ಪುತ್ತೂರು: ನುಳಿಯಾಲು ತರವಾಡಿನಲ್ಲಿ ನ. 16 ರಂದು ಸಂಕ್ರಾಂತಿಯಂದು ಸಾಮೂಹಿಕ ಪ್ರಾರ್ಥನೆ ನಡೆಯಿತು. ಪ್ರಥಮವಾಗಿ ಕುಟುಂಬಸ್ಥರು ಮತ್ತು ಬಂಧುಗಳಿಂದ ಭಜನಾ ಕಾರ್ಯಕ್ರಮವನ್ನು ನಡೆಸಿದರು. ಬಳಿಕ ಸಾಮೂಹಿಕ ಪ್ರಾರ್ಥನೆ ನೆರವೇರಿಸಲಾಯಿತು.
ನಂತರ ಟ್ರಸ್ಟ್ ಸದಸ್ಯರ ಸಮ್ಮುಖದಲ್ಲಿ ನಡೆದ ಕುಟುಂಬದ ಸಭಾ ಕಾರ್ಯಕ್ರಮದಲ್ಲಿ ನುಳಿಯಾಲು ಕುಟುಂಬದ ಸದಸ್ಯ ಯತೀಶ್ ರೈ ಚೆಲ್ಯಡ್ಕ ಇವರ ಪತ್ನಿ ಪೂರ್ಣಿಮಾ ಯತೀಶ್ ರೈ ಅವರಿಗೆ ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರರಾಗಿರುವುದಕ್ಕೆ ಸ ಸನ್ಮಾನಿಸಲಾಯಿತು.

ಅಮೃತ ಕುಮಾರ್ ರೈ ಪ್ರಾಸ್ತಾವಿಕವಾಗಿ ಮಾತನಾಡಿದರು. ನಾಗಕಿರಣ ಶೆಟ್ಟಿ ಸನ್ಮಾನ ಪತ್ರ ವಾಚಿಸಿದರು.ಪುರಂದರ ರೈ ಮಿತ್ರಂಪಾಡಿ ಶುಭಹಾರೈಸಿದರು.ಕುಟುಂಬದ ಯಜಮಾನ ಜಗನ್ನಾಥ ರೈ, ದಿವಾಕರ ರೈ, ಜಾಲ್ಸೂರು ಕುಸುಮ ಎಸ್. ಶೆಟ್ಟಿ, ರಾಮಣ್ಣ ರೈ, ಶ್ರೀನಿವಾಸ್ ರೈ ಹಾಗೂ ಮಂಜುನಾಥ ರೈ ಸೇರಿಕೊಂಡು ಕುಟುಂಬಸ್ಥರ ಉಪಸ್ಥಿತರಿದ್ದರು.
ಪೂರ್ಣಿಮಾ ಯತೀಶ್ ರೈಯವರು ಸನ್ಮಾನ ಸ್ವೀಕರಿಸಿ, ಕೃತಜ್ಞತೆ ಸಲ್ಲಿಸಿದರು.