ಪುತ್ತೂರು: ಮಾಡಾವಿನಿಂದ ಸುಳ್ಯಕ್ಕೆ ಹಾದು ಹೋಗುವಲ್ಲಿ ಅರಣ್ಯ ವ್ಯಾಪ್ತಿಯಲ್ಲಿರುವ ಮರಗಳನ್ನು ತೆರವು ಮಾಡುವಲ್ಲಿ ಶೀಘ್ರ ಕ್ರಮ ಕೈಗೊಳ್ಳುವಂತೆ ಶಾಸಕ ಅಶೋಕ್ ರೈ ಅವರು ಡಿಎಫ್ಒ ಆಂಟನಿ ಮರಿಯಪ್ಪ ಅವರಿಗೆ ಸೂಚನೆ ನೀಡಿದರು.
110 ಕೆ ವಿ ಲೈನ್ ಗಳು ಕಣಿಯಾರ್ ಮಲೆ ಅರಣ್ಯ ಹಾಗೂ ಸುಳ್ಯದ ಒಂದು ಕಡೆ ಅರಣ್ಯದ ಮೂಲಕ ಹಾದು ಹೋಗುತ್ತಿದೆ. ಮರಗಳ ತೆರವು ಮಾಡದ ಕಾರಣ ಲೈನ್ ಎಳೆಯಲು ಅಸಾಧ್ಯವಾಗಿದ್ದು ಈ ಕಾರಣಕ್ಕೆ ಕೆಲ ವರ್ಷದಿಂದ ಕಾಮಗಾರಿ ಪೆಂಡಿಂಗ್ ಆಗಿದೆ. ಈ ಹಿಂದೆ ಮರಗಳನ್ನು ತೆರವು ಮಾಡುವಂತೆ ಆದೇಶ ಆಗಿದ್ದರೂ ಕನಿಷ್ಟ ಮರಗಳನ್ನು ತೆರವು ಮಾಡಿ ಎಂಬ ಸೂಚನೆ ಇದ್ದ ಕಾರಣ ಮೆಸ್ಕಾಂ ಮರಗಳ ತೆರವಿಗೆ ಮುಂದಾಗಿರಲಿಲ್ಲ. ಇದೀಗ ಶಾಸಕ ಅಶೋಕ್ ರೈ ಅವರಿಗೆ ಮೆಸ್ಕಾಂ ಅಧಿಕಾರಿಗಳು ಸಮಸ್ಯೆಯ ಬಗ್ಗೆ ಮನವರಿಕೆ ಮಾಡಿದ್ದಾರೆ. ಡಿಎಫ್ ಒ ಅವರಿಗೆ ಕರೆ ಮಾಡಿದ ಶಾಸಕರು ವಿದ್ಯುತ್ ಲೈನ್ ಹಾದು ಹೋಗುವಲ್ಲಿ ಇಲಾಖೆ ಮೆಸ್ಕಾಂಗೆ ಸಹಕಾರ ನೀಡಬೇಕು. ಅರಣ್ಯ ಇಲಾಖೆಯ ಕಾರಣಕ್ಕೆ ತಡವಾಗಿದೆ ಎಂದು ತಿಳಿಸಿದ ಶಾಸಕರು ಈ ಬಗ್ಗೆ ಕ್ರಮಕೈಗೊಳ್ಳಿ ಎಂದು ಸೂಚಿಸಿದರು. ಶಾಸಕರ ಸೂಚನೆಯಂತೆ ಮರ ಕಡಿಯಲು ಇಲಾಖೆ ಮೆಸ್ಕಾಂಗೆ ಅನುಮತಿ ನೀಡಿ ನಿರ್ದೇಶಿಸಿದೆ.
