ಅಖಿಲ ಭಾರತೀಯ ವಿಜ್ಞಾನ ಮೇಳದಲ್ಲಿ ಪ್ರಿಯದರ್ಶಿನಿಯ ವಿದ್ಯಾರ್ಥಿ ಪಿ.ಎಂ ಹೃಷಿಕೇಶ್ ಭಾಗಿ

0

ಬೆಟ್ಟಂಪಾಡಿ: ವಿದ್ಯಾ ಭಾರತಿ ಅಖಿಲ ಭಾರತೀಯ ಶಿಕ್ಷಾ ಸಂಸ್ಥಾನ ಇದರ ಅಖಿಲ ಭಾರತೀಯ ವಿಜ್ಞಾನ ಮೇಳವು ಉತ್ತರ ಪ್ರದೇಶದ ಮೀರತ್ ನಲ್ಲಿ ನವೆಂಬರ್ 13 ರಿಂದ 15ರವರೆಗೆ ನಡೆದಿದ್ದು, ಬೆಟ್ಟಂಪಾಡಿ ಪ್ರಿಯದರ್ಶಿನಿ ವಿದ್ಯಾಸಂಸ್ಥೆಯ ಎಂಟನೇ ತರಗತಿ ವಿದ್ಯಾರ್ಥಿ ಪಿ.ಎಂ ಹೃಷಿಕೇಶ್ (ವೇ.ಮೂ. ದಿನೇಶ್ ಮರಡಿತ್ತಾಯ ಮತ್ತು ಶ್ರೀಮತಿ ಸಂಧ್ಯಾ ಮರಡಿತ್ತಾಯ ದಂಪತಿ ಪುತ್ರ)ಇವರು ಸೆನ್ಸಾರ್ ಆಧಾರಿತ ಮಾದರಿಯಲ್ಲಿ ಭಾಗವಹಿಸಿರುತ್ತಾರೆ.


ಕರ್ನಾಟಕ ರಾಜ್ಯದಿಂದ ಈ ವಿಷಯದಲ್ಲಿ ಭಾಗವಹಿಸಿದ ಏಕೈಕ ವಿದ್ಯಾರ್ಥಿಯಾದ ಇವರು ಉತ್ತಮವಾದ ಮಾದರಿಯನ್ನು ಪ್ರದರ್ಶಿಸಿ ಗ್ರಾಮೀಣ ವಿದ್ಯಾಸಂಸ್ಥೆಯಾದ ಪ್ರಿಯದರ್ಶಿನಿಯ ಹೆಸರನ್ನು ರಾಷ್ಟ್ರಮಟ್ಟಕ್ಕೆ ಕೊಂಡೊಯ್ದಿದ್ದಾರೆ. ಇವರೊಂದಿಗೆ ಪ್ರಿಯದರ್ಶಿನಿ ವಿದ್ಯಾಸಂಸ್ಥೆಯ ಚಿತ್ರಕಲಾ ಶಿಕ್ಷಕ ರಂಜಿತ್ ಕೆ.ಎಂ. ಮೇಳದಲ್ಲಿ ಪಾಲ್ಗೊಂಡಿದ್ದಾರೆ.

LEAVE A REPLY

Please enter your comment!
Please enter your name here