ಕಾವು: ಮಾಡ್ನೂರು ಗ್ರಾಮದ ಚಾಕೋಟೆ ನಿವಾಸಿ ಸಾಂತಪ್ಪ ಗೌಡ ರವರ ಪತ್ನಿ ಬೊಳಿಯಮ್ಮ(85ವ.) ವಯೋಸಹಜ ಅನಾರೋಗ್ಯದಿಂದ ನ.16ರಂದು ಅಪರಾಹ್ನ ಸ್ವಗೃಹದಲ್ಲಿ ನಿಧನರಾಗಿದ್ದಾರೆ.
ಮೃತರು ಪತಿ ಸಾಂತಪ್ಪ ಗೌಡ, ಪುತ್ರರಾದ ಅರಿಯಡ್ಕ ಗ್ರಾ.ಪಂ ಸದಸ್ಯ, ಕಾವು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕ, ಬಿಜೆಪಿ ನೆ.ಮುಡ್ನೂರು ಮಹಾಶಕ್ತಿ ಕೇಂದ್ರದ ಕಾರ್ಯದರ್ಶಿಯೂ ಆಗಿರುವ ಲೋಕೇಶ್ ಚಾಕೋಟೆ, ಬೆಳ್ಳಾರೆ ವಿನಾಯಕ ಎಲೆಕ್ಟ್ರಾನಿಕ್ಸ್ ನ ಮಾಲಕ ವಿನಯ ಚಾಕೋಟೆ, ಪುತ್ರಿ ಅನಿತಾ, ಸೊಸೆಯಂದಿರಾದ ಚಂಚಲಾ, ಸೀಮಾ, ಮೊಮ್ಮಕ್ಕಳು ಮತ್ತು ಕುಟುಂಬಸ್ಥರನ್ನು ಅಗಲಿದ್ದಾರೆ.
