ಕಾವು ವಲಯದ ಕಾರ್ಯ ಎಲ್ಲಾ ವಲಯಗಳಿಗೂ ಮಾದರಿ-ಸುಧೀಂದ್ರ ಕುದ್ದಣ್ಣಾಯ
ಪುತ್ತೂರು: ಮೊಬೈಲ್ ಫೋನ್ ಅತಿಯಾದ ಬಳಕೆಯಿಂದಾಗಿ ಎಲ್ಲರಲ್ಲೂ ಉದಾಸೀನತೆ ಮನೋಭಾವ ಮೂಡುತ್ತಿದೆ. ಇದು ಕೇವಲ ಹಿರಿಯರಿಗಲ್ಲ ಮಕ್ಕಳ ಮೇಲೂ ಪರಿಣಾಮ ಬೀರುತ್ತಿದೆ. ಆದರೆ ಶಿವಳ್ಳಿ ಸಂಪದ ಕಾವು ವಲಯ ಹಮ್ಮಿಕೊಂಡ ಕಾರ್ಯಚಟುವಟಿಕೆ ಇತರ ವಲಯಗಳಿಗೆ ಮಾದರಿಯಾಗಿದೆ ಎಂದು ಶಿವಳ್ಳಿ ಸಂಪದ ಪುತ್ತೂರು ಇದರ ಅಧ್ಯಕ್ಷ ಸುಧೀಂದ್ರ ಕುದ್ದಣ್ಣಾಯ ಹೇಳಿದರು.

ಶಿವಳ್ಳಿ ಸಂಪದ ಕಾವು ವಲಯದ ವತಿಯಿಂದ ನ.16 ರಂದು ಕಾವು ಮುಳಿಪಡ್ಲು ಹರೀಶ ಕುಂಜತ್ತಾಯರ ಮನೆಯಲ್ಲಿ ನಡೆದ ಮಕ್ಕಳ ದಿನಾಚರಣೆ ಅಂಗವಾಗಿ ನಡೆದ ವಿವಿಧ ಕ್ರೀಡಾಕೂಟ ಹಾಗೂ ಸನ್ಮಾನ ಕಾರ್ಯಕ್ರಮದಲ್ಲಿ ಮುಖ್ಯ ಅಥಿತಿಗಳಾಗಿ ಅವರು ಮಾತನಾಡಿದರು. ಬ್ರಾಹ್ಮಣರನ್ನು ಒಡೆಯುವ ಕೆಲಸಗಳು ಸಮಾಜದಲ್ಲಿ ನಡೆಯುತ್ತಿದೆ. ಅದಕ್ಕೆ ಶಿವಳ್ಳಿ ಸಂಪದ ಸದಾ ಸಿದ್ಧ ಇದೆ. ಅದೇ ರೀತಿ ಶಿವಳ್ಳಿ ಬ್ರಾಹ್ಮಣರಲ್ಲಿ ಆರ್ಥಿಕವಾಗಿ ಸಂಕಷ್ಟದಲ್ಲಿದ್ದವರಿಗೆ ಧನ ಸಹಾಯ ನೀಡಲಿದ್ದೇವೆ. ಅದೇ ರೀತಿ ಇದಕ್ಕೆ ಎಲ್ಲರ ಸಹಕಾರ ಅಗತ್ಯ ಎಂದರು.
ಪುತ್ತೂರು ಶಿವಳ್ಳಿ ಸಂಪದದ ಕಾರ್ಯದರ್ಶಿ ಹಾಗೂ ಅಖಿಲ ಕರ್ನಾಟಕ ಬ್ರಾಹ್ಮಣ ಪರಿಷತ್ ಸಂಚಾಲಕ ಲಕ್ಷ್ಮೀನಾರಾಯಣ ಕಡಂಬಳಿತ್ತಾಯ ಮಾತನಾಡಿ, ಸಂಘಟನೆ ಮೂಲಕ ಯುವ ಶಿವಳ್ಳಿ ಬ್ರಾಹ್ಮಣರಿಗೆ ಐ.ಎ.ಎಸ್, ಐ.ಪಿ.ಎಸ್. ಕಲಿಯುವ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡುವ ವ್ಯವಸ್ಥೆಯನ್ನು ಅಖಿಲ ಕರ್ನಾಟಕ ಬ್ರಾಹ್ಮಣ ಪರಿಷತ್ ಮೂಲಕ ನೀಡುವ ಯೋಜನೆಯಿದೆ. ಇದರ ಪ್ರಯೋಜನೆ ಪಡೆದುಕೊಳ್ಳಬೇಕು ಎಂದರು.
ಶಿವಳ್ಳಿ ಸಂಪದ ಕಾವು ವಲಯದ ನಿಕಟಪೂರ್ವ ಅಧ್ಯಕ್ಷರು ಹಾಗೂ ಹಿರಿಯರಾದ ಮುಂಡ್ಯ ಶಿವರಾಮ ಕೇಕುಣ್ಣಾಯ ದಂಪತಿಗೆ ಶಾಲು ಹೊದಿಸಿ ಅಭಿನಂದನಾ ಪತ್ರ ನೀಡಿ ಗೌರವಿಸಲಾಯಿತು. ಗೌರವ ಸ್ವೀಕರಿಸಿದ ಶಿವರಾಮ ಕೇಕುಣ್ಣಾಯ ಮಾತನಾಡಿ, ಶಿವಳ್ಳಿ ಸಂಘದ ಮೂಲಕ ಸಂಘವನ್ನು ಉಳಿಸಿ, ಬೆಳೆಸುವ ಕೆಲಸವನ್ನು ನಮ್ಮ ಮುಂದಿನ ಪೀಳಿಕೆ ನಡೆಸುವ ಜವಾಬ್ದಾರಿ ಇದೆ. ಇದಕ್ಕೆ ನಮ್ಮಂತ ಹಿರಿಯರ ಸಹಕಾರ ಹಾಗೂ ಮಾರ್ಗದರ್ಶನ ಸದಾ ಇದೆ ಎಂದು ಹೇಳಿದರು.
ಕಾವು ವಲಯ ಶಿವಳ್ಳಿ ಸಂಪದ ಅಧ್ಯಕ್ಷ ಹರೀಶ ಕುಂಜತ್ತಾಯ ಮುಳಿಪಡ್ಪು ಮಾತನಾಡಿ, ತಾಲೂಕು ಶಿವಳ್ಳಿ ಸಂಪದದ ವತಿಯಿಂದ ವಲಯವಾರು ಸಮಿತಿಗಳು ಕ್ರಿಯಾಶೀಲರನ್ನಾಗಿಸಲು ಹಲವು ಕಾರ್ಯತಂತ್ರಗಳನ್ನು ನಡೆಸುವಲ್ಲಿ ತಾಲೂಕು ಶಿವಳ್ಳಿ ಸಂಪದದ ಅಧ್ಯಕ್ಷ ಸುಧೀಂದ್ರ ಕುದ್ದಣ್ಣಾಯರ ಕೆಲಸ ಅಭಿನಂದನೀಯ ಎಂದರು. ಕಾವು ವಲಯದ ವತಿಯಿಂದ ವಾರ್ಷಿಕ ನಾಲ್ಕು ಸಭೆಗಳನ್ನು ಸೇರುವುದಾಗಿ ನಿರ್ಧರಿಸಿದ್ದೇವೆ. ಇದಕ್ಕೆ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಸಂಘಕ್ಕೆ ಶಿವಳ್ಳಿ ಬ್ರಾಹ್ಮಣರು ಶೋಶಿತರಾಗದೆ ಗುರುಕಾಣಿಕೆ ಹಾಗೂ ಮಂಗಳ ನಿಧಿಯನ್ನು ಪ್ರತಿ ಮನೆಯಿಂದಲೂ ನೀಡಲು ನಿರ್ಣಯಿಸಲಾಯಿತು. ಕಾರ್ಯಕ್ರಮದಲ್ಲಿ ಮಕ್ಕಳಿಗೆ ಹಮ್ಮಿಕೊಂಡಿದ್ದ ವಿವಿಧ ಆಟೋಟ ಸ್ಪರ್ಧಾ ವಿಜೇತರಿಗೆ ಬಹುಮಾನ ನೀಡಿ ಅಭಿನಂದಿಸಲಾಯಿತು. ಪವಿತ್ರಾ ಕೇಕುಣ್ಣಾಯ ಮುಂಡ್ಯ ಬಹುಮಾನ ವಿಜೇತ ಪಟ್ಟಿ ವಾಚಿಸಿದರು.
ವೇದಿಕೆಯಲ್ಲಿ ಗೌರವಾಧ್ಯಕ್ಷರಾದ ಸಣ್ಣದೇವ ಕುಂಜತ್ತಾಯ ಮೆಣಸಿನಕಾನ, ಶಿವಳ್ಳಿ ಸಂಪದ ಕಾವು ವಲಯದ ಪ್ರತಿನಿಧಿಯಾದ ರಂಗನಾಥ ಉಂಗ್ರುಪುಳಿತ್ತಾಯ, ಉಪಾಧ್ಯಕ್ಷರಾದ ಶಶಿಧರ ಕೇಕುಣ್ಣಾಯ ಕರ್ತಡ್ಕ, ಖಜಾಂಚಿ ಸುಬ್ರಹ್ಮಣ್ಯ ಉಂಗ್ರುಪುಳಿತ್ತಾಯ, ಪ್ರತೀಕ್ಷಾ ಉಂಗ್ರುಪುಳಿತ್ತಾಯ ಪೆರ್ನಾಜೆ, ತಾಲೂಕು ಸಂಘದ ಪ್ರತಿನಿಧಿ ರಾಮಕೃಷ್ಣ ಉಂಗ್ರುಪುಳಿತ್ತಾಯ ಪೆರ್ನಾಜೆ, ನಿಕಟಪೂರ್ವ ಕಾರ್ಯದರ್ಶಿ ವಿಶ್ವೇಶ ಕುಂಜತ್ತಾಯ ಅದಿಂಜ ಮತ್ತಿತರು ಉಪಸ್ಥಿತರಿದ್ದರು.
ಕು. ಅನಿಕ, ಆತ್ಮಿಕ ಕುಂಜತ್ತಾಯ ಪ್ರಾರ್ಥಿಸಿದರು. ಶಿವಳ್ಳಿ ಸಂಪದ ಕಾವು ವಲಯ ಕಾರ್ಯದರ್ಶಿ ರಶ್ಮಿ ಮೂಡತ್ತಾಯ ನನ್ಯ ವರದಿ ಹಾಗೂ ಲೆಕ್ಕ ಪತ್ರಮಂಡಸಿ ವಂದಿಸಿದರು. ರಮ್ಯ ಕುಂಜತ್ತಾಯ ಮುಳಿಪಡ್ಪು ಸ್ವಾಗತಿಸಿದರು. ಸುಪ್ರೀತಾ ಯಡಪಡಿತ್ತಾಯ ಕಾರ್ಯಕ್ರಮ ನಿರೂಪಿಸಿದರು. ಶಿವಳ್ಳಿ ಸಂಪದದ ಸದಸ್ಯರಾದ ಮಣಿಕ್ಕರ ವಿಷ್ಣುಮೂರ್ತಿ ಕುಂಜತ್ತಾಯ ಹಾಗೂ ಈಶ್ವರಮಂಗಲ ಸುಮತಿ ಉಡುಪ ಅವರ ಅಗಲುವಿಕೆಗೆ ಮೌನ ಪ್ರಾರ್ಥನೆಯ ಮೂಲಕ ಶ್ರದ್ದಾಂಜಲಿ ಅರ್ಪಿಸಲಾಯಿತು.