ಪುತ್ತೂರು : ಬೆಂಗಳೂರಿನ ಥಣಿಸಂದ್ರ ರಾಷ್ಟ್ರೋತ್ಥಾನ ವಿದ್ಯಾಕೇಂದ್ರದಲ್ಲಿ ನವೆಂಬರ್ 15ರಂದು ನಡೆದ ವಿದ್ಯಾಭಾರತಿ ರಾಷ್ಟ್ರಮಟ್ಟದ ಈಜು ಸ್ಪರ್ಧೆಯಲ್ಲಿ, ವಿವೇಕಾನಂದ ಸೆಂಟ್ರಲ್ ಸ್ಕೂಲ್ ನ 9ನೇ ತರಗತಿಯ ವಿದ್ಯಾರ್ಥಿನಿ ಲಾಸ್ಯ ಕಿಶನ್ ಅತ್ಯುತ್ತಮ ಸಾಧನೆಗೈದಿದ್ದಾರೆ.

14 ವರ್ಷದ ಬಾಲಕಿಯರ 50 ಮೀಟರ್ ಫ್ರೀ ಸ್ಟೈಲ್, 50 ಮೀಟರ್ ಬ್ಯಾಕ್‌ಸ್ಟೋಕ್ ಮತ್ತು 50 ಮೀಟರ್ ಬ್ರೆಸ್ಟ್‌ಸ್ಟ್ರೋಕ್ ಈಜು ಸ್ಪರ್ಧೆಗಳಲ್ಲಿ ಚಿನ್ನದ ಪದಕ ಪಡೆದು ದೆಹಲಿಯಲ್ಲಿ ನಡೆಯಲಿರುವ SGFI ಗೆ ಆಯ್ಕೆಯಾಗಿರುವರು ಎಂದು ಶಾಲಾ ಪ್ರಕಟಣೆ ತಿಳಿಸಿದೆ. ಈಕೆ ಕಿಶನ್ ಡಿ. ಪಿ ಮತ್ತು ದೀನಾ ಕಿಶನ್ ದಂಪತಿ ಪುತ್ರಿ.