದಾಸ್‌ರವರ ಬಾಲ್ಯ ಸ್ನೇಹಿತ ರಾಮ್‌ದಾಸ್ ಶೆಟ್ಟಿ ವಿಟ್ಲ ಇವರನ್ನು ಎಸ್‌ಎಲ್‌ವಿ ಸಂಸ್ಥೆಯ ಮಾಲಕರಾದ ಹೇಮಾವತಿ ದಿವಾಕರ್ ದಾಸ್ ಮತ್ತು ದಿವಾಕರ್ ದಾಸ್ ನೇರ್ಲಾಜೆ ರವರು ಸಂಸ್ಥೆಯ ವತಿಯಿಂದ ಸನ್ಮಾನಿಸಿ ಗೌರವಿಸಿದರು. ಎಸ್‌ಎಲ್‌ವಿ ಬುಕ್ ಹೌಸ್‌ನ ಪ್ರಧಾನ ವ್ಯವಸ್ಥಾಪಕ ರಾಜ ಅಂಚನ್ ಹಾಗೂ ಎಸ್‌ಎಲ್‌ವಿ ಸಂಸ್ಥೆಯ ಎಲ್ಲಾ ಸಿಬ್ಬಂದಿಗಳನ್ನು ಗೌರವಿಸಲಾಯಿತು. ಬಳಿಕ ದಿವ್ಯನಿಧಿ ರೈ ಎರುಂಬು ಮತ್ತು ಬಳಗದವರಿಂದ ‘ಸ್ವರ ಸಮರ್ಪಣೆ’ ಸಂಗೀತ ರಸಮಂಜರಿ ಕಾರ್ಯಕ್ರಮ ನಡೆಯಿತು. ವಿಟಿವಿ ನಿರೂಪಕಿ, ವಿಜೆ ಅಶ್ವಿನಿ ಪೆರುವಾಯಿ ಕಾರ್ಯಕ್ರಮ ನಿರೂಪಿಸಿದರು.

ನನ್ನ ಹುಟ್ಟಿದ ಊರಿನಲ್ಲಿ ಇಂದು ನಮ್ಮ ಸಂಸ್ಥೆಯ ನೂತನ ಶಾಖೆ ಉದ್ಘಾಟನೆಗೊಂಡಿದೆ. ಗ್ರಾಹಕರಿಗೆ ಅನುಕೂಲವಾಗಲೆಂದು ಎಲ್ಲವನ್ನೂ ಒಂದೇ ಸೂರಿನಡಿ ಜೋಡಿಸಲಾಗಿದೆ. ಗ್ರಾಹಕರೇ ಬಂದು ತಮಗಿಷ್ಟದ ವಸ್ತುಗಳನ್ನು ಆಯ್ದುಕೊಳ್ಳುವ ವ್ಯವಸ್ಥೆಯನ್ನು ಮಾಡಲಾಗಿದೆ. ಉದ್ಘಾಟನೆ ಪ್ರಯುಕ್ತ 40ಶೇ.ವರೆಗೆ ರಿಯಾಯಿತಿ ನೀಡಲಾಗುವುದು. ಇಲ್ಲಿ ಎಲ್ಲಾ ವಿಧದ ಪುಸ್ತಕ, ಆಟಿಕೆ ಸಾಮಾಗ್ರಿ, ಗಿಫ್ಟ್ ಐಟಂ ಎಲ್ಲವೂ ಲಭ್ಯವಿದೆ. ಪ್ರಥಮ ದಿನವೇ ಗ್ರಾಹಕರು ನಮಗೆ ಉತ್ತಮ ಸಹಕಾರ ನೀಡಿದ್ದಾರೆ. ಈ ಮಳಿಗೆಯ ಮೂಲಕ ಗ್ರಾಹಕರಿಗೆ ಅತ್ಯುತ್ತಮ ಕೊಡುಗೆಗಳನ್ನೂ ನೀಡಲಿದ್ದೇವೆ.ಎಂದಿನಂತೆ ತಮ್ಮೆಲ್ಲರ ಪ್ರೀತಿ, ವಿಶ್ವಾಸ, ಸಹಕಾರವನ್ನು ಬಯಸುತ್ತಿದ್ದೇವೆ.
ದಿವಾಕರ್ ದಾಸ್ ನೇರ್ಲಾಜೆ, ಆಡಳಿತ ನಿರ್ದೇಶಕರು, ಎಸ್.ಎಲ್.ವಿ. ಬುಕ್ಸ್ ಇಂಡಿಯಾ ಪ್ರೈವೇಟ್ ಲಿ.

ದಿವಾಕರ್ ದಾಸ್ ನೇರ್ಲಾಜೆ, ಆಡಳಿತ ನಿರ್ದೇಶಕರು, ಎಸ್.ಎಲ್.ವಿ. ಬುಕ್ಸ್ ಇಂಡಿಯಾ ಪ್ರೈವೇಟ್ ಲಿ.

ಸೂಪರ್‌ಮಾರ್ಕೆಟ್ ಮಾದರಿ ಔಟ್‌ಲೆಟ್‌ಗಳು

‘ಎಸ್‌ಎಲ್‌ವಿ ಬುಕ್‌ಹೌಸ್’ನ ಯಾವುದೇ ಔಟ್‌ಲೆಟ್‌ಗಳನ್ನು ಗಮನಿಸಿದರೆ ಅದು ಸೂಪರ್‌ಮಾರ್ಕೆಟ್ ಮಾದರಿಯಲ್ಲಿ ಗ್ರಾಹಕ ಸ್ನೇಹಿಯಾಗಿರುತ್ತವೆ. ಸೂಪರ್ ಮಾರ್ಕೆಟ್ ರೀತಿಯಲ್ಲಿ ಗ್ರಾಹಕರು ಬಂದು ಅವರಿಗೆ ಬೇಕಿರುವ ವಸ್ತುಗಳನ್ನು ಅವರೇ ಆರಿಸಿ ಪಡೆದುಕೊಳ್ಳಬಹುದು. ಮಳಿಗೆಗಳಲ್ಲಿ ಸ್ಟೇಷನರಿ ಐಟಮ್ಸ್, ಟೆಕ್ಸ್ಟ್ ಬುಕ್, ಗೈಡ್, ನೋಟ್‌ಬುಕ್ ಹೀಗೆ ಐಟಮ್‌ವಾರು ಸೆಲ್‌ಗಳಿದ್ದು, ಪ್ರತಿ ಪ್ರತೀ ಕೌಂಟರ್ ಬಳಿಯಲ್ಲೂ ಸಹಾಯಕರು ಗ್ರಾಹಕರಿಗೆ ಸಹಾಯ ಒದಗಿಸುತ್ತಾರೆ. ಸಂಸ್ಥೆಯ ಎಲ್ಲಾ ಶೋರೂಂಗಳು ಹವಾನಿಯಂತ್ರಿತವಾಗಿವೆ. ಪುತ್ತೂರಿನ ಮಳಿಗೆ ವಿಭಿನ್ನ, ಸುಸಜ್ಜಿತವಾಗಿದ್ದು,ಗ್ರಾಹಕರಿಗೆ ಅದ್ಭುತ ಸೇವೆ ನೀಡಲಿದೆ.

LEAVE A REPLY

Please enter your comment!
Please enter your name here