ಪುತ್ತೂರು: ಅರಿಯಡ್ಕ ವಲಯ ಕಾಂಗ್ರೆಸ್ ವತಿಯಿಂದ ನ.30ರಂದು ಕೌಡಿಚ್ಚಾರಿನಲ್ಲಿ ನಡೆಯಲಿರುವ “ಅರಿಯಡ್ಕ ಉತ್ಸವ”ಕ್ಕೆ ಅರಿಯಡ್ಕ ವಲಯ ಕಾಂಗ್ರೆಸ್ನಿಂದ ಶಾಸಕ ಅಶೋಕ್ ಕುಮಾರ್ ರೈ ಅವರಿಗೆ ಆಮಂತ್ರಣ ಪತ್ರ ನೀಡಿ ಆಹ್ವಾನಿಸಲಾಯಿತು. ಅರಿಯಡ್ಕ ವಲಯ ಕಾಂಗ್ರೆಸ್ ಅಧ್ಯಕ್ಷ ಇಕ್ಬಾಲ್ ಹುಸೇನ್ ಕೌಡಿಚ್ಚಾರ್ ಹಾಗೂ ಅರಿಯಡ್ಕ ಬೂತ್ ನಂಬರ್ 181ರ ಅಧ್ಯಕ್ಷ ಚಂದ್ರಶೇಖರ ಮಣಿಯಾಣಿ ಕುರಿಂಜ ಅವರು ಶಾಸಕರನ್ನು ಹೂಗುಚ್ಛದೊಂದಿಗೆ ಆಮಂತ್ರಣ ಪತ್ರ ನೀಡಿ ಆಹ್ವಾನಿಸಿದರು.
