ಪುತ್ತೂರು:30 ಅಕ್ಟೋಬರ್ 2025 ರಿಂದ 3 ನವೆಂಬರ್ 2025 ವರೆಗೆ ಮಂಗಳೂರು ಪಬ್ಲಿಕ್ ಶಾಲೆ, ಹಾಸನದಲ್ಲಿ ನಡೆದ ವಿದ್ಯಾಭಾರತಿ ರಾಷ್ಟ್ರೀಯ ಮಟ್ಟದ ಕ್ರೀಡಾಕೂಟದಲ್ಲಿ ಸಂಸ್ಥೆಯ ವಿದ್ಯಾರ್ಥಿಗಳು ಅಭೂತಪೂರ್ವ ಸಾಧನೆಗೈದು ಸಂಸ್ಥೆಯ ಕೀರ್ತಿಯನ್ನು ಹತ್ತೂರಲ್ಲಿ ಬೆಳಗಿಸಿದ್ದಾರೆ. ವಿದ್ಯಾರ್ಥಿಗಳಾದ ಕು. ದಿವಿಜ್ಞ(ಶ್ರೀ ಶಿವಪ್ರಸಾದ್.ಯು.ಎ ಮತ್ತು ಶ್ರೀಮತಿ ಪವಿತ್ರ ದಂಪತಿ ಪುತ್ರಿ) ಕ್ರೀಡಾಕೂಟದಲ್ಲಿ 100, 200, 400 ಮೀಟರ್ ಓಟದಲ್ಲಿ ಪ್ರಥಮ ಸ್ಥಾನದೊಂದಿಗೆ ಚಿನ್ನದ ಪದಕ ಗಳಿಸಿ ವೈಯುಕ್ತಿಕ ಚಾಂಪಿಯನ್ ಪಟ್ಟವನ್ನು ತನ್ನ ಮುಡಿಗೇರಿಸಿಕೊಂಡಿದ್ದಾರೆ.
ನಿಧಿಶ್ರೀ(ಶ್ರೀ ದೇರಣ್ಣ ಗೌಡ ಮತ್ತು ಶ್ರೀಮತಿ ಹೇಮಲತ ದಂಪತಿ ಪುತ್ರಿ) 4×100 ಮೀಟರ್ ರಿಲೇ ಪಂದ್ಯದಲ್ಲಿ ಪ್ರಥಮ ಸ್ಥಾನವನ್ನು ಪಡೆದು ಚಿನ್ನದ ಪದಕ ಪಡೆದುಕೊಂಡಿರುತ್ತಾರೆ.
ದಿವಿಜ್ಞ ಮತ್ತು ಕು.ನಿಧಿಶ್ರೀ ಇವರು ಮುಂಬರುವ ಇದೇ ಡಿಸೆಂಬರ್ 12ರಿಂದ 18ರವರೆಗೆ ಉತ್ತರ ಪ್ರದೇಶದ ಲಕ್ನೌನಲ್ಲಿ ನಡೆಯಲಿರುವ ಎಸ್.ಜಿ.ಎಫ್.ಐ ಕ್ರೀಡಾಕೂಟದಲ್ಲಿ ಭಾಗವಹಿಸಲು ಅರ್ಹತೆಯನ್ನು ಪಡೆದಿರುತ್ತಾರೆ.
ಆತ್ಮಿ.ಕೆ ಎಲ್(ಶ್ರೀ ಲಕ್ಷ್ಮಣ ಗೌಡ ಮತ್ತು ಶ್ರೀಮತಿ ಅಶ್ವಿನಿ ದಂಪತಿ ಪುತ್ರಿ) 100 ಮೀಟರ್ ಓಟದಲ್ಲಿ ದ್ವಿತೀಯ ಸ್ಥಾನವನ್ನು ಬೆಳ್ಳಿಯ ಪದಕದೊಂದಿಗೆ ಹಾಗೂ 200ಮೀಟರ್ ಓಟದಲ್ಲಿ ಕಂಚಿನ ಪದಕವನ್ನು ಗಳಿಸಿಕೊಂಡಿರುತ್ತಾರೆ. 4×100ಮೀಟರ್ ರಿಲೇಯಲ್ಲಿ ಬೆಳ್ಳಿಯ ಪದಕದೊಂದಿಗೆ ದ್ವಿತೀಯ ಸ್ಥಾನ, 200 ಮೀಟರ್ ಓಟದಲ್ಲಿ ಕಂಚಿನ ಪದಕವನ್ನು ಪಡೆದುಕೊಂಡಿರುತ್ತಾರೆ.
ವಂಶಿತ.ಎನ್(ಶ್ರೀ ವಸಂತ ಕುಮಾರ್ ಮತ್ತು ಶ್ರೀಮತಿ ಸುಜಾತ ದಂಪತಿ ಪುತ್ರಿ) ಇವರು ಉದ್ದಜಿಗಿತದಲ್ಲಿ ಕಂಚಿನ ಪದಕ ಮತ್ತು 4×100ಮೀಟರ್ ರಿಲೇಯಲ್ಲಿ ಬೆಳ್ಳಿಯ ಪದಕದೊಂದಿಗೆ ದ್ವಿತೀಯ ಸ್ಥಾನವನ್ನು ಪಡೆದಿರುತ್ತಾರೆ. 14ರ ವಯೋಮಾನದ ಬಾಲಕಿಯರ ವಿಭಾಗದಲ್ಲಿ ಕು. ಸಾನ್ವಿ ಆನಂದ್(ಶ್ರೀ ಆನಂದ್ ಮತ್ತು ಶ್ರೀಮತಿ ವಾಣಿಶ್ರೀ ದಂಪತಿ ಪುತ್ರಿ) , ಕು. ದಿಶಾ.ಬಿ (ಶ್ರೀ ಪುರುಷೋತ್ತಮ ಮತ್ತು ಶ್ರೀಮತಿ ಸವಿತಾ ದಂಪತಿ ಪುತ್ರಿ) ಇವರು 4×100ಮೀಟರ್ ರಿಲೇಯಲ್ಲಿ ಬೆಳ್ಳಿಯ ಪದಕದೊಂದಿಗೆ ದ್ವಿತೀಯ ಸ್ಥಾನವನ್ನು ಪಡೆದಿರುತ್ತಾರೆ.
17ರ ವಯೋಮಾನದ ಬಾಲಕಿಯರ ವಿಭಾಗದಲ್ಲಿ ಕು. ಕ್ಷಮಾ ಜೆ.ರೈ(ಶ್ರೀ ಜಗದೀಶ್ ರೈ ಮತ್ತು ಶ್ರೀಮತಿ ಶೋಭಾ ದಂಪತಿ ಪುತ್ರಿ), ಕು. ಶ್ರೀರಕ್ಷ.ಕೆ(ಶ್ರೀ ದೇವರಾಜ್ ಮತ್ತು ಶ್ರೀಮತಿ ವಾಣಿಶ್ರೀ ದಂಪತಿ ಪುತ್ರಿ) , ಕು. ಸಾನ್ವಿತಾ ನೆಕ್ಕರೆ(ಶ್ರೀ ಉಮೇಶ್ ನೆಕ್ಕರೆ ಮತ್ತು ಶ್ರೀಮತಿ ಕವಿತಾ ದಂಪತಿ ಪುತ್ರಿ) ಇವರು 4×400ಮೀಟರ್ ರಿಲೇಯಲ್ಲಿ ಬೆಳ್ಳಿಯ ಪದಕದೊಂದಿಗೆ ದ್ವಿತೀಯ ಸ್ಥಾನವನ್ನು ಪಡೆದಿರುತ್ತಾರೆ. ಕು. ನಿಶ್ಮ(ಶ್ರೀ ಪ್ರದೀಪ್ ಮತ್ತು ಶ್ರೀಮತಿ ಪ್ರಶಾಂತಿ ದಂಪತಿ ಪುತ್ರಿ) ಹಾಗೂ ಮಾ. ಶರ್ವಿನ್.ಸಿ (ಶ್ರೀ ಚಿತ್ರನಾಯಗಂ ಮತ್ತು ಶ್ರೀಮತಿ ಪ್ರವೀಣ ಕುಮಾರಿ ದಂಪತಿ ಪುತ್ರ) ಇವರು ದಕ್ಷಿಣ ಮಧ್ಯಕ್ಷೇತ್ರವನ್ನು ಪ್ರತಿನಿಧಿಸಿದ್ದಾರೆ ಎಂದು ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯೋಪಾಧ್ಯಾಯ ಸತೀಶ್ ಕುಮಾರ್ ರೈಯವರು ತಿಳಿಸಿರುತ್ತಾರೆ.
